ಪುಟ:Abhaya.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

...ನೀರು ಮಜ್ಜಿಗೆ ಬಂದು ಹೋಯಿತು, ಬಿಳಿಯ ನೀರು.

ಯಾರೋ ತನ್ನ ತಟ್ಟೆಯನ್ನು ಕಸಕೊಂಡಂತೆ ತೋರಿತು.ಜಲಜ ಅದನ್ನೆತ್ತಿ ತನ್ನದರೊಳಗಿಟ್ಟು ಹೇಳುತಿದ್ದಳು:

"ಏಳಕ್ಕ... ಏಳು... ಕೈ ತೊಳೀಯೋಣ"

"ಹುಂ... ತಟ್ಟೆ... ತಟ್ಟೆಕೊಡು!"

"ಮಾತನಾಡದೆ ನಡಿಯಕ್ಕ."

"ಬೇಡ ಜಲಜ ನನ್ನ ತಟ್ಟೆ ನಾನು ತೊಳೀಬೇಕು."

"ಒಳ್ಳೇ ತಮಾಷೆ! ನಿನ್ನೆ ಏನಂದ್ರು ದೊಡ್ಡಮ್ಮ? ನಾನು ನಿನ್ನ ಚಾಕರಿ ಮಾಡ್ಬೇಕೂಂತ ಹೇಳ್ಲಿಲ್ಲ?"

ತುಂಗಮ್ಮ ಎದ್ದು ನಿಲ್ಲುತ್ತ ಅಂದಳು:

"ಚಾಕರಿ! ಅಂಧ ಮಾತು ಆಡ್ಬೇಡ್ವೆ ಜಲಜ."

ಜಲಜ ಸುಮ್ಮನಾದಳು ದೊಡ್ಡಮ್ಮ ಆಗಲೆ ಅಂದಿದ್ದರು ಆಕೆಯ ಮನಸ್ಸು ನೋಯಿಸುವಂಧಾದ್ದು ಏನನ್ನೂ ಹೇಳಬೇಡವೆಂದು... ಜಲಜೆಗೆದಿಗಿಲಾಯಿತು. ತಾನು ಈಗಾಗಲೇ ತುಂಗಮ್ಮನ ಮನಸ್ಸು ನೋಯಿಸಿದ್ದಳಲ್ಲವೆ?

ಅಂತೂ ಮತ್ತೆ ಕೊತಡಿ...

ಮಾವಳ್ಳಿಯ ಮನೆಯಲ್ಲಿ ಆ ಯಜಮಾನಿತಿ ಊಟವಾದ ಮೇಲೆ ಎಲೆ ಅಡಿಕೆ ಹಾಕಿಕೊಳ್ಳುವುದಿತ್ತು ಆಕೆ ತುಂಗಮ್ಮನಿಗೂ ತಗೋ ಅಂದಿದ್ದಳು ನಾಲ್ಕಾರು ಬಾರಿ. ಆದರೆ ದುಃಖಿನಿಯಾಗಿದ್ದ ತುಂಗಮ್ಮನಿಗೆ ಯಾವುದೂ ಬೀಕಾಗಿರಲಿಲ್ಲ. ಮನೆಯಾಕೆ ಒತ್ತಾಯಿಸಿದಾಗ ಒಂದು ಚೂರು ಅಡಿಕೆಯನ್ನಷ್ಟೆ ಬಾಯಿಗೆ ಹಾಕಿಕೊಂಡು ತುಂಗಮ್ಮ ಸುಮ್ಮನಾಗುತ್ತಿದ್ದಳು.

ಇಲ್ಲಿ ಅಂತಹ ಯಾವ ತೊಂದರೆಯೂ ಇರಲಿಲ್ಲ.

....ಜಲಜಳನ್ನು ಸರಸಮ್ಮ ತಮ್ಮ ಕೊಠಡಿಗೆ ಕರೆದರು.

ತುಂಗಮ್ಮ ದಿಂಬನ್ನು ಗೋಡೆಗೊರಗಿಸಿ ಅದಕ್ಕೆ ಆತು ಕುಳಿತು, ಛಾವಣಿಯನ್ನು ದಿಟ್ಟಿಸಿದಳು ಇಲ್ಲಿಯೂ ಮರದ ಮೋಪುಗಳಿದ್ದುವು. ಆ ಕಟ್ಟಡದ ತಾರಸಿಯೆಲ್ಲ ಮರದ ಮೋಪುಗಳಮೇಲಿಯೇ ನಿಂತಿರಬೇಕು