ಪುಟ:Aayurvedasaara Prathama Bhaaga.djvu/೩೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


                    -235-                                  
                                           ಆ XII
          ಅನ್ಯಾನ್ವಾ ವಿಷಮಾನ್ರೋಗಾನ್ ಪ್ರಾಪ್ನುಯಾತ್ಕಿ ಪ್ರಮೇವ ಚ ||
                                       (ಸು. 172.)
ದುಷ್ಟವಾದ ನೀರನ್ನೂ, ಋತು ತಪ್ಪಿ ಬಂದ ಮಳೆನೀರನ್ನೂ ಯಾವಾಗಲೂ ವರ್ಜ್ಯ ಮಾಡಬೇಕು. ಅದು ಅಹಿತವಾದದ್ದು ಮತ್ತು ದೋಷಗಳನ್ನುಂಟುಮಾಡುವಂಧಾದ್ದು , ಆದ್ದರಿಂದ ಸ್ವೀಕರಿಸತಕ್ಕದ್ದಲ್ಲ. ದೋಷಯುಕ್ತವಾದ ನೀರನ್ನು ಶುಚಿಮಾಡದೆ ಯಾರು ಕುಡಿಯುತ್ತಾನೋ, ಅವನಿಗೆ ಶೋಭೆ, ಪಾಂಡು, ಚರ್ಮರೋಗ, ಅಜೀರ್ಣ, ಉಬ್ಬಸ, ಕೆಮ್ಮು, ನಾಸಾರೋಗ ಶೂಲ, ಗುಲ್ಮ, ಉದರರೋಗಗಳು ಮತ್ತು ಬೇರೆ ವಿಷಮವಾದ ರೋಗಗಳು ಶೀಘ್ರದಲ್ಲಿಯೇ ಸಂಭವಿಸುವವು.

10. ಪ್ರಶಸ್ತವಾದ ನಿರ್ಗಂಧಮವ್ಯಕ್ತರಸಂ ತೃಷ್ಣಾಘ್ನಂ ಶುಚಿ ಶೀತಲಂ | ನೀರಿನ ಲಕ್ಷಣ ಅಚ್ಛಂ ಲಘು ಚ ಹೃದ್ಯಂ ಚ ತೋಯಂ ಗುಣವದುಚ್ಯತೇ ||

                                       (ಸು. 172.)
ಯಾವ ವಾಸನೆಯೂ ಇಲ್ಲದ, ಯಾವ ರುಚಿಯೂ ಕಾಣದ, ಬಾಯಾರಿಕೆಯನ್ನು ನಿಲ್ಲಿಸ ತಕ್ಕ, ನಿರ್ಮಲವಾದ, ಶೀತಲವಾದ, ಸ್ವಚ್ಛವಾದ ಲಘುವಾದ, ಮತ್ತು ಮನೋಹರವಾದ ನೀರು ಗುಣವುಳ್ಳದ್ದೆಂತ ಹೇಳಲ್ಪಡುತ್ತದೆ

11. ಭೂಮಿಯ ನೀರು ತತ್ರ ಸರ್ವೇಷಾಂ ಭೌಮಾನಾಂ ಗ್ರಹಣಂ ಪ್ರತ್ಯೂಷಸಿ,

  ಬೆಳಿಗ್ಗಿನದು      ತತ್ರಹ್ಯಮಲತ್ವಂ ಶೈತ್ಯಂ ಚಾಧಿಕಂ ಭವತಿ, ಸ ಏವ ಚಾ
  ಉತ್ತಮ      ಪಾಂ ಪರೋ ಗುಣ ಇತಿ |  (ಸು 173 )
   ಕೂಪ ತಟಾಕಾದಿ ಭೂಮಿಯ ನೀರನ್ನೆಲ್ಲಾ ಬೆಳಿಗ್ಗೆ ತೆಗೆದಿಡಬೇಕು. ಆಗ್ಗೆ ಅದು ನಿರ್ಮಲವಾಗಿರುವದು, ಮತ್ತು ಅದರಲ್ಲಿ ಶೈತ್ಯವು ಅಧಿಕವಾಗಿರುವದು. ಅದೇ ನೀರುಗಳಲ್ಲಿ ಉತ್ಕೃಷ್ಟವಾದ ಗುಣ
       ದಿವಾರ್ಕಕಿರಣೈರ್ಜುಷ್ಟಂ ನಿಶಾಯಾಮಿಂದುರಭಿಃ ||
       ಅರೂಕ್ಷಮನಭಿಷ್ಯಂದಿ ತತ್ತುಲ್ಯಂ ಗಗನಾಂಬುನಾ || 
       ಗಗನಾಂಬು ತ್ರಿದೋಷಘ್ನಂ ಗೃಹೀತಂ ಯತ್ಸುಭಾಜನೇ |
       ಬಲ್ಯಂ ರಸಾಯನಂ ಮೇಧ್ಯಂ ಪಾತ್ರಾಪೇಕ್ಷಿ ತತಃ ಪರಂ || (ಸು. 173 )
   ಹಗಲು ಸೂರ್ಯನ ಕಿರಣಗಳಿಂದಲೂ, ರಾತ್ರಿಯಲ್ಲಿ ಚಂದ್ರನ ರಶ್ಮಿಗಳಿಂದಲೂ, ಸೇವಿಸಲ್ಪಟ್ಟ ಭೂಮಿಯ ನೀರು ರೂಕ್ಷವಾಗಲಿ, ಅಭಿಷ್ಯಂದಿಯಾಗಲಿ ಆಗದೆ, ಆಕಾಶದ ನೀರಿಗೆ ತುಲ್ಯವಾಗಿರುವದು. ಒಳ್ಳೇ ಪಾತ್ರದಲ್ಲಿ ಹಿಡಿದಿಟ್ಟ ಆಕಾಶದ ನೀರು ತ್ರಿದೋಷಹರ, ಬಲಕರ, ರಸಾಯನ, ಮತ್ತು ಬುದ್ಧಿಪ್ರದ, ಅನಂತರದ ಅದರ ಗುಣವು ಪಾತ್ರದ ಮೇಲೆ ಹೊಂದಿರುವದು.
  12. ಮೂರ್ಚ್ಛಾಪಿತ್ತೋಷ್ಣದಾಹೇಷು ವಿಷೇ ರಕ್ತೇ ಮದಾತ್ಯಯೇ |
    ಭ್ರಮಕ್ಲಮಪರೀತೇಷು ತಮಕೇ ವಮಧೌ ತಧಾ ||
                       30*