ಪುಟ:Aayurvedasaara Prathama Bhaaga.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


         ಭೂತೇಜೋವಾರಿಜೈದ್ರ೯‌ವ್ಯೈಃ ಶಮಂ ಯಾತಿ ಸಮಾರಣಃ |
         ಭೂಮ್ಯಂಬುವಾಯುಜೈಃ ಪಿತ್ತಂ ಕ್ಷಿಪ್ರಮಾಪ್ನೋತಿ ನಿರ್ವೃತಿಂ ||
         ಖತೇಜೋನಿಲಜೈಃ ಶ್ಲೇಷ್ಮಾ ಶಮಮೇತಿ ಶರೀರಿಣಾಂ |
ದೋಷಗಳ
         ವಿಯತ್ಪವನಜಾತಾಭ್ಯಾಂ ವೃದ್ಧಿಮಾಪ್ನೋತಿ ಮಾರುತಃ ||
ಕೋಪನಕ್ಕೆ
ಮತ್ತು ತಮ
         ಆಗ್ನೇಯಮೇವ ಯುದ್ದ್ರವ್ಯಂ ತೇನ ಪಿತ್ತಮುದೀಯ೯ತೇ |
ನಕ್ಕೆ ಕಾರಣ
ವಾದ ಭೂತ      ವಸುಧಾಜಲಚಾತಾಭ್ಯಾಂ ಬಲಾಸಃ ಪರಿವರ್ಧತೇ ||
 ಗಳು
         ಏವಮೇತದ್ಗುಣಾಧಿಕ್ಯಂ ದ್ರವ್ಯೇ ದ್ರವ್ಯೇ ವಿನಿಶ್ಚಿತಂ |
         ದ್ವಿಶೋ ವಾ ಬಹುಶೋ ವ್ಯಾಪಿ ಜ್ಞಾತ್ವಾ ದೋಷೇವಚಾರಯೇತ್ ||
                        (ಸು. 153.)
   ಪೃಧ್ವೀ, ಅಗ್ನಿ, ಜಲ, ಇವುಗಳ ಗುಣಗಳು ಹೆಚ್ಚಾಗುಳ್ಳ ದ್ರವ್ಯಗಳಿಂದ ವಾಯುವು ಶಮನವಾಗುತ್ತದೆ. ಪೃಧ್ವೀ, ಜಲ, ವಾಯು ಇವುಗಳ ಗುಣಗಳ ಹೆಚ್ಚಾಗುಳ್ಳ ಪದಾರ್ಧ ಗಳಿಂದ ಪಿತ್ತವು ಬೇಗನೇ ನಿವೃತ್ತಿ ಹೊಂದುತ್ತದೆ. ಆಕಾಶ, ಅಗ್ನಿ, ವಾಯು ಇವುಗಳ ಗುಣ ಗಳು ಹೆಚ್ಚಾಗುಳ್ಳ ಪದಾರ್ಧಗಳಿಂದ ಮನುಷ್ಯರ ಕಫವು ಶಮನ ಹೊಂದುತ್ತದೆ. ಆಕಾಶ ಮತ್ತು ವಾಯು ಇವುಗಳ ಗುಣಗಳು ಹೆಚ್ಚಾಗುಳ್ಳ ಪದಾರ್ಧಳಿಂದ ವಾಯು ವೃದ್ಧಿಯಾಗು ತ್ತದೆ. ಅಗ್ನಿಗುಣ ಹೆಚ್ಚುಳ್ಳ ಪದಾರ್ಧದಿಂದ ಪಿತ್ತವು ಕೆದರುತ್ತದೆ ಪೃಧ್ವೀ, ಜಲ ಇವುಗಳ ಗುಣಗಳು ಹೆಚ್ಚಾಗುಳ್ಳ ಪದಾರ್ಧಗಳಿಂದ ಕಫವು ವೃದ್ದಿಯಾಗುತ್ತದೆ. ಈ ಪ್ರಕಾರ ಆಯಾ ದ್ರವ್ಯಗಳಲ್ಲಿ, ನಿಶ್ಚಯಿಸಲ್ಪಟ್ಟ ಗುಣಾಧಿಕ್ಯವನ್ನು ತಿಳಿದು ದೋಷಕ್ಕೆ ತಕ್ಕ ಹಾಗೆ ಎರಡು ಅಧವಾ ಹೆಚ್ಚು ಪದಾರ್ಧಗಳನ್ನು ಕೂಡಿಸಿಕೊಳ್ಳಬೇಕು.
 ಷರಾ ಶ್ಲೋಕದ ಅಂತ್ಯಭಾಗದಲ್ಲಿ 'ದೋಷೇಷು ಚಾಚರೇತ್' ಎಂತ ಪಾರ ಇಟ್ಟು ರೋಗಗಳಲ್ಲಿ ಎರಡು ಅಥವಾ ಹೆಚ್ಚು ದೋಷಗಳಿಗೆ ಆಚರಿಸಬೇಕು ಎಂಬ ಅರ್ಧ ೩ ಸಂ ವ್ಯಾಖ್ಯಾನದಲ್ಲಿ ಹೇಳಲ್ಪಟ್ಟಿದೆ

18. ತತ್ರ ಯ ಇಮೇ ಗುಣಾ ವೀರ್ಯಸಂಜ್ಞಕಾಃ ಶೀತೋಷ್ಣ -ಸ್ನಿಗ್ದ-ರೂಕ್ಷ-

         ಮೃದು-ತೀಕೃ-ಪಿಚ್ಫಿಲ-ವಿಶದಾಸ್ತೇಷಾಂ ತೀಕ್ಷೋಷ್ಣಾವಾಗ್ನೇಯೌ |            ದ್ರವ್ಯಗಳ

ಅಷ್ಟವೀರ್ಯ ಶೀತಪಿಚ್ಫಿಲಾವಂಬುಗುಣಭೂಯಿಷ್ಠೌ | ಪೃಧಿವ್ಯಂಬುಗುಣಭೂಯಿಷ್ಠಃ ಗಳು ಮತ್ತು ಸ್ನೇಹಃ | ತೋಯಾಕಾಶಗುಣಭೂಯಿಷ್ಠಂ ಮೃದುತ್ವಂ | ವಾಯು ಅವುಗಳ ಅಕ್ಯಗಳು ಗುಣಭೂಯಿಷ್ಠಂ ರೌಕ್ಷ್ಯಂ | ಕ್ಷಿತಿಸಮಿರಣಭೂಯಿಷ್ಠಂ ವೈಶ

         ದ್ಯಂ | (ಸು. 153-54.)
     ವೀರ್ಯ ಎಂಬ ಗುಣಗಳಾದ ಶೀತ, ಉಷ್ಣ, ಸ್ನಿಗ್ದ, ರೂಕ್ಷ, ಮೃದು, ತೀಕ್ಷ, ಪಿಚ್ಫಿಲ, ವಿಶದ ಎಂಬವುಗಳಲ್ಲಿ, ತೀಕ್ಷ ಮತ್ತು ಉಷ್ಣ ಅಗ್ನಿಸಂಬಂಧವಾದವು, ಶೀತ ಮತ್ತು ಪಿಚ್ಛಿಲ, ಜಲಗುಣ ಹೆಚ್ಚಾಗಿರುವವು; ಸ್ನೇಹವು, ಪೃಧಿವೀ ಮತ್ತು ಜಲಗುಣಗಳು ಹೆಚ್ಚಾಗುಳ್ಳದ್ದು, ಮೃದುತ್ವವು, ಜಲ ಮತ್ತು ಆಕಾಶಗುಣಗಳು ಹೆಚ್ಚಾಗುಳ್ಳದ್ದು; ರೌಕ್ಷ್ಯವು ವಾಯುಗುಣ ಹೆಚ್ಚಾಗುಳ್ಳದ್ದು; ಮತ್ತು ವಿಶದಗುಣವ್ರ ಪೃಧಿವೀ ಮತ್ತು ವಾಯುಗುಣಗಳು ಹೆಚ್ಚಾ ಗುಳ್ಳದ್ದು.