ಪುಟ:Aayurvedasaara Prathama Bhaaga.djvu/೪೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಅ XVII -334-

   ಕೊಲೆರಾ ಮುಂತಾದ ಕ್ಷೀಣಿಸತಕ್ಕ ವ್ಯಾಧಿಗಳಲ್ಲಿಯೂ, 
ರಕ್ತಪ್ರವಾಹದಿಂದಲೂ ನಾಡಿಯು ಬಲಹೀನವಾಗಿ ನೂಲಿನಂತೆ 
ಇರುವದು.
   ಮದ್ಯಪಾನಶೀಲನ ನಾಡಿಯು ಹೆಚ್ಚು ವೇಗವುಳ್ಳದ್ದಾಗಿರುತ್ತದೆ.
ಸ್ವಸ್ಧನ ನಾಡಿಯ ಸಂಖ್ಯೆಯು ಮಧ್ಯರಾತ್ರಿ ಸಮಯ ಕಡಿಮೆಯಾಗಿ 
ಪ್ರಾತಃಕಾಲದಲ್ಲಿ ಹೆಚ್ಚುತ್ತದೆ.
   ಸಾಧಾರಣವಾಗಿ ಜ್ವರದಲ್ಲಿ ಮೈಕಾವು ಏರಿದ ಹಾಗೆ ನಾಡಿಯ 
ಸಂಖ್ಯೆಯು ಹೆಚ್ಚುವುದು, ಆದರೆ ಕೆಲವು ಜ್ವರದ ಆರಂಭದಲ್ಲಿ, 
ಜ್ವರ ಹೆಚ್ಚಾಗಿದ್ದರೂ, ನಾಡಿಯ ವೇಗವು ಸ್ವಾಭಾವಿಕಕ್ಕೆ ಹೆಚ್ಚು 
ಮಿಕ್ಕಿರುವುದಿಲ್ಲ ಮತ್ತು ಜ್ವರವು ಗುಣವಾಗುತ್ತಾ ಬರುವಾಗ್ಗೆ 
ನಾಡಿಯ ವೇಗವು ಅಶಕ್ತಿಯಿಂದ ಹೆಚ್ಚುತ್ತದೆ ಕೆಲವು ರೋಗಿಗಳಲ್ಲಿ 
ಜ್ವರ ಕಠಿಣವಾಗಿದ್ದಾಗ್ಗೆ ನಾಡಿಯ ಸಂಖ್ಯೆಯು ಸ್ವಾಭಾವಿಕ 
ಸ್ಥಿತಿನಿಂತಿರುವದುಂಟು.
   ಕೆಲವು ರೋಗಗಳಲ್ಲಿ ನಾಡಿಪೆಟ್ಟುಗಳ ಸಂಖ್ಯೆಯು 20ಕ್ಕೂ 
ಕಡಿಮೆಗೆ ಇಳಿಯ ಬಹುದು. ಹೃದಯದೊಳಗಣ ಮಾಂಸದ 
ನರಗಳು ಕ್ಷಯಿಸಿ ಕೆಡುವುದರಿಂದ, ನಾಡಿಯ ವೇಗವು ಬಹಳ 
ಕಡಿಮೆಯಾಗುತ್ತದೆ. ಕೆಲವು ಸಮಯದಲ್ಲಿ ಅಪಸ್ಮಾರ 
ರೋಗವುಳ್ಳವನ ನಾಡಿಯು ಬಹು ಮೆಲ್ಲಗೆ ಚಲಿಸುವದುಂಟು.
   ರೋಗಿಯು ಕೈಯನ್ನು ಅಡಿಗಿಟ್ಟು ಮಲಗಿ ಉಂಟಾಗುವ 
ಒತ್ತುವಿಕೆಯಿಂದ, ಅಥವಾ ತೊಡಿಗೆಯು ಬಿಗಿಯಾಗುವುದರಿಂದ, 
ಕೈನಾಡಿಯ ನಿಜಸ್ಥಿತಿಯು ವ್ಯಕ್ತವಾಗದೆ ಹೋಗುತ್ತದೆ. ಕೆಲವರ 
ಕೈಯ ಧಮನಿಯು ಸಾಧಾರಣವಾಗಿರುವುದಕ್ಕಿಂತ ಯಾವಾಗಲೂ 
ಸಪೂರವಾಗಿಯೇ ಇರುವದುಂಟು ಅನೇಕ ಸಾರಿ ಎಡಕೈಯ 
ಧಮನಿಯೂ ಬಲಗೈಯ ಧಮನಿಯೂ ಒಂದೇ ಪ್ರಮಾಣವಾಗಿ 
ದಪ್ಪವಿರುವದಿಲ್ಲ ಇವೇ ಮೊದಲಾದ ಕಾರಣಗಳಿಂದ ನಾಡಿಯು 
ಅಬಲಿಯಾಗಿ ಕಾಣಬಹುದು.
   ಧಮನಿಯ ಹೊದಿಕೆಯಲ್ಲಿ ಕಲ್ಲುಕಟ್ಟಿದ ಹಾಗೆ, ಅ‌ಥವಾ 
ತಿಪ್ಪಿದ ಹಾಗೆ, ಅಥವಾ ಎತ್ತರತಗ್ಗು, ಇರಬಹುದು ಅದರಿಂದ 
ನಾಡಿಯ ಚಲನೆ ವ್ಯತ್ಯಾಸವಾಗಬಹುದು.
   ಕೈನಾಡಿಪೆಟ್ಟುಗಳಲ್ಲಿ ಲೋಪಗಳು ಕಾಣುವಾಗ್ಗೆ, ಹೃದಯದಲ್ಲಿ 
ಆ ಲೋಪಗಳು ಕಾಣದೆ ಇರಬಹುದು.
   ಮೈ ಬಿಸಿಯು ಒಂದು ಡಿಗ್ರಿ ಹೆಚ್ಚಿದ್ದರೆ, ನಾಡಿಯ ಗತಿಯಲ್ಲಿ 
ಮಿನಿಟಿಗೆ ಸುಮಾರು 10 ಹೆಚ್ಚು ಕಾಣುವದು; ಮತ್ತು ಶ್ವಾಸಗಳಲ್ಲಿ 
2 ಅಥವಾ 3 ಹೆಚ್ಚಿರುವದು.
   ರೋಗಗಳ ಲಕ್ಷಣವಾಗಿ ಎಶೇಷವಾದ ನಾಡಿಭೇದಗಳು ಇರುವ 
ಸಂಗತಿಯಲ್ಲಿ, ಆಯಾ ರೋಗದ ಲಕ್ಷಣಾದಿಗಳನ್ನು ವರ್ಣಿಸುವಾಗ 
ಸಂದರ್ಭಾನುಸಾರವಾಗಿ ಅವುಗಳನ್ನು ಸೂಚಿ ಸೋಣಾಗುವುದು.
   ೨೩. ಸಾಧಾರಣವಾಗಿ ಜ್ವರದ ಡಿಗ್ರಿಯೆಂತ ಕರೆಯಲ್ಪಡುವ 
ಉಷ್ಣ ಪ್ರದರ್ಶಕ ಕಡ್ಡಿ (ಧರ್ಮೋಮೀಟರ್)ಯನ್ನು 
ಉಪಯೋಗಿಸುವುದಾದರೆ ಅದನ್ನು ಬಾಯಿಯೊಳಗೆ, ಕಂಕುಳ ಮೈ 
ಬಿಸಿ ಏರಿಕೆ ಸಂಕಲ್ಲುಕಟ್ಟಿದಸನದೊಳಗೆ ಅಥವಾ ಹೆಂಗಸಿನ 
ಶರೀರದೊಳಗೆ, ಇಟ್ಟು ಪಾಶ್ಚಾತ್ಯರೀತಾ ನೋಡಬೇಕು 
ಬಾಯಿಯೊಳಗೆ ಇಡುವದಾದರೆ ನಾಲಿಗೆಯ ಅಡಿ