ಪುಟ:Abhaya.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಇಷ್ಟಕ್ಕೂ ಒಂದೇ ಆಣೆ ಅಕ್ಕ ಒಂದಾಣೆಗೆ ನಾಲ್ವತ್ತು!ನನ್ನ ಹತ್ರ ಇದ್ದಿದ್ದು ಒಂದೇ ಆಣೆ. ಅದನ್ನ ಕೊಟ್ಟಟ್ಟು ತಗೊಂಡೆ.ಅಭಯ ಧಾಮಕ್ಕೆ ತಿಂಡಿ ಏನು ತಂದ್ರೂನೂ ಎಲ್ಲರೂ ಹಂಚ್ಕೋಬೇಕು.ಇವತ್ತೇ ನ್ಮಾಡ್ತೀನಿ ಗೊತ್ತೆ? ದೊಡ್ಡ ಮ್ಮಂಗೆ ಎರಡ್ಕೊಡ್ತೀನಿ ಕುರುಡಿ-ಸುಂದ್ರಾ, ಲಲಿತಾ ಮತ್ತು ನಂಗೆ ಎರಡೆರಡು.ಇಪ್ಪ ತ್ತೇಳು ಹುಡುಗೀರಿಗೆ ಒಂದೊಂದು. ಉಳಿದದ್ದೆಲ್ಲಾ ನಿಂಗೆ.ಐದು."

ಆ ಮಾತುಗಳೆಲ್ಲಾ ಸಿಹಿಯಾಗಿದ್ದುವು,ಬಲು ಸಿಹಿ. ಪೆಪ್ಪರಮೆಂಟು ಆ ಮಾತಿಗಿಂತಲೂ ಹೆಚ್ಚು ರುಚಿಕರವಾಗುವುದು ಸಾಧ್ಯಾವಿರಲಿಲ್ಲ.

"ನಂಗೆ ಒಂದೇ ಒಂದು ಸಾಕು ಜಲಜ."

"ಉಂಟೆ ಎಲ್ಲಾದ್ರೊ? ಐದು ನನ್ನ್ ಕ್ಕಂಗೆ- ನನ್ನಕ್ಕಂಗೆ ಐದು!"