ಪುಟ:Aayurvedasaara Prathama Bhaaga.djvu/೧೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಆ. 111 - 72 - ಪೈಚ್ಛಿಲ್ಯಾದ್ಗೌರವಾದ್ದ್ರವ್ಯಂ ರುದ್ದಾ ರಸವಹಾಃ ಸಿರಾಃ | ಧತ್ತೇ ಯದ್ಗೌರವಂ ತತ್ಸ್ಯಾದಭಿಷ್ಯನ್ದಿ ಯಧಾ ದಧಿ || (ಚಿ. ಸಾ. ಸಂ. 1029-30.) * ಷರಾ 'ಸೂಕ್ಷ್ಮಛೇದಿ ಮಹಾವಹಮ್' ಎಂಬ ಪಾರ ತಪ್ಪಾಗಿರಬೇಕು ಧಾ ಪ್ರ ಪುಟ 76 ನೋಡು 1. ದೀಪನ= ಆಮವನ್ನು ಪಾಕಮಾಡದೆ ಅಗ್ನಿಯನ್ನುಂಟುಮಾಡುವಂಧಾದ್ದು. ಉದಾ ಸೋಪಿ. 2. ಪಾಚನ= ಅಗ್ನಿಯನ್ನುಂಟುಮಾಡದೆ ಆಮವನ್ನು ಪಾಕಮಾಡತಕ್ಕದ್ದು. ಉದಾ. ನಾಗಕೇಸರ. 3. ದೀಪನಪಾಚನ= ಆಮವನ್ನು ಪಾಕಮಾಡಿ ಅಗ್ನಿಯನ್ನುಂಟುಮಾಡತಕ್ಕದ್ದು. ಉದಾ: ಚಿತ್ರಮೂಲ. 4. ಶಮನ= ಶೋಧನೆ ಮಾಡದೆಯೂ, ಸಮವಾಗಿರುವ ದೋಷಗಳಿಗೆ ವಿರೋಧಮಾಡದೆಯೂ, ಉದ್ರೇಕವಾದ ದೋಷಗಳನ್ನು ಸಮಮಾಡುವಂಧಾದ್ದು. ಉದಾ ಅಮೃತಬಳ್ಳಿ. 5. ಅನುಲೋಮನ= ಮಲಗಳನ್ನು ಪಾಕಮಾಡಿ, ಕಟ್ಟು ಒಡೆದು, ಕೆಳಗೆ ಒಯ್ಯು ವಂಧಾದ್ದು. ಉದಾ ಅಣಿಲೆಕಾಯಿ 6. ಸ್ರಂಸನ= ಪಾಕವಾಗತಕ್ಕದ್ದನ್ನು ಪಚನಮಾಡದೇನೇ ಹೊಟ್ಟೆಯೊಳಗೆ ಹಿಡಕೊಂಡ ಮಲ ಮುಂತಾದ್ದನ್ನು ಕೆಳಗೆ ಒಯ್ಯತಕ್ಕದ್ದು. ಉದಾ ಕಕ್ಕೆಮರ (ಕೊಂದೆ) 7. ಭೇದನ= ಮಲ ಮುಂತಾದ್ದನ್ನು ಶಿಧಿಲವಾದದ್ದಾಗಲೀ, ದೋಷಗಳಿಂದ ಬದ್ಧವಾಗಿ ಗಟ್ಟಿಯಾದದ್ದಾಗಲಿ, ಒಡೆದು ಕೆಳಗೆ ಬೀಳಿಸುವಂಧಾದ್ದು. ಉದಾ ಕಟುಕರೋಹಿಣಿ. 8. ರೇಚನ= ಮಲಾದಿಗಳನ್ನು, ಪಕ್ವವಾಗಿರಲಿ ಅಥವಾ ಪಕ್ವವಾಗದೆ ಇರಲಿ, ನೀರು ಮಾಡಿ ಕೆಳಗೆ ಸುರಿಸುವಂಧಾದ್ದು. ಉದಾ ತಿಗಡೆ 9. ವಮನ = ಪಕ್ವವಾಗದ ಪಿತ್ತ ಕೂಡಿದ ಕಫವನ್ನು ಬಲಾತ್ಕಾರದಿಂದ ಮೇಲಕ್ಕೆ ಒಯ್ಯುವಂಧಾದ್ದು. ಉದಾ ಮಂಗಾರೆಕಾಯಿ (ಮಾಯಿಫಲ). 10. ಸಂಶೋಧನ= ದೇಹದಲ್ಲಿರುವ ಮಲಸಂಗ್ರಹವನ್ನು ಸ್ಧನದಿಂದ ಹೊರಡಿಸಿ, ಮೇಲಕ್ಕಾಗಲಿ ಕೆಳಕ್ಕಾಗಲಿ ಒಯ್ಯುವಂಧಾದ್ದು. ಉದಾ ದೇವದಾಳಿಫಲ. 11. ಛೇದನ= ಹಿಡಕೊಂಡಿದ್ದ ಕಫಾದಿ ದೋಷಗಳನ್ನು ಬಲಾತ್ಕಾರದಿಂದ ಕೀಳತಕ್ಕದ್ದು. ಉದಾ. ಕ್ಷಾರ ಮೆಣಸುಗಳು ಮತ್ತು ಶಿಲಾಜತು 12. ಲೇಖನ= ದೇಹದ ಮಲಗಳನ್ನಾಗಲಿ, ಧಾತುಗಳನ್ನಾಗಲಿ, ಒಣಗಿಸಿ ಕೃಶಮಾಡ (ಬತ್ತಿಸ)ತಕ್ಕದ್ದು. ಉದಾ ಜೇನು, ಬಿಸಿನೀರು, ಬಜೆ, ಇಂದ್ರಜೀವಿ. 13. ಗ್ರಾಹಿ= ದೀಪನ ಪಾಚನ ಗುಣಗಳುಳ್ಳದ್ದಾಗಿ, ಉಷ್ಣತೆಯಿಂದ ದ್ರವವನ್ನು ಒಣ ಗಿಸತಕ್ಕದ್ದು. ಉದಾ ಒಣಶುಂಠಿ, ಜೀರಿಗೆ ಮತ್ತು ಗಜಹಿಪ್ಪಲಿ 14. ಸ್ತಂಭನ= ರೂಕ್ಷತೆ, ಶೈತ್ಯ, ಚೊಗರು, ಲಘುಪಾಕ, ಈ ಗುಣಗಳಿಂದ (ಪ್ರತಿ ಲೋಮವಾಯುವನ್ನುಂಟುಮಾಡಿ ಮಲಾದಿಗಳನ್ನು) ತಡೆಯತಕ್ಕದ್ದು. ಉದಾ. ಕೊಡಸಿಗ ಮತ್ತು ಆನೆಮುಂಗು.