ಪುಟ:Abhaya.pdf/೧೪೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಬಂದು ಟವೆಲಿನಿಂದ ಮುಖವೊರೆಸಿಕೊಂಡರು.ಹೆರಳು ಬಿಚ್ಚಿ ಬಿಗಿದು ಕೊಳ್ಳುತ್ತಾ ಬಾಗಿಲಬಳಿ ನಿಂತು, ಒಬ್ಬೋಬ್ಬರಾಗಿ ತಮ್ಮ ಕೆಲಸಕಾಯ೯ಗಳಿಗೆ ತೊಡಗುತ್ತಿದ್ದ ಹುಡುಗಿಯರನ್ನು ನೋಡಿದನು. ಒಬ್ಬೋಬ್ಬರದು ಒಂದೊಂದು ಗುಣ ಅವರೆಲ್ಲರನ್ನೂ ಒಳ್ಳೆಯವರೆನ್ನುವುದು ಸಾಧ್ಯವಿತ್ತೆ? ಅವಕಾಶ ದೊರೆತರೆ ಬಾಗಿಲೊಡೆದು ಓಡಿಹೋಗುವುದಕ್ಕೂ ಸಿದ್ಧರಾಗಿದ್ದ ಕೆಲವರು ಅಲ್ಲಿದ್ದರು ಎಂತಹ ನೀಚ ಕೃತ್ಯಕ್ಕೂ ಹೇಸದವರಿದ್ದರು. ಹೊಸಬರು ಬಂದಾಗ ಅವರ ಮೇಲೆ ಹಳಬರು ಒಳ್ಳಯ ಪರಿಣಾಮ ಮಾಡುವುದರ ಬದಲು, ಹಳಬರನ್ನೇ ತಮ್ಮ ಕೆಟ್ಟ ಪ್ರಭಾವಕ್ಕೆ ಒಳಗು ಮಾಡುವ ಸಮಥೆ೯ಯರಿದ್ದರು ಒಮ್ಮೊಮ್ಮೆ ಕಥೆಯೇ ಹೆಚ್ಚಾಗಿ ಕಳೆಯೇ ಹೆಚ್ಚಾಗಿ ಬೆಳೆಯೆಲ್ಲ ನಾಶವಾಗುವುದೇನೋ ಎಂದು ಸರಸಮ್ಮನಿಗೆ ಭಯವಾಗುತ್ತಿತ್ತು. ಆದರೆ ಜಲಜ ಲಲಿತೆಯರಂಥ ಸುಂದ್ರಾ ಸಾವಿತ್ರಿಯರಂಥ ಒಳ್ಳೆಯ ಹುಡುಗಿಯರನ್ನು ಕಂಡಾಗ, ಮಾನವತೆಯಲ್ಲಿ ಸರಸಮ್ಮನಿಗಿದ್ದ ಸ್ಫುಟವಾಗುತ್ತಿತ್ತು-ತಿರುತಿರುಗಿ.

ಹೆರಳು ಹಾಕಿಕೊಂಡಾಗ ತಲೆಯಿಂದ ಬೇಪ೯ಟ್ಟು ಬಂದ ಕರಿಬಿಳಿಯ ಕೂದಲನ್ನೆಲ್ಲ ಮುದ್ದೆಯಾಗಿ ಮಾಡಿ ಸರಸಮ್ಮ, ಜಗಲಿಯ ಮೂಲೆಯಲ್ಲಿದ್ದ ಕಸದ ಬುಟ್ಟಿಗೆ ಹಾಕಿ ಬಂದರು ಅಷ್ಟರಲ್ಲೇ ಜಲಜ-ಲಲಿತೆಯರ ದರ್ಶನವಾಯಿತು.

"ಎದ್ರೇನೇ?"

ಅಪರಾಧಿನಿಯಅ ಸ್ವರದಲ್ಲಿ ಜಲಜ ಹೇಳಿದಳು :

"ಹತ್ತು ಹನ್ನೊಂದು ಘಂಟೆವರೆಗೂ ಕೂತಿದ್ವಿ ದೊಡ್ಡಮ್ಮ, ಆಮೇಲೆ ನಿದ್ದೆ ಬಂದ್ಬಿಡ್ತು."

ಆಕೆಯ ಕಣ್ಣುಗಳಲ್ಲಿನ್ನೂ ಇತ್ತು ನಿದ್ದೆ ಸರಸಮ್ಮ ನಸುನಕ್ಕರು

ಲಲಿತಾ ಕೇಳಿದಳು : "ದೀಪ ನೀವು ಆರಿಸಿದ್ರಾ ದೊಡ್ಡಮ್ಮ?"

"ಹೂನಮ್ಮ, ಈಗ ಆರಿಸ್ದೆ. ಬೆಳಗಾದ್ಮೆಲೆ"

"ಓ!" ಎಂದು ಉದ್ಗಾರವೆತ್ತಿದಳು ಜಲಜ

"ತುಂಗಾ ಎದ್ದಿದಾಳ?"

"ಇನ್ನೂ ಇಲ್ಲ, ದೊಡ್ಡಮ್ಮ."