ಪುಟ:Abhaya.pdf/೧೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೧೩
ಅಭಯ


ಆಗ ಆಕೆಗೆ,ಮಾತು ಬಾರದ ಕಲ್ಯಾಣಿ ಮಧ್ಯಾಹ್ನ ಒಂದೆಡೆ ಜಜ್ಜಿ
ಹೋಗಿದ್ದ ತಟ್ಟೆಯಲ್ಲಿ ತುಗಂಮ್ಮನಿಗೆ ಊಟ ತಂದುಕೊಟ್ಟುದು ನೆನ
ಪಾಯಿತು.ಜಲಜ ಪಕ್ಕಕ್ಕೆ ಹೊರಳಿ,ದಿಂಬಿಗೆ ಕೆನ್ನೆಯಾನಿಸಿ,ಒಂದು
ಅಂಗೈಯನ್ನು ಇನ್ನೊಂದರಿಂದ ಅಪ್ಪಿಕೊಂಡು,ನಕ್ಕಳು.
ಅದೇನೆಂದು ಕೇಳಿದ್ದಳು ತುಂಗಮ್ಮ ಆಗ.ತಾನು ಹೇಳಿರಲಿಲ್ಲ.
ಹೇಳುವುದಾದರೂ ಹೇಗೆ?ಅದೂ ತುಂಗಮ್ಮನ ಈಗಿನ ಸ್ಥಿತಿಯಲ್ಲಿ?
ಜಲಜ ಎಚ್ಚರಗೊಂಡುದನ್ನು ಗಮನಿಸಿದರು ಸರಸಮ್ಮ.
"ಎದ್ದಿಯೇನೆ ಜಲಜಾ?"
"ಏನು ದೊಡ್ಡಮ್ಮಾ?"
"ತುಂಗಮ್ಮನ ಬಾಣಂತಿತನಕ್ಕೆ ಏನು ಮಾಡೋಣವೆ?"
ಜಲಜೆ ಎದ್ದು ಕುಳಿತಳು ಆಕೆಯ ಮುಖ

ಗಂಭೀರವಾಯಿತು.
"ಆಸ್ಪತ್ರೆಗೆ ಸೇರಿಸೋಣಾಂತೀಯ?"
"ಅಯ್ಯೊ,ಬೇಡಿ ದೊಡ್ಡಮ್ಮ...ಅಲ್ದೆ ಆಕೆ ಮನೆಯವರು--"
"ಈ ಊರಲ್ಲಿ ಯಾರೂ ಇಲ್ಲ.ಆದರೂ ನೀನು ಹೇಳೋದು ನಿಜ,
ಇಲ್ಲೇ ನಮ್ಜತೇಲೆ ಇದ್ರೆ ಆಕೆ ಮನಸ್ಸು ಗಟ್ಟಿಯಾಗಿರುತ್ತೆ"
"ಹೂಂ,ಹೌದು."
"ಯಾರು ಆಕೆ ಆರೈಕೆ ನೋಡೋರು?"
"ಇದೊಳ್ಳೇ ಕೇಳ್ತಿರಲ್ಲ!ನಾನಿಲ್ವೆ ದೊಡ್ಡಮ್ಮ?"
"ಸರಿ,ಆಗಲಮ್ಮ."
ಜಲಜಳಿಗೆ ಸಂತೋಷವಾಯಿತು.ಆ ಸಂತೋಷದಿಂದ ನಗುತ್ತಿದ್ದ
ಚಿಗರೆ ಕಣ್ಣುಗಳಿಂದಲೇ ಜಲಜ,ಮುಖತೊಳೆದುಕೊಂಡು ಒಳಬಂದ
ತುಂಗಮ್ಮನನ್ನು ನೋಡಿದಳು.
"ತುಂಗಕ್ಕಾ!ಎಲ್ಲಿ,ಕೊಡು."
"ಏನು ಕೊಡ್ಲಿ ಜಲಜ?"
"ನಿನ್ನ ಚಾಕರಿಗೆ ದೊಡ್ಡಮ್ಮನನ್ನ ನೇಮಿಸಿದಾರೆ.ಸಂಬಳ ಕೊಡು
ಈ ತಿಂಗಳಿಂದು-ಅಡ್ವಾನ್ಸ್?"
ತುಂಗಮ್ಮನಿಗೂ ನಗು ಬಂತು.
8