ಪುಟ:Abhaya.pdf/೧೩೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಹೆರಿಗೆಯ ನೋವಿನಿಂದ ತುಂಗಮ್ಮ ನರಳಿದಳು.ಆ ನರಳಾಟ,

ಮರಣಾಸನ್ನವಾದ ಜೀವ ನೋವು ತಡೆಯದೆ ಮಾಡುವ ಆರ್ತನಾದದಂತಿತ್ತು ಆಕೆ ದಿಂಬಿನೊಂದು ತುದಿಯನ್ನು ಕಿತ್ತು ಕಿತ್ತು ಕಚ್ಚುತ್ತಾ ಹೊರಡಿದಳು.

ಅಲ್ಲಿನ ಯಾರಿಗೂ ಅಂತಹ ದೃಶ್ಯ ಹೊಸದಾಗಿರಲಿಲ್ಲ.ಅದೇ

ಮೊದಲನೆಯ ಹೆರಿಗೆಯಾಗಿರಲಿಲ್ಲ ಆ ಕೊರಡಿಯಲ್ಲಿ.

ಆದರೂ,ಅಭಯಧಾಮದ ವಾತಾವರಣ ಎಂದಿಗಿಂತ ಭಿನ್ನವಾಗಿತ್ತು.

ಒಂದು ರೀತಿಯ ಮೌನವಿತ್ತಲ್ಲಿ;ಅವ್ಯಕ್ತವಾದ ಕಾತರವಿತ್ತು.

ಗಂಡಸರು ಯಾರೂ ಇಲ್ಲದ ಕಟ್ಟಡ ನಿಜ.ಅದರೂ ಕೊಠಡಿಯ

ಬಾಗಿಲನ್ನು ಸದ್ದಿಲ್ಲದೆ ಮುಂದಕ್ಕೆ ತಳ್ಳಿ ಸರಸಮ್ಮ,ಜಲಜ-ಅದ್ಲಲಿತೆ-ಸಾವಿತ್ರಿಯರ ನೆರವಿನೊಡನೆ,ತುಂಗಮ್ಮನ ಆರೈಕೆಗೆ ನಿಂತರು.

ಅಂತೂ ಅಭಯಧಾಮ ಸೇರಿದ ಹತ್ತನೆಯ ದಿನದಲ್ಲಿ ತುಂಗಮ್ಮ

ಸಾವಿನೊಡನೆ ಸೆಣಸಡಿದಳು.

ಅದು ಬೆಳಗಿನ ಹೊತ್ತು.ಅಧ್ಯಾಪಿಕೆ ರಾಜಮ್ಮ ಬಂದರು.ಬಂದವರು

ಒಳಕ್ಕೆ ಇಣಿಕಿ, ಎಲ್ಲವೂ ಸರಿಯಾಗಿಯೇ ಇವೆ ಎನ್ನುವಂತೆ ಮುಖ ಭಾವ ತೋರಿಸುತ್ತ,ತರಗತಿ ನಡೆಯ ಬೇಕಾದ ಹಜಾರದತ್ತ ಹೋದರು.ಹೆರಿಗೆಯ ಕೊಠಡಿಯಲ್ಲಿದ್ದ ಮೂವರು ಹುಡುಗಿಯರುನ್ನೂ ಕುರುಡಿ-ಮೂಗಿಯರನ್ನೂ ಹೊರತು ಉಳಿದವರೆಲ್ಲ ತರಗತಿ ಬಂದುದಾಯಿತು.ರಾಜಮ್ಮನೇನೋ ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿಯ ಅಕ್ಷರ-ಪದಗಳನ್ನು ಹೇಳಿಕೊಡ ತೊಡಗಿದರು.ಆ ಹುಡುಗಿಯರ ದೃಷ್ಟಿಯೆಲ್ಲ ತಮ್ಮ ಅಧ್ಯಾಪಿಕೆಯ ಮೇಲೆಯೇ ಇತ್ತು ಆದರೆ ಕಿವಿಗಳೆಲ್ಲ ತುಂಗಮ್ಮನ ಕೊಠಡಿಯಿಂದ ಬರುತಿದ್ದ ಸದ್ದುಗಳಿಗೆ ಮೀಸಲಾಗಿದ್ದುವು.ಆಗೊಮ್ಮೆ ಈಗೊಮ್ಮೆ.