ಪುಟ:Abhaya.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೧೫

ಅಷ್ಟು ಹೊತ್ತೂ ನಿನ್ನೆ ಹೋಗಿ ಎಂತಹ ಅನ್ಯಾಯನಾಗಿತ್ತು! ಎಚ್ಚರ
ವಿದ್ದಿದ್ದರೆ ತಾನೂ ಕಿದಿಗೊಡುತಿದ್ದಳು... ಇನ್ನು ತುಂಗಕ್ಕನೇ ತನಗೆ ಹೇಳುವ
ತನಕ ತಾನು ಕಾದಿರಬೇಕು ಇಲ್ಲವೆ ದೊಡ್ಡಮ್ಮನನ್ನು ಕೇಳಿ ತಾನು ತಿಳಿಯ
ಬೇಕು. ತುಂಗಕ್ಕನ "ಆತ' ಹೇಗಿರುವನೊ! ಕರಸಿನಲ್ಲಿ ತಾನು ಕಂಡಿದ್ದ
ಆ ಮಹಾನುಭಾವ.
“ಎಲ್ಲಾ ಬರಕೊಂಡ್ರಾ ದೊಡ್ಡಮ್ಮ??
“ ಹೊಂ ಹೂಂ... ಮಾತಿನಮಲ್ಲಿ! ಏಳು ಕಣ್ಣು ಹ್ಯಾಗide ನೋಡು
ಕುಡ್ದೋರ ಹಾಗೆ! ಮುಖ ತೊಳ್ಳೊಂಡು ಬಾ
ಜಲಜೆಗೆ ನಗು ಬಂತು ಕುಡಿದವರ ರೂಪ ಅಕೆಗೆ ಅಪರಿಚಿತ
ವಾಗಿರಲಿಲ್ಲ. ನೆರಡು ಮೂರು ಸಾರೆ ಪೋಲೀಸರು ನಡುರಾತ್ರೆಯ ಹೊತ್ತು,
ಕುಡಿದು ಅಮಲೇರಿ ಮಾತನಾಡುತಿದ್ದ ಒಬ್ಬಿಬ್ಬಿರು ಹುಡುಗಿಯರನ್ನು
ಕರೆತಂದು ಅಭಯಧಾಮವಲ್ಲಿ ಬಿಟ್ಟುದನ್ನು ಜಲಜ ಕಂಡಿದ್ದಳು. ಮರುದಿನ
ಆ ಹುಡುಗಿಯರಿಗೆ ಕಾಣದಂತೆ ಜಲಜ, ದೊಡ್ಡಮ್ಮನ ಕೊರಡಿಗೆ ಬಂದು,
ಹತ್ತಾರು ಹುಡುಗಿಯರೆದುರು ತಾನು ಕುಡಿದವಳಂತೆ ನಟಿಸುತ್ತ ನಗೆಯ
ಕೋಲಾಹಲವೆಬ್ಬಿಸಿದ್ದಳು.
ಆಗ ತಾವೂ ನಗುತ್ತ, "ಹಾಗೆ ಅಣಕಿಸಬಾರದು” ಎಂದು ಹೇಳುವು
ದನ್ನೂ ಸರಸಮ್ಮ ಮರೆತಿದ್ದರು.
ಜಲಜ ಹೊರ ಹೋಶೊಶಕೆ ೫ ಸರಸಮ್ಮ ಹೇಳಿದರು :
“ ನಿಮ್ಮ ತಂದೆಗೆ ಕಾಗದ ಬರೀಮ್ಮ. ನಾನೂ ಬರೀತೀನಿ. ಎರಡನ್ನೂ
ಜತೇಲೆ ಕಳಿಸೋಣ.
“ ಹೂಂ, ಎಂದು ತುಂಗಮ್ಮ ಒಪ್ಪಿದಳು.
“ ಇವತ್ತೇನೋ ಅಂಚೆಗೆ ತಡವಾಯ್ತು ನಾಳೆ ಹೊರಟ್ಟೋಗುತ್ತೆ."
ತುಂಗಮ್ಮ, ಅಭಯಧಾಮದ ಮುದ್ರೆಯಿದ್ದ ಒಂದು ಹಾಳೆಯನ್ನೆತ್ತಿ
ಕೊಂಡು ಲೇಖನಿಯನ್ನು ಮಸಿಯಲ್ಲದ್ದಿ ಬರೆಯತೊಡಗಿದಳು. ಮೊದ
ಮೊದಲು, ತನ್ನನ್ನೆ ದಿಟ್ಟಿಸುತಿದ್ದ ಉಪಾಧ್ಯಾಯರು ಎದುರು ತಾನು
ಪರೀಕ್ಷೆಯ ವಾಠ ಬರೆಯುತಿದ್ದಂತೆ ಆಕೆಗೆ ಕಸಿವಿಸಿಯಾಯಿತು ಆದರೆ
ಮೆಲ್ಲಮೆಲ್ಲನೆ, ಬರೆಯುತಿದ್ದಂತೆ, ಮವಸಿನಲ್ಲಿದ್ದ. ಪದಗಳು ರೂಪು