ಪುಟ:Aayurvedasaara Prathama Bhaaga.djvu/೪೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಅ XVIII -344-

 ಹೊಟ್ಟೆಯುಬ್ಬರ, ಕೀವುಕಟ್ಟಿಕೊಳ್ಳೋಣ, ವಾಂತಿ, ಬಿಕ್ಕಟ್ಟು, ಬಾಯಾರಿಕೆ, ಶ್ವಾಸ ಎಳೆಯುವಾಗ ನೋವು, ಈ ಲಕ್ಷಣಗಳುಳ್ಳವನನ್ನು ವಿದ್ರಧಿಯು ಕೊಲ್ಲುವದು.

15.ಪಾಂಡುರೋಗದಲ್ಲಿ ಅಶುಭಸೂಚನೆ

    ಪಾಂಡುದಂತನಖೋ ಯಶ್ಚ ಪಾಂಡುನೇತ್ರಶ್ಚ ಮಾನವಃ | 
    ಪಾಂಡುಸಂಘಾತದರ್ಶೋ ಚ ಪಾಂಡುರೋಗೀ ವಿನಶ್ಯತಿ || (ಸು. 124.)
 ಹಲ್ಲು, ಉಗುರು ಮತ್ತು ಕಣ್ಣು ಬಿಳೇದಾಗಿರುವದು ಮತ್ತು ರೋಗಿಯ ದೃಷ್ಟಿಗೆ ಬಿಳುಪಿನ ರಾಶಿಯೇ ಕಾಣುವದು, ಈ ಲಕ್ಷಣಗಳು ಯಾವ ಪಾಂಡುರೋಗಿಯಲ್ಲಿ ಕಾಣುತ್ತವೋ,ಅವನು ಸಾಯುವನು.

16.ರಕ್ತದತ್ತದಲ್ಲಿ ಅಶುಭಸೂಚನೆ

    ಲೋಹಿತಂ ಛರ್ದಯೇದ್ಯಶ್ಯ ಬಹುಶೋ ಲೋಹಿತೇಕ್ಷಣಃ | 
    ರಕ್ತಾನಾಂ ಚ ದಿಶಾಂ ದ್ರಷ್ಟಾ ರಕ್ತಪಿತ್ತೀ ವಿನಶ್ಯತಿ | (ಸು. 124.) 
 ರಕ್ತವನ್ನು ಬಹಳ ಸರ್ತಿ ವಾಂತಿಮಾಡೋಣ, ಕಣ್ಣು ಕೆಂಪಾಗೋಣ, ದಿಕ್ಕುಗಳು ಕೆಂಪಾಗಿ ಕಾಣೋಣ, ಈ ಲಕ್ಷಣಗಳಿಂದ ಕೂಡಿದ ರಕ್ತಪಿತ್ತರೋಗಿಯು ಸಾಯುವನು.

17.ಉನ್ಮಾದದಲ್ಲಿ ಅಶುಭಸೂಚನೆ

    ಅವಾಬ್ಮುಖಸ್ತೂನ್ಮುಮೋ ವಾ ಕ್ಷೀಣಮಾ೦ಸಬಲೋ ನರಂ | 
    ಜಾಗರಿಷ್ಣು ರಸಂದೇಹಮುನ್ಮಾದೇನ ವಿನಶ್ಯತಿ || (ಸು. 124.) 
 ಮುಖವನ್ನು ಕೆಳಗೆ ಬೊಗ್ಗಿಸಿಕೊಂಡೇ ಅಧವಾ ಮೇಲಕ್ಕೆತ್ತಿಕೊಂಡೇ ಇರೋಣ,ಮಾಂಸ ಮತ್ತು ಬಲ ಕ್ಷೀಣವಾಗೋಣ, ನಿದ್ರೆಯಿಲ್ಲದಿರೋಣ, ಈ ಲಕ್ಷಣಗಳು ಉನ್ಮಾದ ರೋಗಿಯಲ್ಲಿ ಕಂಡರ ಆತನು ನಿಶ್ಚಯವಾಗಿ ಸಾಯುವನು.

18.ಅಪಸ್ಮಾರದಲ್ಲಿ ಅಶುಭಸೂಚನೆ

    ಬಹುಶೋಪಸ್ಮರಂತಂ ತು ಪ್ರಕ್ಷೀಣಂ ಚಲಿತಭ್ರುವಂ || 
    ನೇತ್ರಾಭ್ಯಾಂ ಚ ವಿಕುರ್ವಾಣಮಪಸ್ಮಾರೋ ವಿನಾಶಯೇತ್ || 
                          (ಸು. 124.) 
 ಬಹು ಸರ್ತಿ ಸ್ಮೃತಿ ತಪ್ಪೋಣ, ಬಹಳ ಕ್ಷೀಣತೆ, ಹುಬ್ಬುಗಳನ್ನು ಅಲ್ಲಾಡಿಸೋಣ, ಕಣ್ಣುಗಳನ್ನು ವಿಕಾರವಾಗಿ ತಿರುಗಿಸೋಣ, ಈ ಲಕ್ಷಣಗಳುಳ್ಳವನನ್ನು ಅಪಸ್ಮಾರ ರೋಗವು ಕೊಲ್ಲುವದು.

19.ಮಸೂರಿಕೆಯಲ್ಲಿ ಅಶುಭಸೂಚನೆ

    ಪ್ರವಾಲಗುಲಿಕಾಭಾಸಾ ಯಸ್ಯ ಗಾತ್ರೇ ಮಸೂರಿಕಾಃ | 
    ಉತ್ಪದ್ಯಾಶು ವಿನಶ್ಯಂತಿ ನ ಚಿರಾತ್ ನ ವಿನಶ್ಯತಿ |   (ವಾ. 176.)
 ಹವಳದ ಗುಂಡಿನ ಪ್ರಭೆಯುಳ್ಳ ಮೈಲಿಗೆ ಖಜ್ಜಿಗಳು ಯಾವನ ಶರೀರದಲ್ಲಿ ಎದ್ದು ಬೇಗನೇ ಕಾಣದೆ ಹೋಗುತ್ತವೋ, ಆತನು ಸ್ವಲ್ಪಕಾಲದಲ್ಲಿಯೇ ಮೃತವಾಗುವನು.