ಪುಟ:Abhaya.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಈ ರೀತಿ ಹೇಳಿದರೆ ಮೇಲು-ಇಲ್ಲಿರುವುದೆಲ್ಲ ವಾಸ್ತವತೆಯ ಆಧಾರದ

ಮೇಲೆ ಸೃಷ್ಟಿಯಾಗಿರುವ ಕಾಲ್ಪನಿಕ ವಾತ್ರಗಳು."

ಅವರು ಒಪ್ಪಿದರು ಆದರೆ ಬೇರೆ ಪ್ರಶ್ನೆ ಬಂತು

"ನಮ್ಮ ಸಮಾಜದ ಒಂದು ಮುಖ್ಯ ಸಮಸ್ಯೆಯನ್ನು ಈ ಕಾದಂಬರಿ

ಯಲ್ಲಿ ಚಿತ್ರಿಸಿದ್ದೀರಿ: ಆದರೆ ಸಮಸ್ಯೆಗೆ ಪರಿಹಾರ ಸೂಚಿಸಿಲ್ಲವೆಂದು ಕೆಲವರು ಓದುಗರು ಟೇಕಿಸಬಹುದಲ್ಲವೆ?"

"ನಿಜ, ಆದರೆ ಪರಿಹಾರವನ್ನು ಗ್ರಂಥಕರ್ತ ಸೂಚಿಸಬೇಕಾದ್ದಿಲ್ಲ.

ಪ್ರತಿಯೊಂದು ಸಮಸ್ಯೆಯ ಚಿತ್ರಣದಲ್ಲೂ ಪರಿಹಾರ ತೋರಿಸಲೇಬೇಕೆನ್ನುವುದು ಆದರ್ಶವಾದದ ಇನ್ನೊಂದು ಪ್ರವೃತ್ತಿ ಆದರೆ ಸಾಹಿತ್ಯ ಯಾವಾಗಲೂ ಆದರ್ಶ ವ್ಯಕ್ತಿಗಳ ಚಿತ್ರಣವೇ ಆಗಬೇಕೆನ್ನುವುದು ನನಗೆ ಒಪ್ಪಿಗೆಯಿಲ್ಲ.'ವಿಮೋಚನೆ'ಯ ಕಥಾನಾಯಕ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡ.ಅಂಥ ಪರಿಸ್ಥಿತಿಯಲ್ಲಿ ಎಲ್ಲರೂ ಹಾಗೆ ಮಾಡಬೇಕೆಂಬುದು ನನ್ನ ಅಭಿಪ್ರಾಯವಲ್ಲ ಅದು ಅವನು ಕಂಡುಕೊಂಡ ಪರಿಹಾರ ಬೇರೆಯವರು ಅನುಸರಿಸಬಾರದ ಪರಿಹಾರ. 'ಬನಶಂಕರಿ'ಯ ವಿಷಯವೂ ಅಷ್ಟೆ ಆಕೆ ಒಬ್ಬನೊಡನೆ ವಿವಾಹಬಾಹಿರ ಸಂಬಂಧ ಬೆಳೆಸಿ ತಾಯಿಯಾದಳು ಅದೊಂದು ಜೀವನ. ಆದರೆ ವಿಧವೆಯರಿಗಲ್ಲ ಅದು ಪರಿಹಾರವಲ್ಲ! ಓದುವ ಹಲವರು,'ಒಳ್ಳೆಯವಳು ಪಾಪ! ಆಕೆ ಎರಡನೆ ಸಾರೆ ಮದುವೆಯಾಗಬೇಕಿತ್ತು'ಎನ್ನುತ್ತಾರೆ.ಹಾಗೆ ಕಾದಂಬರಿಯಲ್ಲಿ ಇಲ್ಲದೆ ಹೋದರೂ ಪರಿಹಾರ ತೋಚುತ್ತದಲ್ಲವೆ?"

"ಆದರೆ ಇಲ್ಲಿ ತುಂಗಮ್ಮನಿಗಾದಂತೆಯೇ ಎಲ್ಲರಿಗೂ

ಆಗುತ್ತದೆನ್ನುವಿರಾ?"

"ಖಂಡಿತ ಇಲ್ಲ ತುಂಗಮ್ಮನಿಗೆ ಹಾಗಾಯಿತೆಂದು ಎಲ್ಲರಿಗೂ ಹಾಗಾಗುವುದಿಲ್ಲ.ಸೋಮಶೇಖರನ ಮಾತುಗಳನ್ನು ನೀವು ಗಮನಿಸಬೇಕು.'ದೊಡ್ಡಮ್ಮ'ನಿಗೂ ವಾಸ್ತವತೆ ಕ್ರೂರವೆಂಬುದು ಗೊತ್ತಿದೆ ಆದರೂ ಆದರ್ಶವನ್ನೆ ಅವರು ಬಯಸುತ್ತಾರೆ"

"ಓದುಗರಿಂದ ಈ ಕಾದಂಬರಿಯನ್ನು ಕುರಿತು ನೀವೇನನ್ನು ನಿರೀಕ್ಷಿ ಸುತ್ತೀರಿ?"