ಪುಟ:Aayurvedasaara Prathama Bhaaga.djvu/೪೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 -335- ಅ XVII ಯಲ್ಲಿಟ್ಟು ತುಟಿಗಳನ್ನು ಮುಚ್ಚಿ, ಮೂಗಿನಿಂದ ಶ್ವಾಸ ಬಿಡಬೇಕು. ಕಂಕುಳಲ್ಲಿಡುವುದಾದರೆ, ಆ ಭಾಗದಲ್ಲಿ ಬೆವರಿದ್ದರೆ ಅದನ್ನುಜ್ಜಿ ತೆಗೆದು, ಪಾದರಸ ಇರುವ ತುದಿಯು ಮೈಗೆ ಸರಿಯಾಗಿ ತಗಲಿರುವ ಹಾಗೆ, ಕಡ್ಡಿಯನ್ನು ಇಡಬೇಕು, ಕಡ್ಡಿಗೂ ಮೈಗೂ ಮಧ್ಯೆ ವಸ್ತ್ರವಿಲ್ಲದಂತೆ ಜಾಗ್ರತೆ ತೆಗೆದುಕೊಳ್ಳಬೇಕು, ತೋಳನ್ನು ಆಮರಿಸಿ ಹಿಡಿಯುವುದಲ್ಲದೆ, ಮುಂಗೈಯನ್ನು ಎದೆಯ ಕಡೆಗೆ ಅಡ್ಡವಾಗಿಡುವ ಕ್ರಮ ಒಳ್ಳೇದು, ಮತ್ತು ಗಾಳಿ ತಾಗುವ ಸಂಧರ್ಭದಲ್ಲಿ ಕಡ್ಡಿಯನ್ನು ಸ್ವಲ್ಪ ಹೆಚ್ಚು ಹೊತ್ತು ಇಡಬೇಕು. ಆಸನದೊಳಗೆ ಇಡುವುದಾದರೆ, ಕಡ್ಡಿ ಎಣ್ಣೆ ಹಚ್ಚಿ ಸುಮಾರು ಎರಡು ಇಂಚಿನಷ್ಟು ಒಳಗೆ ಹೋಗಿಸಬೇಕು. ಎಲ್ಲಿ ಇಟ್ಟರೂ, ಕಡ್ಡಿಯೊಳಗಿನ ಪಾದರಸ ಏರದೆ 1-2 ಮಿನಿಟು ಒಂದೇ ಸ್ಥಾನದಲ್ಲಿ ನಿಲ್ಲುವ ತನಕ ಇಡಬೇಕು. ಕಂಕುಳಿಗಿಂತ ಬಾಯಿಯಲ್ಲಿ, ಬಾಯಿಗಿಂತ ಆಸನದಲ್ಲಿ, ಅರ್ಧ ಅಥವಾ ಮುಕ್ಕಾಲು ಡಿಗ್ರಿ ಹೆಚ್ಚು ಬಿಸಿಯಿರುವುದು ಸ್ಥಿತಿಯಲ್ಲಿ ಮನುಷ್ಯ ದೇಹದ ಬಿಸಿಯು 24 ತಾಸುಗಳಲ್ಲಿ 2-3 ಡಿಗ್ರಿ ವರೆಗೆ ಮೇಲೆ ಕೆಳಗೆ ಹೋಗುವುದುಂಟು. ಸಾಧಾರಣವಾಗಿ ಆರೋಗ್ಯ ಸ್ಥಿತಿಯಲ್ಲಿ ಬಿಸಿಯು 98.4° ಅಥವಾ 98.6° ಇರಬೇಕು, ಬಾಯಿಯೊಳಗಾದರೆ 99.5° ಇರಬೇಕು ಸ್ವಾಭಾವಿಕವಾಗಿ ರಕ್ತದ ಬಿಸಿಯು 100° ಆಗಿರುತ್ತದೆ. ಬಿಸಿಯು ಹೆಚ್ಚು ಹೊತ್ತು (ಕಂಕುಳಲ್ಲಿ) 99.5°ಕ್ಕೆ ಮಿಕ್ಕಿ ಅಥವಾ 97.3°ಕ್ಕೆ ಕಡಿಮೆಯಾಗಿ ಇರುವುದಾದರೆ, ಅಂಥವನಲ್ಲಿ ಯಾವುದಾದರೊಂದು ರೋಗ ಉಂಟೆಂದು ಊಹಿಸಬಹುದು 103.1°ರ ವರೆಗೆ ಸಾಧಾರಣ ಜ್ವರ, ಅದರ ಮೇಲೆ 104.9°ರ ವರೆಗೆ ಕಠಿಣ ಜ್ವರ ಮತ್ತು 105°8ರ ಮೇಲೆ ಅಸಾಧ್ಯ ಜ್ವರ, ಎಂದು ತಿಳಿಯುವುದು ಬಿಸಿಯು ಸ್ವಸ್ಧಸ್ಥಿಯಲ್ಲಿ ಬಹಳ ಕಡಿಮೆಯಾಗಿರುವುದು ನಿಶ್ಚೈತನ್ಯ; ತರೆಯಾಗಿ ಕ್ಷೀಣತೆಯನ್ನುಂಟುಮಾಡುವ ಅಥವಾ ದೀರ್ಘಕಾಲದಿಂದ ಅನು ಭವಿಸುತ್ತಿರುವ ವ್ಯಾಧಿಯಿಂದಲೂ, ಅಭ್ಯಂತರ ರಕ್ತಸ್ರಾವದಿಂದಲೂ, ಆ ಸ್ಥಿತಿ ಉಂಟಾಗುವದು. 24 ಸ್ವಸ್ಥನಾದ ಒಬ್ಬ ಪ್ರಾಯಸ್ಥನು 24 ತಾಸುಗಳಲ್ಲಿ 24ರಿಂದ 30 ಔನ್ಸು(1 ಔನ್ಸು =2 ತೊಲೆ) ವರೆಗೆ ಮಾತ್ರ ಹೊಯ್ಯುವನು. ಸೇವಿಸಿದ ಜಲಾದಿಪಾನಗಳ ಮೇಲೆ ಮೂತ್ರ ಪರೀಕ್ಷೆ, ಯೂ, ಹವಾಸ್ಥಿತಿಯ ಮೇಲೆಯೂ, ಮೂತ್ರದ ಪ್ರಮಾಣವು ಹೆಚ್ಚು ಕಡಿಮೆ ಪಾಶ್ಚಾತ್ಯರೀತ್ಯಾಯಾಗುತ್ತದೆ ಚಳಿಕಾಲದಲ್ಲಿ ಬೆವರು ಕಡಿಮೆಯಾಗಿ ಮೂತ್ರ ಹೆಚ್ಚುತ್ತದೆ. ಸೀಮೂತ್ರದಲ್ಲಿ ಅದು ಹೆಚ್ಚಾಗಿ ಹೋಗುತ್ತದೆ. ವ್ರುಕ್ಕಗಲು (Kidneys) ಬಾತಾಗ್ಗೆ, ಮತ್ತು ಹೆಚ್ಚು ವಕ್ಷ ಜ್ವರಗಳಲ್ಲಿ ಮೂತ್ರವು ಕಡಿಮೆಯಾಗುತ್ತದೆ. ವಿಷಚಿಕಾರೂಗದಲ್ಲ ಮತ್ತು ನಿಶ್ಚತನ್ಯದಲ್ಲಿ, (ಅವಸಾದ-Collaps), ಮೂತ್ರ ಹೋಗದೆ ಪೂರಾ ನಿಲ್ಲುವುದು. ಮೂತ್ರಾಶಯದಲ್ಲಿಯಾಗಲಿ, ವೃಕ್ಷಗಳಲ್ಲಿ ಯಾಗಲಿ, ಬಾಕು ಉಂಟಾದಾಗ್ಗೆ ಮತ್ತು ಅಶರೀರ ಮುಂತಾದ ವ್ಯಾಧಿಗಳಲ್ಲಿ ಮೂತ್ರದ ಸರ್ತಿ ಹೆಚ್ಚುತ್ತದೆ. ಮೂತ್ರನಾಳದ ಅನೇಕ ರೋಗಗಳಲ್ಲಿ ಮೂತ್ರಿಸುವಾಗ್ಗೆ ವೇದನೆ ಉಂಟಾಗುತ್ತದೆ. ಸ್ವಸ್ದನ ಮೂತ್ರವು ಅಲ್ಪವಾದ ಹುಲ್ಲಿನ ವರ್ಣವುಳ್ಳದ್ದು. ಅದರಲ್ಲಿ ಇರಬೇಕಾದ ಅತ್ಯಲ್ಪವಾದ ಕಫವು ಹೊಗೆಯೋ ಪಾದಿ ಅದರ ಮೇಲೆ ಬಾವೆಯಾಗಿ ನಿಲ್ಲುವದು. ಪಾತ್ರದ ಅಡಿಯಲ್ಲಿ ಭಾರವುಳ್ಳ ಬಿಳೇ ಮಡ್ಡು ನಿಂತರೆ, ಹೆಚ್ಚು ಕಫ ಉಂಟೆಂತ ತಿಳಿಯಬೇಕು. ಅದು ಮೂತ್ರಾಶಯದ ಹಳೇ ವ್ಯಾಧಿಗಳಲ್ಲಿ ಕಾಣುವುದು. ಅರಸಿನ ಒತ್ತಿದ ಕೆಂಪು ಅಥವಾ ಕಪಿಲವರ್ಣವ ಪಿತ್ರದ ಮತ್ತು ಅರ