ಮೂರ್ತಿಯ ಕಣ್ನುಗಳಲ್ಲಿ ಆ ಮಾತಿನ ಅರ್ಥವನ್ನು ತುಂಗಮ್ಮ
ಹುಡುಕಿದಳು .
"ನಾಳೆ ಬರ್ತೀನಿ ತುಂಗ. ನಿನ್ಜತೇಲಿ ತುಂಬಾ ಮಾತಾಡ್ಬೇಕು."
ಹಾಗೆ ಹೇಳಿ ಮೂರ್ತಿ ಹೊರಟು ಹೋದ.
..ಆ ನಾಳೆ ಬಂತು.
ಆತನೂ ಬಂದ.
ಭೀತಿ ಕಾತರ ಕುತೂಹಲಗಳಿಂದ ಸಂಕಟಪಡುತ್ತ ತುಂಗಮ್ಮ ಕಾದು
ಕುಳಿತಿದ್ದಳು.
ಮನೆಯಲ್ಲಿ ಆಕೆಯೊಬ್ಬಳೇ ಇದ್ದ ಹೊತ್ತು ನೋಡಿಯೇ ಬಂದ ಆತ.
ಆ ದಿನ, ಆಗ ಆಗಬಾರದ್ದು ಆಗಿ ಹೋಯಿತು
ಯೋಚನೆಗಳು ಈ ಭುಮಿಗೆ ಮರಳಿ ಇಳಿದಾಗ ತುಂಗಮ್ಮ ಉಗುರಿ
ನಿಂದ ಚಿವುಟ ಬಾಡಿಸಿದ ಎಳೆಯ ಬಳ್ಳಿಯಾಗಿದ್ದಳು.
ನಾರಾಯಣಮೂರ್ತಿ ಹೊರಟುನಿಂತಾಗ ಆಕೆ ಅತ್ತಳು.
ಆತ ಹೇಳಿದ:
"ಅಳಬೇಡ ತುಂಗ.ಈ ಭಾನುವಾರವೇ ನಾನು ಮೈಸೂರಿಗೆ
ಹೋಗ್ತೀನಿ ಎಲ್ಲಾ ಗೊತ್ಮಾಡ್ಕೊಂಡು ಬರ್ತೀನಿ"
"ಹೊಂ....ನನ್ನ ಕೈ ಬಿಡ್ಬೇಡಿ.ನಮಗ್ಯಾರೂ ದಿಕ್ಕಿಲ್ಲ...."
ಆತ ಸ್ವಲ್ಪ ಬಾಗಿ, ಕುಳಿತಲ್ಲೆ ಇದ್ದ ಆಕೆಯ ತಲೆಗೂದಲನ್ನು ನಡುಗು
ತಿದ್ದ ಬೆರಳುಗಳಿಂದ ಸವರಿದ.
"ಹೂ...ತುಂಗ.ನೀನು ಯಾವ ಯೋಚ್ನೇನೂ ಮಾಡ್ಬೇಡ."
....ಆದರೆ ಯೊಚನೆ ಮಾಡಲೇ ಬೇಕಾಯಿತು ಮುಂದೆ.
ಆ ಭಾನುವಾರ ಮೂರ್ತಿ ಬರಲಿಲ್ಲ. ಮೈಸೂರಿಗೆ ಹೋಗಿರಬಹು
ದೆಂದು ಊಹಿಸಿ ಸಮಧಾನ ಪಟ್ಟಳು ತುಂಗಮ್ಮ.ತಂದೆ ಕೇಳಿದಾಗ ಅವರಿಗೂ ಹಾಗೆಯೇ ಉತ್ತರವಿತ್ತಳು.
ಆದರೆ ಎರಡು ದಿನಗಳ ಮೇಲೆ ತುಂಗಮ್ಮನ ಮನಸ್ಸು ಕ್ಷೋಭೆಯಿಂದ
ನರಳಿತು.ಬೆಳಿಗ್ಗೆ ಬೇಗನೆದ್ದು,ಭಾವನ ಕೊಠಡಿಯನ್ನು ನೊಡಿಕೊಂಡು ಬರಲು ತಮ್ಮನನ್ನು ಆಕೆ ಕಳುಹಿದಳು.