ಪುಟ:Aayurvedasaara Prathama Bhaaga.djvu/೧೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


- 64 -

139. ಕಣ್ಣು ಗುಡ್ಡೆಗಳು (ಗುಳ್ಳೆಗಳು) ಹಣೆಯ ಕೆಳಗಿರುವ ಎರಡು ಚಿಕ್ಕ ಗುಹೆಯ ಹಾಗಿನ ಎಲುಬಿನ ಗುಣಿಗಳಲ್ಲಿ ಇರುತ್ತವೆ  ಅವುಗಳು ಎದುರುಭಾಗದಲ್ಲಿ ರೆಪ್ಪೆಗಳಿಂದಲೂ, ಮಿಕ್ಕ ಎಲ್ಲಾ ಕಡೆಗಳಲ್ಲಿಯೂ ಎಲುಬಿನ ಆವರಣಗಳಿಂದಲೂ, ರಕ್ಷಿತವಾಗಿವೆ.
  ನೇತ್ರನರವು ಗುಡ್ಡೆಯ ಹಿಂಬದಿ ತೊಟ್ಟಿನ ಹಾಗಿದ್ದು, ಮದುಳಿಗೆ ಕಪಾಲದ ಒಂದು ತೂತಿನಿಂದ ಕೂಡುತ್ತದೆ. ಕಣ್ಣು ತೆರೆಯುವದು ಮೇಲಿನ ರೆಪ್ಪೆ ಎತ್ತುವದರಿಂದಾಗುತ್ತದೆ. ರೆಪ್ಪೆಯ ಒಳಬದಿಯ ಪರೆಯೇ ಗುಡ್ಡೆಯ ಎದುರುಭಾಗವನ್ನು ತೆಳ್ಳಗಿನ ಪರೆಯಾಗಿ ಮುಚ್ಚಿರು ತ್ತದೆ. ಕಣ್ಣುಗುಡ್ಡೆಯನ್ನು ಹೊರಕ್ಕೂ, ಒಳಕ್ಕೂ, ಮೇಲಕ್ಕೂ ಕೆಳಕ್ಕೂ, ತಿರುಗಿಸುವ ಹಾಗೆ 4 ನೆಟ್ಟಗಾದ ಮಾಂಸಖಂಡಗಳು ಗುಡ್ಡೆಯ ಹಿಂಬದಿಯಿಂದ ಎದುರುಬದಿ ವರೆಗೆ ವ್ಯಾಪಿಸಿಕೊಂಡಿರುತ್ತವೆ. ಬೇರೆ ಎರಡು ಮಾಂಸಖಂಡಗಳು ಗುಡ್ಡೆಯ ಪಕ್ಕಗಳಲ್ಲಿರುತ್ತವೆ. ಕಣ್ಣೀರಿನ ಗೋಳವು ಕಣ್ಣಬೇಳೆಯ ಹೊರಕೊನೆಯ (ಅಪಾಂಗ) ಪಕ್ಕದಲ್ಲಿ ಇರುತ್ತದೆ. ಈ ಗೋಳದಿಂದ ಹೊರಟ ನೀರು ಕಣ್ಣ ಬೇಳೆಯನ್ನು ನೆನೆಸಿ ಅದರ ಒಳಕೊನೆ (ಕನೀನಕ) ಯಲ್ಲಿ ಒಂದು ನಾಳದೊಳಗೆ ಸೇರುತ್ತದೆ. ಈ ನಾಳವು ಪ್ರತಿ ರೆಪ್ಪೆಗೆ ಒಂದರಂತೆ ಇರುತ್ತದೆ. ಮೇಲಿನ ಮತ್ತು ಕೆಳಗಿನ 2 ರೆಪ್ಪೆಗಳಿಗೆ ಸಂಬಂಧಪಟ್ಟ 2 ನಾಳಗಳು ಒಟ್ಟುಕೂಡಿ ಒಂದೇ ನಾಳವಾಗಿ ಮೂಗಿನೊಳಗೆ ಹೋಗುತ್ತದೆ  ಈ ನೀರಿಗಿಂತ ದಪ್ಪವಾದ ದ್ರವವು ರೆಪ್ಪೆ ಯೊಳಗೆ ಇರುವ ಬೇರೆ ಚಿಕ್ಕಚಿಕ್ಕ ಚೀಲಗಳಿಂದ ಹೊರಟುಬರುತ್ತದೆ. ಕಣ್ಣುಗುಡ್ಡೆಯ ಎದುರಿನ 1/6ಭಾಗವು ಒಳಗಿನ 5/6 ಭಾಗದ ಗೋಲದ ಲೈನ್ ಬಿಟ್ಟು ಹೊರಗೆ ವಿಸ್ತರಿಸಿರು ವದು. ಈ ಗುಡ್ಡೆಗೆ ಎರಡು ಪರೆಗಳು ಆವರಣಗಳಾಗಿವ, ಹೊರಗಿನದು ಬಿಳೇದು, ಒಳಗಿ ನದು ಕರೇದು, ಈ ಕರೇ ಆವರಣವು ಎದುರುಭಾಗದಲ್ಲಿ ಬಿಳೇ ಆವರಣವನ್ನು ಬಿಟ್ಟು ಒಂದು ಪರದೆಯ ಹಾಗೆ ಅಡ್ಡ ನಿಂತಿರುವದು. ಹೊರಗಿನ ಬಿಳೇ ಆವರಣವು ಕನ್ನಡಿಯಂತೆ ಸ್ವಚ್ಚವಾಗಿದ್ದರೂ, ಅದರ ಒಳಭಾಗದಲ್ಲಿಯ ಕಪ್ಪು ಪರದೆಯ ದೆಸೆಯಿಂದ ಆ ಅಂಶವು ಕಪ್ಪಾಗಿ ಹೊರಗೆ ಸಹ ಕಾಣುವದು. ಇದೇ ಕೃಷ್ಣ ಮಂಡಲ ಈ ಕೃಷ್ಣಮಂಡಲದ ಮಧ್ಯದ ರಂಧ್ರವೇ ದೃಷ್ಟಿಮಂಡಲ. ದೃಷ್ಟಿ ಮಂಡಲದ ಹಿಂಬದಿ ಕೃಷ್ಣ ಮಂಡಲಕ್ಕೆ ತಾಗಿ ಎರಡು ಪಾರ್ಶ್ವವೂ ಸ್ವಲ್ಪ ಗೋಲಾಗಿರುವ ಒಂದು ಕನ್ನಡಿಯ ಹಾಗಿನ ಮಣಿ ಇರುತ್ತದೆ. ಈ ಕಪ್ಪಾದ ಮಣಿಯ ಹಿಂದಿನ ಪಾರ್ಶ್ವವು ನಿರ್ಮಲವಾದ ಮತ್ತು ದಪ್ಪವಾದ ದ್ರವಪದಾರ್ಧ ದಿಂದ ತುಂಬಿರುತ್ತದೆ ಹಾಗೆಯೇ ಕೃಷ್ಣಮಂಡಲಕ್ಕೂ ಎದುರಿನ ಶ್ವೇತಮಂಡಲಕ್ಕೂ ಮಧ್ಯ ಕೂಡ ನೀರಿನ ಹಾಗೆ ತೆಳ್ಳಗಾದ ದ್ರವಪದಾರ್ಧದಿಂದ ತುಂಬಿರುತ್ತದೆ. ಕರೇ ಆವರಣದ ಒಳ ಅಂಚಿನಲ್ಲಿ ಕೃಷ್ಣಮಣಿಯ ಹಿಂಭಾಗದ ಗುಡ್ಡೆಯ ಅಂಶಕ್ಕೆ, ಅಂದರೆ 2/3 ಅಂಶಕ್ಕೆ, ನರಗಳಿಂದ ತುಂಬಿದ ಇನ್ನೊಂದು ಆವರಣ ಇರುತ್ತದೆ. ಈ ಆವರಣದ ಮಧ್ಯ ದೃಷ್ಟಿಮಂಡಲಕ್ಕೆ ಎದು ರಾಗಿ ನರದ ಮೂಲವಿರುತ್ತದೆ ಹೊರಗಿನ ವಸ್ತುವಿನ ಮೇಲೆ ಬಿದ್ದ ಬೆಳಕು ಕಣ್ಣಿನೊಳಗಿರುವ ಕೃಷ್ಣಮಣಿಯನ್ನು ದಾಟಿಹೋಗಿ, ಆ ವಸ್ತುವಿನ ಪ್ರತಿಬಿಂಬವು ಆ ನರದ ಮಂಡಲದ ಮೇಲೆ ಉಂಟಾದರೇನೇ, ಆ ವಸ್ತುವು ನಮಗೆ ಕಾಣುವದು. ಹಾಗೆ ಆಗಬೇಕಾದರೆ, ಕೃಷ್ಣಮಣಿಯ ಶಕ್ತಿಗೆತಕ್ಕಷ್ಟೇ ದೂರದಲ್ಲಿ ವಸ್ತು ಇರಬೇಕು. ಈ ಭೇದದಿಂದಲೇ ಸಮಿಪದೃಷ್ಟಿ,ದೂರದೃಷ್ಟಿ, ಎಂಬ ಕೊರತೆಗಳು ಉಂಟಾಗುವದಾಗಿರುತ್ತದೆ. ಸಾಧಾರಣವಾಗಿ 5-6 ಇಂಚಿಗೂ ಹತ್ತರ ವಿರುವ ವಸ್ತುವು ಸರಿಯಾಗಿ ದೃಷ್ಟಿಗೆ ಕಾಣದು. ಆದರೆ ಸಮೀಪದೃಷ್ಟಿಯವಗೆ ಕಾಣುವದು.

M