ಪುಟ:Aayurvedasaara Prathama Bhaaga.djvu/೨೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಆ vi

- 130 - 2. ಜನ್ಮಬಲದಿಂದ ಹುಟ್ಟಿದವು, 3. ದೋಷಬಲದಿಂದ ಹುಟ್ಟಿದವು, 4. ಸಂಘಾತಬಲದಿಂದ ಹುಟ್ಟಿದವು, 5. ಕಾಲಬಲದಿಂದ ಹುಟ್ಟಿದವು, 6. ದೈವಬಲದಿಂದ ಹುಟ್ಟಿದವು, 7. ಸ್ವಭಾವ ಬಲದಿಂದ ಹುಟ್ಟಿದವು, ಹೀಗೆ. ಅವುಗಳೊಳಗೆ ಆದಿಬಲದಿಂದ ಹುಟ್ಟಿದವು ಎಂಬವು ಶುಕ್ರ ಶೋಣಿತಗಳ ದೋಷಗಳೇ ಮೂಲವಾದ ಕುಷ್ಠ ರೋಗ, ಅರ್ಶಸ್ಸು (ಮೂಲವ್ಯಾಧಿ) ಮುಂತಾದವು, ಅವುಗಳು ತಾಯಿಯ ಶೋಣಿತದಿಂದ ಹುಟ್ಟಿದವು, ತಂದೆಯ ಶುಕ್ರದಿಂದ ಹುಟ್ಟಿದವು, ಎಂತ ಎರಡು ವಿಧ. ಜನ್ಮಬಲದಿಂದ ಹುಟ್ಟಿದವು ಎಂಬವು ತಾಯಿಯ ಅಹಿತಾಚರಣೆಯ ದೆಸೆಯಿಂದ ಹುಟ್ಟುವ ಪಂಗು (ಅಂಗಹೀನತೆ), ಹುಟ್ಟು ಕುರುಡ, ಹುಟ್ಟು ಕಿವುಡ, ಹುಟ್ಟು ಮೂಕ, ಮೂಗಿನಿಂದ ಮಾತಾಡುವವ, ಕುಂಟ, ಮುಂತಾದವರು, ಈ ಜಾತಿಯವು ಎರಡು ವಿಧ ರಸದಿಂದ ಉಂಟಾದವು, ಬಯಕೆಗೆ ಅಪಚಾರ ಮಾಡಿದ್ದರಿಂದ ಉಂಟಾದವು ಎಂತ. ದೋಷಬಲದಿಂದ ಹುಟ್ಟಿದವು ಎಂಬವು ಆತಂಕ (ಇತರ ರೋಗ)ದಿಂದಲೂ, ತಪ್ಪಾದ ಆಹಾರ-ಆಚಾರಗಳಿಂದಲೂ ಹುಟ್ಟಿದವು, ಇವುಗಳಲ್ಲಿ ಆಮಾಶಯದಲ್ಲಿ ಹುಟ್ಟಿದವು, ಪಕ್ವಾಶಯದಲ್ಲಿ ಹುಟ್ಟಿದವು ಎಂತ ಎರಡು ವಿಧ, ಪುನಃ ಶರೀರಕ್ಕೆ ಸಂಬಂಧಪಟ್ಟವ, ಮನಸ್ಸಿಗೆ ಸಂಬಂಧ ಪಟ್ಟವು, ಎಂತ ಎರಡು ವಿಧ, ಇವುಗಳೆಲ್ಲಾ (ಆದಿಬಲ, ಜನಬಲ, ದೋಷಬಲಗಳಿಂದ ಹುಟಿದವು) ಆತ್ಮಸಂಬಂಧವಾದ ದುಃಖಗಳು ಸಂಘಾತ (ಪೆಟ್ಟಿನ ಬಲದಿಂದ ಹುಟ್ಟಿದವು, ಎಂಬವು ಬಲಹೀನನು ಬಲವಂತನೊಂದಿಗೆ ಕಾದಾಡಿ ಬರುವಂಧವು, ಅವುಗಳೊಳಗೆ ಶಸ್ತ್ರಗಳಿಂದ ಉಂಟಾದವು, ಹುಲಿ ಮೊದಲಾದವುಗಳಿಂದ ಉಂಟಾದವು ಎಂತ ಎರಡು ವಿಧ, ಇವು ಆಧಿ ಭೌತಿಕ ದುಃಖಗಳಾಗಿರುತ್ತವೆ. ಕಾಲಬಲದಿಂದ ಹುಟ್ಟಿದವು ಎಂಬವು, ಶೀತಕಾಲ, ಉಷ್ಣ ಕಾಲ, ವಾತಕಾಲ, ಮಳೆಗಾಲ ಮುಂತಾದವುಗಳ ನಿಮಿತ್ತ ಹುಟ್ಟುವಂಧವು, ಅವುಗಳಲ್ಲಿ ಎರಡು ವಿಧ. ದುಷ್ಟವಾದ ಋತುವಿನಿಂದ ಹುಟ್ಟಿದವು, ನಿಜಸ್ಥಿತಿಯ ಋತುವಿನಿಂದ ಹುಟ್ಟಿದವು. ದೇವದ್ರೋಹದ ದೆಸೆಯಿಂದ ಅಪವಾದದಿಂದುಂಟಾದವು, ಮಾಟಾದಿ ಅಧವಾ ವೇದ ಮಂತ್ರಪ್ರಭಾವದಿಂದುಂಟಾದವು, ಮತ್ತು ಪಿಶಾಚಾದಿ ಬಾಧೆಯಿಂದುಂಟಾದವು ಸಹ ದೈವ ಬಲದಿಂದ ಹೊರಟವು, ಅವುಗಳು ಸಹ ಎರಡು ವಿಧ ಸಿಡಿಲುಮಿಂಚುಗಳಿಂದುಂಟಾದವು, ಪಿಶಾಚಾದಿಗಳಿಂದುಂಟಾದವು, ಪುನಃ ಸಂಸರ್ಗ ಸಂಪರ್ಕ)ದಿಂದುಂಟಾದವು, ಆಕಸ್ಮಿಕವಾಗಿ ಉಂಟಾದವು ಎಂಬ ಎರಡು ವಿಧ. ಸ್ವಭಾವಬಲದಿಂದ ಉಂಟಾದವು ಎಂಬವು, ಹಸಿವು, ತೃಷೆ, ಮುದಿತನ, ಮೃತ್ಯು, ನಿದ್ರೆ, ಮುಂತಾದವು. ಅವು ಸಹ ಎರಡು ವಿಧ. ಕಾಲದಿಂದ ಉಂಟಾದವ, ಅಕಾಲದಿಂದ ಉಂಟಾದವು. ಅವುಗಳಲ್ಲಿ ಸಂರಕ್ಷಣೆಯಿದ್ದು ಉಂಟಾದವು, ಕಾಲದಿಂದುಂಟಾದವು, ಪರಿರಕ್ಷಣೆಯಿಲ್ಲದೆ ಉಂಟಾದವು. ಅಕಾಲದಿಂದುಂಟಾದವು. ಇವುಗಳೆಲ್ಲಾ ಆಧಿದೈವಿಕವಾದ ದುಃಖಗಳು.

ಷರಾ 'ಅವಿಶಸ್ತಕಾ' ಅಂದರೆ ಋಷಿಗಳ ಸಿಟ್ಟಿನಿಂದ ಅಥವಾ ಶಾಪದಿಂದುಂಟಾದವು ಎಂತಲೂ ಜ್ವರಾದಿರೋಗ ಪೀಡಿತರ ಸಂಪರ್ಕದಿಂದುಂಟಾದವು ಉಪಸರ್ಗಚಾ' ಎಂತಲೂ ದೇವಾದಿಗಳಿಗೆ ದ್ರೋಹಕರಾದವರ ಸಂಪರ್ಕದಿಂದುಂಟಾದವು 'ಸಂಸರ್ಗಜಾ' ಎಂತಲೂ ಸಿ ಸ೦ ವ್ಯಾ ಹೇಳುತ್ತದೆ 3. ವ್ಯಾಥಿಗಳಿಗೆ ಸರ್ವೇಷಾಂ ಚ ವ್ಯಾಧೀನಾಂ ವಾತಪಿತ್ತಶ್ಲೇಷ್ಮಾಣ ಏವ ದೋಷಗಳೇ ಮೂಲ ಮೂಲಂ ತಲ್ಲಿಂಗತ್ವಾದ್ದೃಷ್ಟಫಲತ್ವಾದಾಗಮಾಚ್ಚ | (ಸು. 94.)