ಪುಟ:Abhaya.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಓದುವುದಕ್ಕೆ ಮುಂಚೆ

ಮೆಚ್ಚಿಕೊಳ್ಳುವಹಾಗಿತ್ತು ಆ ಮುಗುಳುನಗು ತಿಳಿವಳಿಕೆಯ ಮುಖ ಭಾವ ಆತ್ಮವಿಶ್ವಾಸದ ನಿಲುವು . . .

ಯಾವ ಸಂಕೋಚವೂ ಇಲ್ಲದೆ ಅವರು, ನಮ್ಮ ಮನೆಯ ಬಾಗಿಲನ್ನು ದಾಟಿ ನನ್ನ ಕೊಠಡಿಯತ್ತ ನೇರವಾಗಿ ಬಂದು, "ಎದ್ದಿದೀರಾ ?" ಎಂದರು

ಒಳಬರಬಹುದೆ- ಬಾರದೆ ಎಂಬ ಅಳುಕು ಇರಲಿಲ್ಲ.

'ಬರೆಯುವವರೆಲ್ಲಾ ಅತಿಮಾನವರು, ಓದುವವರು ಬಡ ಕ್ರಿಮಿಗಳು' ಎಂಬ ಅರ್ಥಹೀನ ದೈನ್ಯತೆಯಿರಲಿಲ್ಲ ಆ ದೃಷ್ಟಿಯಲ್ಲಿ ಎರಡೂ ಕೈ ಜೋಡಿಸಿ ವಿನೇತರಾಗಿ ವಂದಿಸುತ್ತ ನಿಮಿಷಗಟ್ಟಲೆ ನಿಂತುಕೊಳ್ಳುವ ಪ್ರವೃತ್ತಿ ಇರಲಿಲ್ಲ.....

ಕಾಲ ಕಳೆದಹಾಗೆ ಎಷ್ಟೊಂದು ಮಾರ್ಪಾಡು ಹೊಂದಿದ್ದರು ಓದುಗರು!

ನನ್ನನ್ನು ತನ್ನ ಹಾಗೆಯೇ ಇನ್ನೊ

ಬ್ಬ ಜೀವಿ, ಈ ಸಮಾಜದ ಇನ್ನೊಬ್ಬ ಸದಸ್ಯ, ಎಂದಷ್ಟೇ ಭಾವಿಸಿದ ಆತನನ್ನು ಮುಗುಳುನಗೆಯ ಸ್ವಾಗತ ನೀಡಿ ಬರಮಾಡಿಕೊಂಡೆ ಎದೆಗೆ ಆನಿಸಿ ಎಡಗೈಯಲ್ಲಿ ಹಿಡಿದಿದ್ದ ಮುದ್ರಿತ ಹಾಳೆಗಳ ಕಟ್ಟನ್ನು ಅವರು ನನ್ನ ಮೇಜಿನಮೇಲಿಟ್ಟರು

ಅದು 'ಅಭಯ'

ಹಿಂದಿನ ಸಂಜೆ ನನ್ನಲ್ಲಿಗೆ ಬಂದು ಮುದ್ರಿತ ಪುಟಗಳನ್ನೆಲ್ಲ ಓದಲೆಂದು

ಅವರು ಕೇಳಿ ಒಯ್ದಿದ್ದರು.

"ಓದಿದಿರಾ?"

"ನನ್ನ ಕಣ್ಣುಗಳನ್ನು ನೋಡಿ!"

ಕಣ್ಣುಗಳು ಕೆಂಪಗಾಗಿದ್ದವು-ನಿದ್ದೆಗೆಟ್ಟು

ಪುಸ್ತಕ ಹೇಗಿದೆ?---ಎಂಬುದು ನಾನು ಕೇಳಬೇಕಾಗಿದ್ದ ಮುಂದಿನ