ಪುಟ:Aayurvedasaara Prathama Bhaaga.djvu/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಅ, V - 118 - ಪಿತ್ತಪ್ರಕೋಪ ಮಾಡತಕ್ಕಂಧವುಗಳಿಂದಲೂ, ಹೆಚ್ಚಾಗಿ ಸೇವಿಸಲ್ಪಟ್ಟ ದ್ರವಸ್ನಿಗ್ಧಗುರು ಆದ ಆಹಾರಗಳಿಂದಲೂ, ಹಗಲುನಿದ್ರೆ, ಸಿಟ್ಟು, ಬೆಂಕಿ, ಬಿಸಿಲು, ಶ್ರಮ, ಪೆಟ್ಟು, ಅಜೀರ್ಣ, ವಿರೋಧವಾದ ಮತ್ತು ಅತಿಯಾದ ಊಟ, ಇವು ಮೊದಲಾದವುಗಳಿಂದಲೂ ರಕ್ತವು ಪ್ರಕೋಪಗೊಳ್ಳುತ್ತದೆ.

35. ಯಸ್ಮಾದ್ರಕ್ತಂ ವಿನಾ ದೋಷೈರ್ನ ಕದಾಚಿತ್ಟ್ರಕುಷ್ಯತಿ ರಕ್ತಪ್ರಕೋಪಕಾಲ ತಸ್ಮಾತ್ತಸ್ಯ ಯಧಾದೋಷಂ ಕಾಲಂ ವಿದ್ಯಾತ್ಟ್ರಕೋಪಣೇ (ಸು. 85.) ರಕ್ತವು ದೋಷಗಳಿಂದ ಕೂಡಿಕೊಂಡಲ್ಲದೆ ಯಾವಾಗಲಾದರೂ ಪ್ರಕೋಪಪಡುವ ದಿಲ್ಲವಾದ್ದರಿಂದ, ಅದರ ಪ್ರಕೊಪಣಕಾಲವನ್ನು (ಕೋಪಗೊಂಡ) ಆಯಾ ದೋಷಗಳಿಂದ ತಿಳಿಯತಕ್ಕದ್ದು.

36. ತೇಷಾಮೇಭಿರಾತಂಕವಿಶೇಷೈಃ ಪ್ರಕುಪಿತಾನಾಂ ಪರ್ಯುಷಿತಕಿಣ್ವೋದಕ ಪಿಷ್ಟಸಮವಾಯ ಇವೋದ್ರಿಕ್ತಾನಾಂ ಪ್ರಸರೋ ಭವತಿ | ತೇಷಾಂ ವಾಯುರ್ಗತಿಮತ್ವಾತಾ' ಪ್ರಸರಣಹೇತುಃ ಸತ್ಯಪ್ಯಚೈತನ್ಯೇ ಸ ಹಿ ರಜೋಭೂಯಿಷ್ಟೋ ರಜಶ್ವ ಪ್ರವರ್ತಕಂ ಸರ್ವಭಾವಾನಾಂ | ಯಧಾ ಮಹಾನುದಕಸಂಚಯೋsತಿವೃದ್ಧಃ ಸೇತುದುವದಾರ್ಯಾಪರೇಡೋದ ದೋಷಗಳ ಪ್ರಸರಣ ಮತ್ತು ಸಂಯೋಗ ಕೇನವ್ಯಾಮಿಶ್ರಃ ಸರ್ವತಃ ಪ್ರಧಾವತ್ಯೇವಂ ದೋಷಾಃ ಕದಾಚಿದೇಕ ಶೋ ದ್ವಿಶಃ ಸಮಸ್ತಾಃ ಶೋಣಿತಸಹಿತಾ ವಾನೇಕಧಾ ಪ್ರಸರಂತಿ| ತದ್ಯಧಾ | ವಾತಃ ಪಿತ್ತ೦ ಶ್ಲೇಷ್ಮಾಶೋಣಿತಂ ವಾತಪಿತ್ತೇ ವಾತಶ್ಲೇಷ್ಮಾ ಣೌ ಪಿತ್ತಶ್ಲೇಷ್ಮಾಣೌ ವಾತಶೋಣಿತೇ ಪಿತ್ತಶೋಣಿತೇ ಶ್ಲೇಷ್ಮಶೋಣಿ ತೇ ವಾತಪಿತ್ತಶೋಣಿತಾನಿ ವಾತಶ್ಲೇಷ್ಮಶೋಣಿತಾನಿ ಪಿತ್ತಶ್ಲೇಷ್ಮೆ ಶೋಣಿತಾನಿ ವಾತಪಿತ್ತಕಫಾಃ ವಾತಪಿತ್ತಕಫಶೋಣಿತಾನೀತ್ಯೇವಂ ಪಂಚದಶಧಾ ಪ್ರಸರಂತಿ | (ಸು. 85-86 ) ಈ ವಿವಿಧವಾದ ಆತಂಕಗಳಿಂದ ಪ್ರಕೋಪಗೊಂಡ ದೋಷಗಳು, ಹಿಂದಿನ ದಿನ ಕಿಣ್ವ (ಕಳ್ಳುಮಾಡುವಲ್ಲಿ ಹುಳಿಸುವದಕ್ಕೆ ಉಪಯೋಗಿಸುವ ಬೀಜ) ದ ನೀರಿನಿಂದ ಕಲಸಿಟ್ಟ ಅಕ್ಕಿ ಹಿಟ್ಟಿನ ಮಿಶ್ರದಂತೆ, ಉಕ್ಕಿ, ವೃದ್ದಿಯಾಗಿ ಪ್ರಸರಿಸುತ್ತವೆ. ಅವುಗಳೊಳಗೆ ವಾಯುವು ಚೇತನ ವಿಲ್ಲದ್ದಾದರೂ, ಗತಿಯುಳ್ಳದ್ದಾದ್ದರಿಂದ, ಪ್ರಸರಿಸುವಿಕೆಗೆ ಹೇತು. ಯಾಕಂದರೆ ಆ ವಾಯುವು ರಜೋಗುಣದಿಂದ ತುಂಬಿದ್ದು, ಮತ್ತು ರಜಸ್ಸು ಸರ್ವ ಭಾವ(ಪದಾರ್ಧ)ಗಳನ್ನೂ ಪ್ರವರ್ತಿಸ ತಕ್ಕದ್ದಾಗಿರುತ್ತದೆ ಒಂದು ದೊಡ್ಡ ನೀರಿನ ಸಂಗ್ರಹವು ಅತಿ ವೃದ್ದಿಯಾದರೆ, ಕಟ್ಟಣವನ್ನು ಕಡಕೊಂಡು ಹೋಗಿ, ಬೇರೆ ನೀರಿನೊಂದಿಗೆ ಸೇರಿ, ಸರ್ವ ಕಡೆಗಳಲ್ಲಿಯೂ ಹ್ಯಾಗೆ ಹರಿ ದೋಡುತ್ತದೋ, ಹಾಗೆಯೇ ದೋಷಗಳು ಕೆಲವು ವೇಳೆ ಒಂದೊಂದಾಗಿ, ಎರಡೆರಡಾಗಿ, ಒಟ್ಟಾಗಿ, ಅಧವಾ ರಕ್ತಸಹಿತವಾಗಿ, ಅನೇಕ ಪ್ರಕಾರವಾಗಿ ಪ್ರಸರಿಸುತ್ತವೆ. ಹ್ಯಾಗಂದರೆ, ವಾತ, ಪಿತ್ತ, ಕಫ, ರಕ್ತಗಳು (ಒಂದೊಂದಾಗಿ), ವಾತಪಿತ್ತ, ವಾತಕಫ, ಪಿತ್ತಕಫ, ವಾತ ಸಂಯೋಗ