ಪುಟ:Abhaya.pdf/೧೪೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಗಮ್ಮನ ನರಳಾಟ ನೋಡಿದಾಗ ಜಲಜೆಯ ಕರುಳು ಕತ್ತರಿಸಿ

ಬರುತಿತ್ತು. ತನ್ನಕ್ಕನ ಸಂಕಟವನ್ನು ಸ್ವಲ್ಪಮಟ್ಟಿಗಾದರೂ ತಾನು ಕಡಿಮೆ ಮಾಡುವುದು ಸಾಧ್ಯವಿದ್ದಿದ್ದರೆ?

ಲಲಿತೆಯೂ ಹೊರಬಂದಳು.

"ತುಂಗಕ್ಕನಿಗೆ ಚೆನ್ನಾಗಿ ನಿದ್ದೆ ಬಂದಿದೆ ದೊಡ್ಡಮ್ಮ."

ರಾತ್ರೆ ಇನ್ನು ನೋವು ಕಾಣಿಸಿ ಕೊಳ್ಳುವುದೇ ಇಲಲ್ಲವೇನೊ..

ಜಲಜ ಹೆಳಿದಳು:

"ದೊಡ್ಡಮ್ಮ, ನೀವು ಹೋಗಿ ಮಲಕ್ಕೋಳ್ಳಿ."

ಆ ಸಲಹೆ ಸೂಕ್ತವಾಗಿತ್ತು.

"ಇನ್ನೋಮ್ಮೆ ನೋವು ಕಾಟಿಸ್ಕೊಂಡ್ರೆ ಬಂದು ನಿಮ್ಮನ್ನ ಎಬ್ಬಿಸ್ತೀವಿ."

ಸರಸಮ್ಮ ಒಪ್ಪಿಗೆ ಎಂಬಂತೆ ಅವರನ್ನು ನೋಡಿದರು.

"ನೀವು ಯರ್ಯಾರು ಮಲಕೋತೀರಾ ಇಲ್ಲಿ?"

ಲಲಿತ ಮತ್ತು ಜಲಜ ಮೌನವಾಗಿ ಪರಸ್ಪರ ಮುಖ ನೋಡಿ ಕೊಂಡರು

"ಇಬ್ಬರೂ ಇರ್ತೀವಿ ದೊಡ್ಡಮ್ಮ.."

"ಹೋಗಿ ಮಲಕೋಳ್ಳಿ ಹಾಗಾದ್ರೆ'

......

ಸರಸಮ್ಮನಿಗೆ ಎಚ್ಚರವಾದಾಗ ಹೊರಗೆ ತಿಂಗಳ ಬೆಳಕಿರಲಿಲ್ಲ. ಅದು

ಮುಂಜಾನದ ಕತ್ತಲು ಬಲುದೂರದಲ್ಲಿ ಮಸುರು ರಲು ಬೆಂಗಳೂರು ನಗರವನ್ನು ಪ್ರವೇಶಿಸುತ್ತ ಮಾದುತಿದ್ದ ಗುಜುಗುಜುಗುಜು ಸದ್ದು ಅಸ್ಪಷ್ಟವಾಗಿ ಅಲೆಗಳ ಮೇಲೆ ತೇಲುತ್ತ ಬರುತಿತ್ತು.

ಐದು ದಾಟತು ಹಾಗಾದರೆ- ಎಂದು ಕೊಂಡರು ಸರಸಮ್ಮ.

ನಿದ್ದೆಯ ಹೊದಿಕೆ ಕಳಚಿಬಿದ್ದು ಅವರಿಗೊಮ್ಮೆಲೆ ತುಂಗಮ್ಮನ ನೆನ

ಪಾಯಿತು. ಅವರು ಬೇಗ ಬೇಗನೆ ಎದ್ದು ಪಕ್ಕದ ಕೊಠದಿಯತ್ತ ಹೋದರು.ಬಾಗಿಲಿಗೆ ಒಲಗಿಂದ ಅಗಳಿ ಹಾಕಿರಲಿಲ್ಲ. ತಳ್ಳಿದಾಗ ಅದು ತೆರೆದು ಕೊಂದಿತು ಢಾಳಾಗಿ ಉರಿಯುತಿತ್ತು ವಿಮ್ಯದ್ಧೀಹ. ಬೆಚ್ಚಗೆ ಹೊದ್ದು ಕೊಂದು ತುಂಗಮ್ಮ ಮಗುವಿನಿಂತೆ ನಿದ್ದೆ ಹೋಗಿದ್ದಳು. ಜಲಜ ಮತ್ತು