ಪುಟ:Aayurvedasaara Prathama Bhaaga.djvu/೪೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಅ XIX. __354__

 ಸ್ನೇಹ ಒಗ್ಗುವ ಮತ್ತು ಸಂಕಟವನ್ನು ಸಹಿಸಲು ಶಕ್ತನಾದ ಮನುಷ್ಯನು, ಕಾಲವು ಅತ್ಯುಷ್ಣ, ಅಧವಾ ಅತಿ ಶೀತವಲ್ಲವಾದಾಗ, ಶುದ್ಧವಾದ ಸ್ನೇಹ(ಅಚ್ಛೆಣ್ಣೆ)ವನ್ನೇ ಪಾನಮಾಡ ಬೇಕು; ಯಾಕೆಂದರೆ ಆಗ್ಗೆ ಶುದ್ಧ ಸ್ನೇಹಪಾನವೇ ಪ್ರಶಸ್ತವಾದದ್ದು.

59. ರೂಕ್ಷಕ್ಷತವಿಷಾರ್ತಾನಾಂ ವಾತಪಿತ್ತವಿಕಾರಿಣಾಂ |

ಹೀನಮೇಧಾಸ್ಕೃತೀನಾಂ ಚ ಸರ್ವಿಪಾನಂ ಪ್ರಶಸ್ಯತೇ || ತುಪ್ಪ ತೈಲಗಳು ಯಾರ್ಯರಿಗೆ ಹಿತ ಕೃಮಿಕೋಷ್ಠಾನಿಲಾವಿಷ್ಟಾಃ ಪ್ರವೃದ್ಧ ಕಫಮೇದಸಃ |
ಪಿಬೇಯುಸ್ತೈಲಸಾತ್ಯ್ಮಾಶ್ವ ತೈಲಂ ದಾರ್ಢ್ಯಾರ್ಧಿನಶ್ವ ಯೇ || (ಸು. 539.)
ರೂಕ್ಷರಾದವರಿಗೂ, ಶಸ್ತ್ರದ ಗಾಯದಿಂದ ಅಧವಾ ವಿಷದಿಂದ ಪೀಡಿತರಾದವರಿಗೂ, ವಾತಪಿತ್ತವಿಕಾರವುಳ್ಳವರಿಗೂ, ಬುದ್ಧಿ ಮತ್ತು ನೆನಪು ಕಡಿಮೆಯಾದವರಿಗೂ, ಘೃತಪಾನವು ಪ್ರಶಸ್ತವಾಗಿರುತ್ತದೆ ಹೊಟ್ಟೆಯಲ್ಲ ಹುಳವುಳ್ಳವರು, ವಾಯು ಸೇರಿದವರು, ಕಫಮೇದಸ್ಸು ಗಳು ಹೆಚ್ಚಾದವರು, ತೈಲ ಒಗ್ಗುವವರು ಮತ್ತು ದೇಹದಾರ್ಢ್ಯವನ್ನು ಅಪೇಕ್ಷಿಸುವವರು ತೈಲ ವನ್ನು ಪಾನಮಾಡತಕ್ಕದ್ದು.

60. ಪೀತಮಾತ್ರೇ ಚೇಷ್ಣೋದಕೇನೋಪಸ್ಪೃಶ್ಯ ಸೋಪಾನತ್ಕೋ ಯ ಧಾಸುಖಂ ವಿಹರೇತ್ || (ಸು. 539.) ಸ್ನೇಹಪಾನಕ್ಕೆ ತಕ್ಕ ಉಪಚಾರಗಳು

ಘೃತವನ್ನಾಗಲಿ, ತೈಲವನ್ನಾಗಲಿ, ಪಾನಮಾಡಿದ ಕೂಡಲೇ ಬಿಸಿನೀರಿನಿಂದ ಬಾಯಿ ಮುಕ್ಕುಳಿಸಬೇಕು ಮತ್ತು ಮೆಟ್ಟು ಹಾಕಿಕೊಂಡು ಸುಖದಿಂದ ತಿರುಗಾಡಬೇಕು.
ಷರಾ 'ಉಪಸ್ಪೃಶ್ಯ' ಎಂದರೆ 'ಆಚಮನ ಮಾಡಿ' ಎಂದರ್ಥ ಎಂತ ನಿ ಸಂ ವ್ಯಾ
ಉಷ್ಣೋದಕೋಪಚಾರಿ ಸ್ಯಾತ್ ಬ್ರಹ್ಮಚಾರೀ ಕ್ಷಪಾಶಯಃ | ಶಕೃನ್ಮೂತ್ರಾನಿಲೋದ್ಗಾರಾನುದೀರ್ಣಾಂಶ್ವ ನ ಧಾರಯೇತ್ || ವ್ಯಾಯಾಮಮುಚ್ಚೈರ್ವಚನಂ ಕ್ರೋಧಶೋಕೌ ಹಿಮಾತಪೌ |

ವರ್ಜಯೇದಪ್ರವಾತಂ ಚ ಸೇವೇತ ಶಯನಾಸನಂ ||(ಚ. 72.)

ಸ್ನೇಹಪಾನ ಮಾಡಿದವನು ಎಲ್ಲಾ ಉಪಚಾರಗಳಿಗೂ ಬಿಸಿನೀರನ್ನೇ ಉಪಯೋಗಿಸು ವವನಾಗಿಯೂ, ಬ್ರಹ್ಮಚಾರಿಯಾಗಿಯೂ, ರಾತ್ರಿಯಲ್ಲೇ ಮಲಗುವವನಾಗಿಯೂ, ಇರಬೇಕು; ಹೊರಟಂಧಾ ಮಲ-ಮೂತ್ರ-ವಾಯು-ತೇಗುಗಳ ವೇಗವನ್ನು ತಡೆದು ನಿಲ್ಲಿಸಬಾರದು; ದೇಹ ದಂಡನೆ, ಗಟ್ಟಿಯಾದ ಮಾತು, ಸಿಟ್ಟು, ಶೋಕ, ಹಿಮ ಮತ್ತು ಬಿಸಿಲು, ಇವುಗಳನ್ನು ವರ್ಜಿಸ ಬೇಕು; ಮತ್ತು ಅವನು ಕೂತುಕೊಳ್ಳುವ ಮತ್ತು ಮಲಗುವ ಎಡೆಯು ಬೀಸುವ ಗಾಳಿ ಇಲ್ಲದ್ದಾಗಿರಬೇಕು.
ಋತೇ ಭಲ್ಲಾತಕಸ್ನೇಹಾತ್ತತ್ರ ತೋಯಂ ಸುಶೀತಲಂ | (ಚಿ. ಸಾ. ಸಂ. 918.) ಗೇರುಕಾಯಿಯ ಎಣ್ಣೆ ಸೇವಿಸಿದ್ದಲ್ಲಿ ಬಿಸಿನೀರಿನ ಉಪಚಾರ ವರ್ಜ್ಯ; ಒಳ್ಳೇ ತಣ್ಣಗಿನ ನೀರನ್ನೇ ಉಪಯೋಗಿಸತಕ್ಕದ್ದು.