ಪುಟ:Aayurvedasaara Prathama Bhaaga.djvu/೩೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಅ XI. - 224 -

  ನ ಚಾಸ್ತಿ ಸದೃಶಂ ತೇನ ಕಿಂಚಿತ್ ಸ್ಥೌಲ್ಯಾಪಕರ್ಷಕಂ | 
  ಸ ಸದಾ ಗುಣಮಾಧತ್ತೇ ಒಲಿನಾಂ ಸ್ನಿಗ್ಧಭೋಜಿನಾ೦ ||
  ವಸಂತೇ ಶೀತಸಮಯೇ ಸುತರಾಂ ಸ ಹಿತೋ ಮತಃ | 
  ಅನ್ಯದಾಪಿ ಚ ಕರ್ತವ್ಯೂ ಬಲಾರ್ಧೇನ ಯಧಾಬಲಂ || 
  ಹೃದಯಸ್ಛೋ ಯದಾ ವಾಯುರ್ವಕ್ತ್ರಂ ಶೀಘ್ರಂ ಪ್ರಪದ್ಯತೇ || 
  ಮುಖಂ ಚ ಶೋಷಂ ಲಭತೇ ತದ್ಬಲಾರ್ಧಸ್ಯ ಲಕ್ಷಣಂ || 
  ಕಿಂ ವಾ ಲಲಾಟೇ ನಾಸಾಯಾಂ ಗಾತ್ರಸಂಧಿಷು ಕಕ್ಷಯೋಃ | 
  ಯದಾ ಸಂಜಾಯತೇ ಸ್ವೇದೋ ಒಲಾರ್ಧಂ ತು ತದಾದಿಶೇತ್ || 
  ಭುಕ್ತವಾನ್ ಕೃತಸಂಭೋಗಃ ಕಾಸೀ ಶ್ವಾಸೀ ಕೃಶಃ ಕ್ಷಯಿಾ | 
  ರಕ್ತಪಿತ್ತೀ ಕ್ಷತೀ ಶೋಷೀ ತ ಕುರ್ಯಾತ್ಕದಾಚನ || 
  ಅತಿವ್ಯಾಯಾಮತಃ ಕಾಸೋ ಜ್ವರಶ್ಛರ್ದಿಃ ಶ್ರಮಃ ಕ್ಲಮಃ | 
  ತೃಷ್ಣಾ ಕ್ಷಯಃ ಪ್ರತಮಕೋ ರಕ್ತಪಿತ್ತಂ ಚ ಜಾಯತೇ ||
          (ಭಾ. ಪ್ರ. 46.) 

ವ್ಯಾಯಾಮದಿಂದ ಲಘುತ್ವ, ಕೆಲಸಮಾಡುವ ಸಾಮರ್ಧ್ಯ, ಶರೀರದ ಎಲ್ಲಾ ಭಾಗ ಗಳು ಸರಿಯಾಗಿ ಗಟ್ಟಿಯಾಗಿರೋಣ, ದೋಷಗಳ ಕ್ಷಯ, ಅಗ್ನಿ ವೃದ್ಧಿ, ಸಹ ಉಂಟಾಗು ತ್ತವೆ. ವ್ಯಾಯಾಮದಿಂದ ದೃಢವಾದ ಶರೀರವುಳ್ಳವನಿಗೆ ಯಾವಾಗಲಾದರೂ ರೋಗ ಇಲ್ಲ, ಉಂಡದ್ದು ವಿರುದ್ಧವಾದದ್ದಾದರೂ, ಅತಿಯಾಗಿ ಸುಡಲ್ಪಟ್ಟಿದ್ದಾದರೂ, (ಹುಳಿಯಾದ ದ್ದಾದರೂ) ಬೇಗನೇ ಪಚನವಾಗುವದು, ಇಂಧವನಿಗೆ ದೇಹದಲ್ಲಿ ಶಿಧಿಲತ್ವ ಮುಂತಾದ್ದು ಬೇಗನೇ ಉಂಟಾಗಲಾರದು; ಮತ್ತು ಮುದಿತನವು ಇವನಲ್ಲಿ ಒಡನೆ ಆಕ್ರಮಿಸಿ ವೃದ್ಧಿಯಾಗ ಲಾರದು. ಸ್ಧೂಲತೆಯ ಪರಿಹಾರಕ್ಕೆ ವ್ಯಾಯಾಮಕ್ಕೆ ಸರಿಯಾದದ್ದು ಯಾವದೂ ಇಲ್ಲ. ಸ್ನಿಗ್ಧವಾಗಿ ಭೋಜನ ಮಾಡುವ ಬಲವಂತರಿಗೆ ವ್ಯಾಯಾಮವು ಯಾವಾಗಲೂ ಗುಣ ಕೊಡುತ್ತದೆ. ವಸಂತ ಋತುವಿನಲ್ಲಿಯೂ, ಶೀತಕಾಲದಲ್ಲಿಯೂ, ವ್ಯಾಯಾಮವು ಬಹಳ ಹಿತವೆನ್ನಿಸಿಕೊಂಡದೆ. ಇತರ ಕಾಲದಲ್ಲಿಯೂ ತನ್ನ ಬಲದ ಮೇಲೆ ಲಕ್ಷ್ಯವಿಟ್ಟು ಅರ್ಧ ಬಲ ದಿಂದ ವ್ಯಾಯಾಮಮಾಡತಕ್ಕದ್ದು. ಹೃದಯದ ವಾಯು ಶೀಘ್ರವಾಗಿ ಬಾಯಿಗೆ ಬರುವದು ಮತ್ತು ಮುಖವು ಬಾಡುವದು ಅರ್ಧ ಬಲದ ಲಕ್ಷಣವೆಂತ ತಿಳಿಯಬೇಕು; ಅಥವಾ, ಹಣೆ ಯಲ್ಲಿ, ಮೂಗಿನಲ್ಲಿ, ಶರೀರದ ಸಂದುಗಳಲ್ಲಿ, ಮತ್ತು ಕಂಕುಳಲ್ಲಿ ಯಾವಾಗ ಬೆವರು ಬರು ತ್ತದೋ ಆಗ್ಗೆ ಬಲಾರ್ಧವಾಯಿತೆಂತ ತಿಳಿಯಬೇಕು. ಉಂಡ ಕೂಡಲೇ, ಸಂಭೋಗ ಮಾಡಿದ ಕೂಡಲೇ, ಮತ್ತು ಕೆಮ್ಮು, ಉಬ್ಬಸ, ಕೃಶತೆ, ಕ್ಷಯ, ರಕ್ತಪಿತ್ತ, ಕ್ಷತ, ಶೋಷ, ಈ ರೋಗಗಳಿಂದ ಪೀಡಿತರಾದವರು ಯಾವಾಗಲಾದರೂ ವ್ಯಾಯಾಮವನ್ನು ಅವಲಂಬಿಸ ಬಾರದು. ವ್ಯಾಯಾಮದ ಸೇವನೆಯು ಅತಿಯಾದರೆ, ಕೆಮ್ಮು, ಜ್ವರ, ವಾಂತಿ, ಶ್ರಮ, ಅಶಕ್ತಿ, ಬಾಯಾರಿಕೆ, ಕ್ಷಯ, ತಮಕವ್ಯಾಧಿ, ರಕ್ತಪಿತ್ತ, ಈ ರೋಗಗಳು ಉಂಟಾಗುವವು.

  ಷರಾ ಇದೇ ಅಭಿಪ್ರಾಯಕ್ಕೆ ಸು 503 04 ನೋಡು
  ವಯೋಬಲಶರೀರಾಣಿ ದೇಶಕಾಲಾಶನಾನಿ ಚ |