ಪುಟ:Aayurvedasaara Prathama Bhaaga.djvu/೩೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಆ XII

                            - 236 -
             ಊರ್ಧ್ವಗೇ ರಕ್ತಪಿತ್ತೇ ಚ ಶೀತಮಂಭಃ ಪ್ರಶಸ್ಯತೇ |
ತಣ್ಣೀರ ಪಾನ     ಪಾರ್ಶ್ವಶೂಲೇ ಪ್ರತಿಶ್ಯಾಯೇ ವಾತರೋಗೇ ಗಲಗ್ರಹೇ ||
ಪಥ್ಯಾಪಥ್ಯ      * ಆಧ್ಮಾತೇ ಸ್ತಿಮಿತೇ ಕೋಷ್ಠೇ ಸದ್ಯಃಶುದ್ಧೇ ನವಜ್ವರೇ ||

ವಿಚಾರ ಹಿಕ್ಕಾಯಾಂ ಸ್ನೇಹಪೀತೇ ಚ ಶೀತಾಂಬು ಪರಿವರ್ಜಯೇತ್ || (ಸು. 173.)

ಮೂರ್ಚ್ಛೆ, ಪಿತ್ತದೋಷ, ಉಷ್ಣ, ಉರಿ, ವಿಷದೋಷ, ರಕ್ತದೋಷ, ಮದಾತ್ಯಯ, ಭ್ರಮೆ, ದೇಹಾಯಾಸ, ತಮಕ, ವಾಂತಿ, ಊರ್ಧ್ವಮುಖವಾದ ರಕ್ತಪಿತ್ತ, ಈ ವಿಕಾರಗಳಲ್ಲಿ ತಣ್ಣೀರು ಪ್ರಶಸ್ತವಾದದ್ದು. ಪಾರ್ಶ್ವಶೂಲ, ಪೀನಸ, ವಾತರೋಗ, ಗಲಗ್ರಹ, ಹೊಟ್ಟೆಯುಬ್ಬರ, ಈ ರೋಗಗಳಲ್ಲಿಯೂ, ಹೊಟ್ಟೆಯಲ್ಲಿ ಆಮವಿರುವಾಗ್ಗೆ, ಶೋಧನೆಮಾಡಿಸಿಕೊಂಡ ಕೂಡಲೇ, ಹೊಸ ಜ್ವರದಲ್ಲಿ, ಬಿಕ್ಕಟ್ಟಿನಲ್ಲಿ ಮತ್ತು ಸ್ನೇಹಪಾನ ಮಾಡಿರುವಾಗ್ಗೆ, ಸಹ ತಣ್ಣೀರನ್ನು ವರ್ಜ್ಯ ಮಾಡಬೇಕು

ಪರಾ 4 ಅರುಚಿ-ಗ್ರಹಣೀ-ಗುಲ್ಮಶ್ವಾಸ-ಕಾಸೇಷು ವಿದ್ರಧೌ” | - ಅರುಚಿ, ಗ್ರಹಣೀ, ಗುಲ್ಮ, ಉಬ್ಬಸ, ಕೆಮ್ಮು, ಎದ್ರಧಿ, ಈ ರೋಗಗಳಲ್ಲಿಯೂ ತಣ್ಣೀರು ಕೊಡದಾಗಿ ಧಾ ಪ್ರ (ಪು 173) |

13 ಸಮುದ್ರದ ಸಾಮುದ್ರಮುದಕಂ ವಿಸ್ರಂ ಲವಣಂ ಸರ್ವದೋಷಕೃತ್ ||

ನೀರು ಗರ್ಹಿತ                                      (ಸು. 174.)

ಸಮುದ್ರದ ನೀರು ಉಪ್ಪಾಗಿಯೂ, ಹಸೀಮಾಂಸದ ವಾಸನೆಯುಳ್ಳದ್ದಾಗಿಯೂ ಇದ್ದು, ಸರ್ವ ದೋಷಗಳನ್ನು ಉಂಟುಮಾಡತಕ್ಕಂಧಾದ್ದಾಗಿರುತ್ತದೆ.

14. ಬಿಸಿ ನೀರಿನ ಕಫಮೇರ್ದೋನಿಲಾಮಘ್ನಂ ದೀಪನಂ ವಸ್ತಿಶೋಧನಂ | ಗುಣ ಶ್ವಾಸಕಾಸಜ್ವರಹರಂ ಪಧ್ಯಮುಷ್ಣೋದಕಂ ಸದಾ || (ಸು.174.)

ಕಫ, ಮೇದೋರೋಗ, ವಾಯುರೋಗ, ಆಮದೋಷ, ಉಬ್ಬಸ, ಕೆಮ್ಮು, ಜ್ವರ, ಇವು ಗಳನ್ನು ಬಿಸಿನೀರು ನಾಶಮಾಡುವದು, ಅದು ದೀಪನಕಾರಿ, ವಸ್ತಿಶೋಧನೆ ಮಾಡುತ್ತದೆ, ಮತ್ತು ಸದಾಕಾಲದಲ್ಲಿಯೂ ಪಧ್ಯವಾದದ್ದು.

ಷರಾ ಅರ್ಧ ಬತ್ತಿಸಿದ ಬಿಸಿನೀರು ಎಂತ ನಿ ಸಂ ವ್ಯಾ

15. ಪ್ರಶಸ್ತ ಬಿಸಿನೀ ಯತ್ ಕ್ವಾಧ್ಯಮಾನಂ ನಿರ್ವೇಗಂ ನಿಃಫೇನಂ ನಿರ್ಮಲಂ ಲಘು

ರಿನ ಲಕ್ಷಣ          ಚತುರ್ಭಾಗಾವಶೇಷಂ ತು ತತ್ತೋಯಂ ಗುಣವತ್ಸ್ಮೃತಂ ||
                                         (ಸು. 174.) 
     ನೀರನ್ನು ಕುದಿಸುವಾಗ್ಗೆ ನೊರೆ ಬಾರದೆ ಮತ್ತು ಉಕ್ಕದೆಯೂ, ನಿರ್ಮಲವಾಗಿಯೂ,
ಲಘುವಾಗಿಯೂ ಇರುವ ಮತ್ತು ಕಾಲಂಶ ಉಳಿಯುವಂತೆ ಬತ್ತಿಸಿದ ನೀರು ಪ್ರಶಸ್ತವಾದ
ದ್ದೆಂತ ತಿಳಿಯುತ್ತಾರೆ.

16. ಹಳೇ ಸೀರು ನ ಚ ಪರ್ಯುಷಿತಂ ದೇಯಂ ಕದಾಚಿದ್ವಾರಿ ಚಾನತಾ |

ತ್ಯಾಜ್ಯ       ಅಮ್ಲಿಭೂತಂ ಕಫೋತ್ಕ್ಲೇಶಿ ನ ಹಿತಂ ತತ್ಪಿಪಾಸವೇ ||
                                (ಸು. 174 )