ಪುಟ:Abhaya.pdf/೧೦೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆ ಕಾಗದನನ್ನೋದಿದಾಗ ತುಂಗಮ್ಮ ತುಟಿಸಿಟ್ಟೆನ್ನಲಿಲ್ಲ ತಂದೆ ಶಾಲೆಗೆ ಹೊರಟ ಮೇಲೆ ಮಾತ್ರ ಆಕ ಗೋಳೋ ಎಂದು ಅತ್ತಳು. ಆ ದಿನ ತಂದೆಗೆ ಮಗಳ ರೋದನದ ಅರಿವಾಯಿತು; ಆದರೆ ಅರ್ಥವಾಗಲಿಲ್ಲ. ತುಂಗಮ್ಮನಿಗೆ ಭಯವಾಯಿತು ಎಲ್ಲವೂ ತಿಳಿಯದೇ ಇದ್ದರೂ ಏನ್ನು ಅರಿಯದ ಹಸುಳೆಯಾಗಿರಲಿಲ್ಲ ಆಕೆ ನಾರಾಯಣ ಮೂರ್ತಿಯನ್ನು ಕಂಡು ಮಾತನಾಡಿಯೇ ಬರಬೇಕೆಂದು ತುಂಗಮ್ಮ ತೀರ್ಮಾನಿಸಿದಳು. "ರೊಮಿಗೆ ಬೀಗ ಅಕ್ಕ" -ಎಂದ ತುಂಗಮ್ಮನ ತಮ್ಮ, ಕೊಠಡಿಯನ್ನು ನೋಡಿಬಂದು. ಅಕ್ಕನ ಮನಸ್ಸಿನ ಹೊಯ್ದಾಟವೆನೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೂ ನಾರಾಯಣ ಮೂರ್ತಿಯ ನೆಚಿತ್ರ ನರ್ತನೆಯಿಂದಾಗಿ, ಆ ಭಾವನ ಮೇಲಿದ್ದ ಮನುತೆ ಮಣ್ಣುಪಾಲಾಗಿತ್ತು. "ಯಾಕೆ ? ಊರಲ್ಲಿಲ್ವೇನು ?" "ಇಲ್ವಂತಕ್ಕಾ. ಮೈಸೂರಿಗೆ ಹೋಗಿದಾರ್ಂತೆ." ಮೈಸೂರಿಗೆ ! ಹೃದಯದ ಬೇಗುದಿಯನ್ನೆಲ್ಲ ತಣಿಸುವ ತಂಗಾಳಿಯೋಂದು ಬೀಸಿದ ಹಾಗಾಯಿತು ತುಂಗನ್ಮುನಿಗೆ ಇರಬಹುದೆ? ಇದು ಸಾಧ್ಯವೆ ? ಆತ ಒಳ್ಳೆಯವನೇ ನೆಜ-ಅಲ್ಲವೆ? ಆ ಸುದ್ದಿ ಕೇಳಿ ತುಂಗಮ್ಮಮುಗುಳು ನಕ್ಕಳು. ಆಕೆಯ ತಂದೆಯೇನೂ ಅದರಿಂದ ಸಂತುಷ್ಟರಾಗಲಿಲ್ಲ. ಅವರೆಂದರು: "ನೀನು ಅವನ ಯೋಚ್ನೆ ಬಿಟ್ಟಿಡು ತುಂಗಾ ! ನಮಗೂ ಮಾನ ಇದೆ, ಮಾ ದೆ ಇದೆ, ಬಡವರೂಂತ ಅದನ್ನೂಕರಳಕೊಂಡಿಲ್ಲತಾನೆ?" ಆ ಒಂದೊಂದು ಮಾತೂ ಶೂಲದಹಾಗೆ ತುಂಗಮ್ಮನನ್ನು ಇರಿಯು ತಿತ್ತು....ಮಾನ...ಮ ದೆ.

ನಾರಾಯಣಮೂರ್ತಿ ವಿಶ್ವಾಸಘಾತ ಮಾಡಲಾರನೆಂಬ ನೆಂಬಿಕೆ