ಪುಟ:Abhaya.pdf/೧೨೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಜಲಜ ಸರಿಯಾಗಿಯೇ ಹೇಳಿದಳು ಹಾಗೆಯೇ ಆರಂಭಿಸಿದರು ಸರಸಮ್ಮ.

"ಹುಡುಗೀರಾ, ಇವತ್ತು ನಮಗೆಲ್ಲಾ ಬಹಳ ಸಂತೋಷದ ದಿವಸ...."

ಗಂಭೀರವಾದ ಕಂಠದಿಂದ ಏಕ ಪ್ರಕಾರವಾಗಿ ಆ ಸ್ವರ ಹೊರಡುತಿತ್ತು.

"ನಮ್ಮ ಮಧ್ಯೆ ಈದಿನ ಇನ್ನೊಬ್ಬ ಸೋದರಿ ಬಂದಿದ್ದಾಳೆ. ಅವಳ ಹೆಸರು ತುಂಗಮ್ಮ. ನೀವೆಲ್ಲಾ ಈಗಾಗಲೇ ಅವಳನ್ನು ನೋಡಿದ್ಡೀರಿ. ಅಭಯ ಯಾಚಿಸಿ ಬಂದಿರುವ ಆಕೆಯನ್ನು ನಾವು ಪ್ರೀತಿಯಿಂದ ಸ್ವಾಗತಿಸೋಣ ಆಕೆಗೂ ನಮಗೂ ಒಟ್ಟಾಗಿಯೇ ದಯಾಮಯನಾದ ಭಗವಂತನು ಮಂಗಳವನ್ನುಂಟು ಮಾಡಲೆಂದು ಪ್ರಾರ್ಧಿದಸೋಣ."

ಜಲಜ ಮೌನವಗಿದ್ದಳು. ತುಂಗಮ್ಮನಿಗೆ ಆ ಭಾಷಣ ಕೇಳಿ ದುಃಖ ಒತ್ತರಿಸಿ ಬಂತು ಎಲ್ಲರೊ ಕೈ ಜೋಡಿಸಿ, ಎವೆಮುಚ್ಚಿ ತೆರೆಯುವುದರೊಳಗಾಗಿ ತಮ್ಮ ಪ್ರಾರ್ಧನೆಯನ್ನು ಮುಗಿಸಿದರು ತಬ್ಬಿಬ್ಬಾದ ತುಂಗಮ್ಮ ಮಾತ್ರ ಸುಮ್ಮನಿದ್ದಳು. ಆ ಪ್ರಾರ್ಥನೆ ಎಂದೋ ಮುಗಿದು ಹೋದ ಆಂಶವೆಂಬಂತೆ, ಪ್ರತಿಯೊಬ್ಬರೂ ವಾಯಸದರುಚಿ ನೋಡ ತೊಡಗಿದರು

ಸರಸಮ್ಮ ಸಣ್ಣ ತಟ್ಟೆಯಲ್ಲಿ ತಾನೂ ಒಂದಿಷ್ಟು ತರಿಸಿಕೊಂಡು, ತುಂಗಮ್ಮನತ್ತ ನೋಡಿ ಮುಗುಳ್ನಕ್ಕು, ಒಂದೊಂದೇ ಚಮಚ ಪಾಯಸವನ್ನೆತ್ತಿ ತಮ್ಮ ಬಾಯಿಗಿಟ್ಟು ಕೊಂಡರು.

ಉಣ್ಣುತಿದ್ದವರ ಗುಜುಗುಜು ಸದ್ದು ಆರಂಭವಾದಾಗ ಜಲಜ ಮಾತನಾಡಿದಳು.

"ಈ ಭಾಷಣ ನಾನು ಕೇಳ್ತಿರೋದು ಎಪ್ಪತ್ತಾರನೆಯ ಸಲ ಅಕ್ಕ."

"ನಿಜವಾಗ್ಲೂ?"

"ಹೂಂ,"

"ಹೆಸರುಮಾತ್ರ ಬದಲಾಯಿಸ್ತಾರೆ ಪ್ರತಿಸಲಾನೂ. ಈ ನಲ್ಕು ವರ್ಷದಲ್ಲಿ ಒಟ್ಟು ಎಪ್ಪತ್ತಾರು ಜನಬಂದ ಹಾಗಾಯ್ತು ಈ ನಾಲ್ಕು ವರ್ಷದಲ್ಲಿ ಒಟ್ಟು ಎಪ್ಪತ್ತಾರು ಜನಬಂದ ಹಾಗಾಯ್ತು ಈಗ ಉಳಿದಿರೋರು ನಿನ್ನನ್ನೂ ಸೇರಿಸಿ ಮೂವಯತ್ತೊಂದು ಜನ."

ಅನ್ನ -ಸಾರು ತುಂಗಮ್ಮನಿಗೆ ರುಚಿಸಲಿಲ್ಲ. ಏನೂ ಬೇಡವೆಂದಿತು ಮನಸ್ಸು.