ಪುಟ:Abhaya.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಅಳ ಬೇಡ ತುಂಗ"

-----ಎಂದ ನಾರಾಯಣ ಮೂರ್ತಿ. ಅದು ಯಾಚನೆಯ ಧ್ವನಿ

ಅದರಲ್ಲಿ ದೈನ್ಯತೆ ಇತ್ತು.

ತುಂಗಮ್ಮ ಸೆರಗಿನ ತುದಿಯಿಂದ ಕಣ್ಣೊತ್ತಿಕೊಂಡಳು.

"ಇಲ್ಲ, ಅಳೋದಿಲ್ಲ"

"ಹಾಗಂದರೆ ಸಾಲದು ಎಲ್ಲಿ ಇಲ್ನೋಡು."

ತುಂಗಮ್ಮ ಮುಖವೆತ್ತಿದಳು.

"ಹಾಗೆ. ನಗು ನೋಡೋಣ."

"......."

"ಎಲ್ಲಿ, ನಗು ಚಿನ್ನ."

"......"

"ಈವರ್ಷ ಡಿಸೆಂಬರ್ ನೊಳಗಾಗಿ ಮದುವೆ ಖಂಡಿತ."

ತುಂಗಮ್ಮ ನಕ್ಕಳು. ನಾರಾಯಣ ಮೂರ್ತಿಯ ಕೈ ತುಂಗಮ್ಮನ

ನಡುವನ್ನು ಬಳಸಿತು.

.....ಒಂದು ಸಂಜೆ ನಾರಾಯಣಮೂರ್ತಿ ಬಂದಾಗ ತುಂಗಮ್ಮ

'ಹೊರಗೆ ಕುಳಿತಿ'ದ್ದಳು.

"ರಜಾನೇನೊ?"

ಎಂದ ಮೂರ್ತಿ.

"ಹೂಂ, ಹತ್ತಿರ ಬರ್ಬೇಡಿ."

"ಮುಟ್ಕೂಡ್ದೊ?"

"ಥೂ-ಥೂ-"

"ಬರೇ ಗೊಡ್ಡು!"

"ಏನಂದಿರಿ?"

"ಕೇಳಿಸ್ಲಿಲ್ಲಾಂತ ನಾಟಕ ಆಡ್ತೀಯಾ?"

"ಆಧುನಿಕರು! ಇನ್ನೊಮ್ಮೆ ಅನ್ನಿ ನೋಡೋಣ ಆ ಮಾತ್ನ."

ಮೂರ್ತಿ ಬೇರೆಯೇ ಮಾತುತೆಗೆದ:

"ಅಡುಗೆಮಣನೇಲಿ ಸದ್ದಾಗ್ತಿದೆಯಳಲ್ಲಾ, ಯಾರು?"