ಪುಟ:Abhaya.pdf/೧೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಇನ್ನೂ ತುಂಗಮ್ಮನಲ್ಲಿ ಉಳಿದಿತ್ತು. ಬೀಸುತಿದ್ದ ಸುಂಟರಗಾಳಿ ಬೇಗನೆನಿಂತು, ವಾತಾವರಣ ನಿರ್ಮಲವಾಗುವುದನ್ನು ಅವಳು ಇದಿರು ನೋಡಿದಳು. ಸುಂಟರಗಾಳಿ ನಿಲ್ಲಲೇ ಇಲ್ಲ... ತುಂಗಮ್ಮ ತಮ್ಮನನ್ನು, ನಾರಾಯಣಮೂರ್ತಿ ಕೆಲಸ ಮಾಡುತಿದ್ದ ಅಫೀಸಿಗೆ ಕಳುಹಿ ಕೊಟ್ಟಳು. ಅತ ಹಿಂತಿರುಗಿ ಬ್ಂದು ಹೇಳಿದ : "ಹೋದ ಭಾನುವಾರದಿಂದ ಅವರಿಗೆ ಮೂರು ವಾರ ರಜಾನ್ಂತೆ ಅಕ್ಕಾ. ಸಿಕ್ ಲೀವ್...ಆತ ಏನಾದ್ರೇನು ? ನಿನಗ್ಯಾಕಕ್ಕ ಇಷ್ಟೊಂದು ಚಿಂತೆ ಅವನ್ದು ?" ತಮ್ಮ ಅದೇನು ಕೇಳುತಿದ್ದನೊ? ತುಂಗಮ್ಮನ ಕಿವಿಗಳಲ್ಲಿ ಮೊರೆಯುತಿದ್ದುದೊಂದೇ-ಸಿಕ್ ಲೀವ್. ತನ್ನ ಮೂರ್ತಿಗೆ ಕಾಹಿಲೆಯೆ ? ಅಯ್ಯೊ ! ಅದೇನು ಸ್ಂಕಟವೊ! ಆತ ತನಗೆ ಬರೆದು ತಿಳಿಸಬಾರದೆ ? ತನ್ನನ್ನು ಕರೆಸಿ ಕೊಳ್ಳಬಾರದೆ ? ಮೂರು ವಾರಗಳಾ ಬಳಿಕ ತಮ್ಮ ಮತ್ತೊಮ್ಮೆ ವಿಚಾರಿಸಿಕೊಂಡುಬ್ಂದ. "ಅಕ್ಕ! ಮೂರ್ತಿಗೆ ವರ್ಗನಾಯ್ತಂತೆ!" "ಅ !" "ವರ್ಗ." ತುಂಗಮ್ಮನಿಗೆ ಬನಳಿ ಬ್ಂದ್ಂತಾಯಿತು ಅವಳು ಗೋಡೆಗೊರಗಿ ಕುಸಿಕುಳಿತಳು. ಅದೊಂದನ್ನೂ ಗಮನಿಸದೆ ತಮ್ಮನರದಿಯೊಪ್ಪಿಸುತ್ತಲಿದ್ದ. "ಮೈಸೂರಿಗೆ ವರ್ಗವಾಯ್ತಂತೆ.ಇನ್ನು ಅಲ್ಲೇ ಕೆಲಸ ಮಾಡ್ತಾರಂತೆ" ಕುಸಿಕುಳಿತಿದ್ದ ತುಂಗಮ್ಮನ ಕಣ್ಣುಗಳು ವಿಚಿತ್ರವಾಗಿ ಚಲಿಸುತಿದ್ದುವು. ಅದನ್ನು ಕ್ಂಡ ತಮ್ಮನಿಗೆ ಗಾಬರಿಯಾಯಿತು. "ಅಣ್ಣಾ !"

-ಎಂದು ಆತ ಕೂಗಿದ. ಆದರೆ ತಂದೆ ಮನೆಯಲ್ಲಿರಲಿಲ್ಲ.