ಪುಟ:Aayurvedasaara Prathama Bhaaga.djvu/೩೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


- 245 2 – ಆ XII ಮೊಸರಿನ ಗುಣ ಅಗ್ನಿ ಬಲ ಕಡಿಮೆಯಾದವರಿಗೂ, ಅಶಕ್ತಿ, ಶೋಕ, ಭಯ ಮತ್ತು ಆಯಾಸಗಳಿದ್ದು ನಿದ್ರೆ ಬಾರದವರಿಗೂ, ಮದ್ಯ ಮಾಂಸಸೇವನೆಗೆ ಯೋಗ್ಯರಾದವರಾದರೆ, ಮದ್ಯವನ್ನೇ ವಿಧಿ ಸುತ್ತಾರೆ. 48. ಮಂದಂ ಸ್ಯಾತ್ ಸೃಷ್ಟ ವಿಣ್ಮೂತ್ರ೦ ದೋಷತ್ರಯವಿವಾಹಕೃತ್ | ಸ್ವಾದು ಸ್ಯಾದತ್ಯಭಿಷ್ಯಂದಿ ವೃಷ್ಯಂ ಮೇದಃಕಫಾವಹಂ || ವಾತಘ್ನಂ ಮಧುರಂ ಪಾಕೇ ರಕ್ತಪಿತ್ತಪ್ರಸಾದನಂ || ಮೊಸರಿನ ಗುಣ ಸ್ವಾದ್ವಮ್ಲಸ್ಯ ಗುಣಾ ಜ್ನೇಯಾಃ ಸಾಮಾನ್ಯ ದಧಿವಬ್ಬ ನೈ: | ಅಮ್ಲ೦ ತು ದೀಪನಂ ಪಿತ್ತರಕ್ತಶ್ಲೇಷ್ಮ ನಿವರ್ಧನಂ | ಅತ್ಯಮ್ಲಾ೦ ದೀಪನಂ ರಕ್ತವಾತಪಿತ್ತಕರಂ ಪರಂ || (ಭಾ. ಪ್ರ. 177.) ಮಂದ ಮೊಸರು (ಗಟ್ಟಿಯಾಗುವ ಮೊದಲಿನದು) ಮಲಮೂತ್ರಗಳನ್ನು ಹೆಚ್ಚಿಸುತ್ತದೆ ಮತ್ತು ತ್ರಿದೋಷಗಳನ್ನೂ, ಉರಿಯನ್ನೂ ಉಂಟುಮಾಡುತ್ತದೆ. ಸೀ ಮೊಸರು (ಗಟ್ಟಿಯಾ ದರೂ, ಹುಳಿರಸ ವ್ಯಕ್ತವಾಗದ್ದು) ಅತಿಯಾಗಿ ಅಭಿಷ್ಯಂದಿ, ಮೇದಸ್ಸನ್ನೂ, ಕಫವನ್ನೂ ಉಂಟುಮಾಡತಕ್ಕಂಧಾದ್ದು , ವೃಷ್ಯ, ವಾತಹರ, ಪಾಕದಲ್ಲಿಯೂ ಸೀ ಮತ್ತು ರಕ್ತಪಿತ್ತವನ್ನು ಶಮನಮಾಡುತ್ತದೆ. ಸೀ ಹುಳಿ (ಚೊಗರು ಅನುರಸವಾಗಿ ಮಿಶ್ರರುಚಿಯುಳ್ಳ) ಮೊಸರಿನ ಗುಣ ಗಳು ಸಾಮಾನ್ಯವಾದ ಮೊಸರಿನಂತೆ ಎಂತ ಜನರು ತಿಳಿಯಬೇಕು. ಹುಳಿಮೊಸರು (ಸೀ ಯಡಗಿ ಹುಳಿಯಾದದ್ದು) ಅಗ್ನಿದೀಪನಕಾರಿ ಮತ್ತು ರಕ್ತಪಿತ್ತ ಕಫಗಳನ್ನು ವೃದ್ಧಿ ಮಾಡುತ್ತದೆ. ಅತಿ ಹುಳಿಯಾದದ್ದು ದೀಪನಕಾರಿ ಮತ್ತು ರಕ್ತವಾತವನ್ನೂ, ಪಿತ್ತವನ್ನೂ ವಿಶೇಷ ವಾಗಿ ಉಂಟುಮಾಡುತ್ತದೆ. ಷರಾ ಅಭಿಷ್ಯಂದಿ'ಯ ಅರ್ಥಕ್ಕೆ III ಅ 3 ಸಂ ನೋಡು 49. ತಕ್ರಂ ಮಧುರಮಮ್ಲ೦

ಕ‍‍‍‍‍‍‍‍ಷಾಯಾನುರಸಮುಷ್ಣವೀರ್ರ್ಯಯ೦ ಲಘು

ರೂಕ್ಷ ಮಗ್ನಿದೀಪನಂ ಗರ- ಶೋಫಾತಿಸಾರ-ಗ್ರಹಣೀ-ಪಾಂಡುರೋಗಾ ಮಜ್ಜಿಗೆಯ ಗುಣ ರ್ಶ8-ಪ್ಲೀಹ - ಗುಲ್ಮಾರೋಚಕ - ವಿಷಮಜ್ವರ- ತೃಷ್ಣಾ -ಛರ್ದಿ- ಪ್ರಸೇಕಶೂಲ-ಮೇದಃಶ್ಲೇಷ್ಯಾನಿಲಹರಂ ಮಧುರವಿಪಾಕಂ ಹೃದ್ಯಂ ಮೂತ್ರಕೃ ಛ್ರಸ್ನೇಹವ್ಯಾಪತ್ ಪ್ರಶಮನಮವೃಷ್ಟಂ ಚ | ಮಂಧನಾದಿಪೃಧಗ್ಬೂತ ಸ್ನೇಹಮ

ಧ್ರೋ  ದಕಂ ತು ಯತ್ |

ನಾತಿಸಾಂದ್ರದ್ರವಂ ತಕ್ರಂ ಸ್ವಾದ್ವಮ್ಲ೦ ತುವರಂ ರಣೇ || (ಸು 178.) ತಕ್ರವೆನ್ನಿಸಿಕೊಳ್ಳುವ ಮಜ್ಜಿಗೆಯು ಸೀ, ಹುಳಿ, ಮತ್ತು ಉಪರಸವಾಗಿ ಚೊಗರು ಮಿಶ್ರ ವಾದದ್ದು , ಪಾಕದಲ್ಲಿ ಸೀ, ಲಘು, ವೀರ್ಯದಿಂದ ಉಷ್ಣ, ರೂಕ್ಷ, ಅಗ್ನಿದೀಪನಕರ, ಮನೋ ಹರವಾದದ್ದು, ವೃಷ್ಯಗುಣವಿಲ್ಲದ್ದು, ವಿಷ, ಶೋಫ, ಅತಿಸಾರ, ಗ್ರಹಣೀ, ಪಾಂಡು, ಅರ್ಶಸ್ಸು, ಪ್ಲೀಹ, ಗುಲ್ಮ, ಅರುಚಿ, ವಿಷಮಜ್ವರ, ಬಾಯಾರಿಕೆ, ವಾಂತಿ, ನೆಗಡಿ (ಅಧವಾ ಜೊಲ್ಲು), ಶೂಲೆ, ಮೇದಸ್ಸು, ಕಫ, ವಾಯು, ಈ ದೋಷಗಳನ್ನು ಪರಿಹರಿಸುವದು; ಮತ್ತು ಮೂತ್ರ ಕೃಛ್ರವನ್ನೂ, ಸ್ನೇಹಪಾನವ್ಯತ್ಯಾಸದಿಂದುಂಟಾದ ವಿಕಾರವನ್ನೂ, ಶಮನಮಾಡುತ್ತದೆ.