ಪುಟ:Abhaya.pdf/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಪುಷ್ಟವಾದ ಮೈ ಕೈ. ವಿಶಾಲವಾದ ಮುಖ. ನೋಡಿದವರು ಮೊದಲು ಮಂಕಾಗಿ ಬಳಿಕ ಮೆಚ್ಚಬೇಕಾದಂತಹ ರೂಪ. ಎದೆಯನ್ನು ಬಿಗಿದಿದ್ದ್ ಮಾಸಿದ ರವಕೆಯಾಗಲೀ ಮಸಕಾದ ಸೀರೆಯಾಗಲೀ ಆಕೆಯ ಆಕರ್ಷಣೆಯನ್ನು ಕಡಿಮೆಗೊಳಿಸಲು ಸಮರ್ಧವಾಗಿರಲಿಲ್ಲ್.

"ನೋಡಿದ್ರ್ಯಾ ತುಂಗಕ್ಕ? ಹ್ಯಾಗಿದಾಳೆ ನಮ್ಮ ಲಲಿತಾ?"

"ಬನ್ನಿ"

-ಎಂದು ತುಂಗಮ್ಮ ಕರೆದಳು. ಜಲಜ ನಕ್ಕಳು.

"ಓ! ಬನ್ನಿ! ಗೌರವದ ಬಹುವಚನ! ಅಕ್ಕಾ-ಈಗ್ಲೇ ಹೇಳ್ತೀನಿ. ಈ ಲಲಿತಾ,ಬಲು ಮೋಹಕವಾಗಿ ನಕ್ಕಳು.

"ಏಳೆ ಜಲಜ, ಹೊತ್ತಾಯ್ತು. ಐದು ಘಂಟೆಯೊಳಗೇ ವಾಪಸು ಬ‌ರಬೇಕು."

ಜಲಜ ಚಡಪಡಿಸಿ ಎದ್ದಳು. ಕನ್ನಡಿಯಲ್ಲೊಮ್ಮ ಮುಖನೋಡಿಕೊಂಡು,"ಸರಿಯಾಗಿದೆ!" ಎಂದಳು.

ಆಕೆ ಲಲಿತೆಯ ಮಗ್ಗುಲಲ್ಲಿ ನಿಂತರೆ ಚಿಕ್ಕವಳಾಗಿ ತೋರುತಿದ್ದಳು-ಬಲು ಚಿಕ್ಕವಳಾಗಿ.

ತುಂಗಮ್ಮನ ನೋಟದ ಹಿಂದಿನ ಯೋಚನೆಯನ್ನು ಊಹಿಸಿಕೊಳ್ಳುವುದು ಜಲಜೆಗೆ ಕಷ್ಟವಾಗಲಿಲ್ಲ.

"ನಿನ್ನೆತಾನೇ ಜ್ವರದಿಂದ ಎದ್ದು ಸ್ವಲ್ಪ ಬಡಕಲಾಗಿದೀನಿ ಅಷ್ಟೆ. ಇಲ್ಲಿದ್ರೆ ನಾನೂ ತಕ್ಮಟ್ಟಗೆ ಭಾರೀ ಇಸಂ ಅಂತಾನೆ ಇಟ್ಕೊ."

ತುಂಗಮ್ಮ ನಕ್ಕಳು.

"ಅಲ್ಪ ಅಂತೀಯಾ?"

"ಓಹೊ!"

"ಆದರೆ ಒಂದು ವಿಷಯ ತುಂಗಕ್ಕ. ಈ ಲಲಿತಾ ನನ್ನ ತೇಲಿದ್ರೆ ನಾನು ಯಾವುದಕ್ಕೂ ದಿಗಿಲು ಬೀಳ್ಬೇಕಾದ್ದಿಲ್ಲ. ಈ ದೇವಿ, ನಮ್ಮ ದೊಡ್ಡಮ್ಮ ಹೇಳೋ ಹಾಗೆ, ಅಭಯದ ಸಾಕ್ಷಾತ್ಕಾರ. ಈಕೆ ಜತೇಲಿ