"ಅಯ್ಯೊ!ನಾನೇನು ಕೊಡ್ಲೆ ಬಡವಳು?"
"ಓ ಹೊ ಹೊ ಹೊ,"ಎಂದಳು ಜಲಜ;"ನೋಡಿದ್ರಾ
ದೊಡ್ಡಮ್ಮ,ಹ್ಯಾಗೆ ಮೋಸ ಮಾಡ್ಬೇಕೂಂತಿದಾಳೆ!ಅಷ್ಟು ಸುಲಭವಾಗಿ
ಈ ಶನಿ ತೊಲಗುತ್ತೆ ಅಂತ ತಿಳಕೊಂಡಳೇನೊ!ಹುಂ...ಈಗ್ಲೇ ಹೇಳಿದೀನಿ
ತುಂಗಕ್ಕ.ಕೆಲಸ ಮುಗಿದ್ಮೇಲಾದ್ರೂ ನನ್ಸಂಬಳ.."
"ಅದೆಂಥ ಸಂಬಳ ಬೇಕೂಂತ ಸ್ಪಷ್ಟವಾಗಿ ಹೇಳ್ಬಾರ್ ದೇನೆ ಜಲಜ? "
--ಎಂದು ಸರಸಮ್ಮ ಸೂಚಿಸಿದರು.ಅದೇನೆಂದು ಅವರಿಗೂ ಅರ್ಥ
ವಾಗಿರಲಿಲ್ಲಿ.
ತಾನು ಕೊಡಬೇಕಾಗಿದ್ದ ಉತ್ತರವನ್ನು ಸ್ಮರಿಸಿಕೊಳ್ಳುತ್ತಲೆ ಜಲಜಳ
ಮುಖ ಕೆಂಪಗಾಯಿತು ಆಕೆಯ ಆಟ ನೋಡಿ ಸರಸಮ್ಮನಿಗೂ ಕುತೂಹಲ
ವೆನಿಸಿತು.
"ಅದೇನೆ ಜಲಜ?"
"ತುಂಗಕ್ಕನ ಮಗೂನ ಆಡಿಸೋ ಸಾಕೋ ಜವಾಬ್ದಾರೀನೆಲ್ಲ
ನಂಗೇ ವಹಿಸ್ಕೊಡ್ಬೇಕು.ಮಗೂಗೆ ಹೆಸರೂ ನಾನೇ ಇಡ್ಬೇಕು.ಇದೇ
ಸಂಬಳ!"
ಸರಸಮ್ಮ ನಕ್ಕು,"ಒಪ್ಪಿಗೆಯೇನೆ ತುಂಗಾ?"ಎಂದು ಕೇಳಿದರು.
ತುಂಗಮ್ಮ 'ಹೂಂ'ಎಂದಳು.
ಸರಸಮ್ಮ ಆಕೆಯನ್ನು ಸಮೀಪಕ್ಕೆ ಕರೆದರು:
"ಇಲ್ಲಿ ಬಾ"ಎಂದು,
ತನಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲವೆಂದು ಸರಸಮ್ಮನ
ಮೇಲೆ ತುಂಗಮ್ಮ ಸಿಟ್ಟಾದಳು.
"ಕತೆ ಓದಿದ್ದಾಯ್ತಾ?"
--ಎಂದು ಜಲಜ ಕೇಳಿದಳು,ತಾನು ಮಲಗಿದಾಗ ತುಂಗಮ್ಮ
ಪುಸ್ತಕವನ್ನೆತ್ತಿಕೊಂಡುದನ್ನು ಜ್ಞಾಪಿಸಿಕೊಳ್ಳುತ್ತಾ.
"ಇಲ್ಲ".
"ತುಂಗ ಕತೆ ಓದ್ಲಿಲ್ಲ,ಹೇಳ್ತಾ ಇದ್ಲು"
--ಎಂದು ಸರಸಮ್ಮ ಹೇಳಿದಾಗ ಮಾತ್ರ ಜಲಜೆಗೆ ಕೆಡುಕೆನಿಸಿತು.