ಪುಟ:Aayurvedasaara Prathama Bhaaga.djvu/೪೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


371 - ಆ XIX 77, ಕಫಮೇದೋನ್ನಿತೇ ವಾಯೌ ನಿವಾತಾತಪಗುರುಪ್ರಾವರಣನಿಯು ಅಗ್ನಿ ವಿನಾ ಬೆವ ದ್ವಾಧ್ವ ವ್ಯಾಯಾಮಭಾರಹರಣಾಮಷೈಃ ಸೈದಮುತ್ಸಾದಯೇ ರಿಸುವ ಕ್ರಮ ದಿತಿ | (ಸು. 344 ) ವಾಯುವಿನೊಂದಿಗೆ ಕಫ-ಮೇದಸ್ಸುಗಳು ಸೇರಿದಾಗ್ಗೆ, ಗಾಳಿ ಬಂಧಮಾಡುವದು, ಬಿಸಿಲು, ದಪ್ಪವಾದ ಹೊದಿಕೆ, ಉರುಡುವದು, ದಾರಿ ನಡೆಯುವದು, ವ್ಯಾಯಾಮ (ಅಂಗ ಸಾಧನೆ), ಭಾರಹೊರುವದು, ಸಿಟ್ಟು ಬರಿಸುವದು, ಇವುಗಳಿಂದ ಬೆವರಿಸಬೇಕು

78. ವೃಷಣೌ ಹೃದಯಂ ದೃಷ್ಟಿ ಸೈದಯೋನ್ಮದು ನೈವ ವಾ | ಸ್ವೇದನಕ್ಕೆ ಅವ ಮಧ್ಯಮಂ ವಂಕ್ಷಣೌ ಶೇಷಮಂಗಾವಯವಮಿಷ್ಟತಃ || (ಚ. 76.) ಯವಾಂಗಭೇದ ಅಂಡಗಳೆರಡು, ಹೃದಯ, ಎರಡು ಕಣ್ಣುಗಳು, ಇವುಗಳನ್ನು ಮೃದುವಾಗಿಯೇ ಬೆವ ರಿಸಬೇಕು- ಅಧವಾ ಬೆವರಿಸಲೇ ಬಾರದು ಎರಡು ತೊಡೆಸಂದುಗಳಿಗೆ ಮಧ್ಯಮ ಸ್ವೇದ ವನ್ನು ಉಪಯೋಗಿಸಬೇಕಲ್ಲದೆ, ಮಹಾಸ್ವೇದ ಯೋಗ್ಯವಲ್ಲ. ಸಾಧಾರಣವಾಗಿ ಇತರ ಅಂಗ ಅಧವಾ ಅವಯವವನ್ನು ಇಷ್ಟ ಇದ್ದಂತೆ ಬೆವರಿಸಬಹುದು ಷರಾ ತೊಡೆ ಸಂದುಗಳಿಗೆ ಅಲ್ಪವಾದ ಸ್ವೇದ ಉಚಿತವೆಂತ ವಾ (ಪ್ರ 51)

79. ವ್ಯಾಧೌ ಶೀತೇ ಶರೀರೇ ಚ ಮಹಾನ್ ಸ್ವೇದೋ ಮಹಾಬಲೇ | ಸ್ವೇದನಕ್ಕೆ ಬಲವಿಚಾರ ದುರ್ಬಲೇ ದುರ್ಬಲಹಃ ಸ್ವೇದೋ ಮಧ್ಯಮೇ ಮಧ್ಯವೋ ಹಿತ: || (ಚ. 75.) ವ್ಯಾಧಿಯೂ ಶರೀರವೂ ಶೀತವಾಗಿ, ರೋಗಿಯು ಬಲಿಷ್ಠನಾಗಿದ್ದರ, ಮಹಾ ಸ್ವೇದ, ದುರ್ಬಲನ ಸಂಗತಿಯಲ್ಲಿ ದುರ್ಬಲವಾದ ಸ್ವೇದ, ಮಧ್ಯಮೇ ಬಲದವನಿಗೆ ಮಧ್ಯಮ ಸ್ವೇದ ಹಿತವಾಗುತ್ತದೆ.

80. ದ್ರವಂ ತನು ಸರಂ ಯಾವಚ್ಚೀತೀಕರಣಮೌಷಧಮ್ | ಸ್ತಂಭನೋಪಕ್ರಮ ಸ್ವಾದು ತಿಕ್ತಮಂ ಕಷಾಯಂ ಚ ಸ್ತಂಭನಂ ಸರ್ವಮೇವ ತತ್ || (ಚ 122 ) ದ್ರವ, ತನು, ಸರ, ಗುಣಗಳುಳ್ಳ ಔಷಧಗಳೊಳಗೆ ಮತ್ತು ಸೀ, ಕಹಿ ಮತ್ತು ಚೊಗರು ಪದಾರ್ಥಗಳೊಳಗೆ ಯಾವದು ಶೀತಕರವೋ ಅದೆಲ್ಲ ಸ್ತಂಭನವಾಗಿರುತ್ತದೆ.

81. ಪಿತ್ತಕ್ಷಾರಾಗ್ನಿದಗ್ಗಾ ಯೇ ವಮ್ಯತೀಸಾರಪೀಡೀತಾಃ | ಸ್ತಂಭನಕ್ಕೆ ಯೋಗ್ಯರು ವಿಷಸ್ವೀದಾತಿಯೋಗಾತಾಃ ಸ್ತಂಭನೀಯಾಸ್ತಧಾಪರಾಃ || (ಚ, 122.) ಪಿತ್ತ, ಕಾರ, ಅಧವಾ ಬೆಂಕಿಯಿಂದ ಸುಡಲ್ಪಟ್ಟವರು, ವಾಂತಿ ಅಧವಾ ಅತಿಸಾರದಿಂದ ಪೀಡಿತರಾದವರು, ಏಷದಿಂದ ಅಧವಾ ಸ್ವೇದನ ಅತಿಯಾದ್ದರಿಂದ ಸಂಕಷ್ಟ ಪಡುವವರು ಮತ್ತು ಹಾಗಿನ ಬೇರೆಯವರು ಸ್ತಂಭನೋವಕ್ರಮಕ್ಕೆ ಯೋಗ್ಯರಾಗಿರುತ್ತಾರ.