ಪುಟ:Abhaya.pdf/೧೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಜಲಜ , ತನ್ನ ಅಕ್ಕನ ಬಳಿಯಲ್ಲೆ ಕುಳಿತುಕೊಂಡಳು.

"ಇನ್ನು ಒಂದ್ತಿಂಗಳಾಮ್ಮೇಲೆ ನೀನೂ ಜತೇಲೆ ಮಾರ್ಕೆಟಿಗೆ ಹೋಗಿಬರೋಣ ಅಕ್ಕ. ಒಂದು ವಾರವೆಲ್ಲ ನಾವಿಬ್ರೇ ಅಡುಗೆ ಜವಾಬ್ದಾರಿ ವಹಿಸ್ಕೊಂಡರಾಯ್ತು."

....ಒಂದು ತಿಂಗಲ ಮುಂದಿನ , ತನ್ನ ಬಾಣಂತಿತನದ ಆನಂತರದ , ಮಾತು.

"ಯಾಕೆ , ನಂಬ್ಕೆ ಬರಲ್ವೆ ನಿಂಗೆ ? ದೊಡ್ಡಮ್ಮ ಖಂಡಿತ ಕೂಡದು ಅನ್ನೋಲ್ಲ ನಾನು ಪಂದ್ಯ ಕಟ್ತೀನಿ ಬೇಕಾದ್ರೆ. ಬೇರೆ ಯಾರ್ಗೊಸಿಗ್ದೇ ಇರೋವಷ್ಟು ಮುಂಚಿತವಾಗಿ ಹೊರಗೆ ಹೋಗ್ಬರೋ ಸ್ವಾತಂತ್ರ್ಯ ನಿಂಗೆ ಸಿಗುತ್ತೆ,"

"ನೀನು ಬಹಳ ಒಳ್ಳೆಯವಳು ಜಲಜ"

"ಅಯ್ಯೊ, ನಿಮಗೆ ಹುಚ್ಚು! ನಾನು ಒಳ್ಳೆಯವಳಾಗಿದ್ರೆ ಇಲ್ಲಿ ಯಾಕಿರ್ತಿದ್ದೆ ಹೇಳು!"

ಒಳ್ಳೆಯವರು ಯಾರೂ ಅಲ್ಲಿ - ಅಭಯಧಾಮದಲ್ಲಿ-ಇರಬೇಕಾದ ಅಗತ್ಯವಿಲ್ಲ ಅಲ್ಲವೆ?....ಸತ್ಯವನ್ನೆ ಹೇಳಿದ್ದಳು ಜಲಜ.

ತುಂಗಮ್ಮನ ಮುಖ ಕಪ್ಪಿಟ್ಟು ಡೃಷ್ಟಿ ಕೆಳಕ್ಕಿಳಿಯಿತು.

ಜಲಜೆ, ತಾನು ಮಾಡಿದ್ದ ಪ್ರಮಾದ ತಿಳಿದು, ತುಟಿಕಚ್ಚಿಕೊಂಡಳು. ಮಾಡಿದ ತಪ್ಪಿನ್ನು ತಿದ್ದಿಲೆತ್ನಿಸುತ್ತ ಆಕೆ ಅಂದಳು :

"ನಂಗೆ ಬುದ್ದಿ ಇಲ್ಲ ತುಂಗಕ್ಕ. ನನ್ನ ವಿಷಯ ಹಾಗಂದೆ. ನೀನು ಮನಸ್ಸಿಗೆ ಹಚ್ಕೋ ಬೇಡ್ವೆ ಅದನ್ನ."

ಜಲಜಳ ಅಳುಮೋರೆ ಕಂಡು ತನ್ನ ದುಃಖವನ್ನು ಮರೆತು ತುಂಗಮ್ಮ, ಗೆಳತಿಯನ್ನು ಸಮಜಾಯಿಸಲೆಂದು ಮುಗುಳ್ನಕ್ಕಳು.

"ಅಂಧಾದ್ದೇನು ನೀನು ಅಂದಿರೋದು ? ನಿಜಸ್ಧಿತಿ, ನಿಜಸ್ಧಿತೀನೆ ಅಲ್ವಾ ?"

ಆಗಲೆ ಲಲಿತಾ ಅಲ್ಲಿಗೆ ಬಂದುದರಿಂದ ಮಾತು ಬದಲಾಯಿಸುವುದು ಸುಲಭವಾಯಿತು.

ಲಲಿತೆಯ ಮೈ ಬಣ್ಣ ಸಾದಾಗಪ್ಪು. ಎತ್ತರದ ನಿಲುವು. ಹೃಷ್ಟ