ಪುಟ:Abhaya.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಪಾಪ, ಮಲಕ್ಕೊಳ್ಲಿ."

"ಹಾಗಾದ್ರೆ ತುಂಗಕ್ಕನಿಗೆ ರಾತ್ರೆ ನೋವು ಬರ್ಲಿಲ್ಲ ಅಲ್ವೆ ದೊಡ್ಡಮ್ಮ?"

"ನೀವು ಅಲ್ಲೇ ಮಲಗಿದ್ದು, ನನ್ನ ಕೇಳ್ತೀರಲ್ಲೇ!.... ಹೋಗಿ ಮುಖ

ತೊಳ್ಕೊಳ್ಳಿ.... ಪ್ರಾರ್ಥನೆಗೆ ಹೊತ್ತಾಯ್ತು."

ಆ ಇಬ್ಬರೂ ಕಟ್ಟಡದ ಮೂಲೆಗೆ ಹೋಗಿ ಕೊಳಾಯಿ ನೀರಿಗೆ ಕೈ

ನೀಡಿದರು.

ಆ ಬಳಿಕ ದೇವರ ಪ್ರಾರ್ಥನೆ....

ಹಾಲಿನವನು ವರ್ತನೆಯ ಒಂದು ಸೇರು ಹಾಲು ಸುರಿದ ಆದಿನ

ತುಂಗಮ್ಮನಿಗಾಗಿ, ಮತ್ತೊಂದು ಪಾವು ಕೇಳಿ ಹಾಕಿಸಿಕೊಂಡರು ದೊಡ್ಡಮ್ಮ.

"ಇನ್ನು ಒಂದು ತೈಂಗಳವರೆಗೆ ಐದು ಪಾವು ಹಾಲು ಕೊಡಪ್ಪ."

"ಕೊಡ್ತೀನಮ್ಮ."

"ಒಂದು ಸೇರಿಗೆ ನೀರು ಸೇರಿಸ್ತಿಯೇನೋ!"

"ಯಾಕ್ರಮ್ಣ್ಣೀ.... ಒಸಾ ಎಮ್ಮೆ ಮನ್ನೆ ಮನ್ನೆ ಕರಾ ಆಕಿದೇಂತ

ಏಳಿಲ್ವಾ ಆವತ್ತೆ?

ಹಾಲಿನವನದು ಎಮ್ಮೆ ಸಂಸಾರ. ಅದೇ ಅವನ ಪ್ರಪಂಚ....

ಸಾವಿತ್ರಿ ಹಾಲಿನ ಪಾತ್ರವನ್ನೆತ್ತಿ ಕೊಂಡೊಯ್ದಮೇಲೆ ಸರಸಮ್ಮ

ಬಾಗಿಲು ಭದ್ರಪಡಿಸಿದರು.

....ತಮಗಾದರೋ ಈ ಸಂಸಾರ. ಇದೇ ತಮ್ಮ ಪ್ರಪಂಚ....

ತುಂಗಮ್ಮನಿಗೆ ಎಚ್ಚರವಾಯಿತು ಆದರೆ ಮೈಕೈಯೆಲ್ಲಾ ನೋಯು

ತ್ತಿದ್ದುದರಿಂದ ಏಳಲಾಗಲಿಲ್ಲ.ಜಲಜಳಚಾಪೆಯೋ ಸುರುಳಿ ಸುತ್ತಿಕೊಂಡಿತ್ತು.ಎಲ್ಲಿ ಹೋದಳೋ ಮಹಾರಾಯಿತಿ? ತಾನು ಏಳುವ ಹಾಗಿಲ್ಲ. ಎದ್ದಿದ್ದರೆ, ಹೊರಗೆ ಹುಡುಗಿಯರೊಡನೆ ಬೆರೆಯಬಹುದಿತ್ತು.

ತನ್ನ ಗೆಳೆತಿಯರ ಬದಲು ದೊಡ್ಡಮ್ಮ ಒಳಬಂದರು.

ಆ ತಾಯಿಯ ವಾತ್ಸಲ್ಯದ ನಗುವಿನಲ್ಲಿ ಮೋಹಕ ಶಕ್ತಿ ಇತ್ತು ಅವರು

ಬಳಿ ಬಂದು ಕುಳಿತು, ತುಂಗಮ್ಮ ನೊಂದು ಕೈಯನ್ನು ತನ್ನ ಕೈಯಲ್ಲಿರಿಸಿ ಕೊಂಡು ಮೃದುವಾಗಿ ಅದುಮುತ್ತಾ ಕೇಳಿದರು.