ಪುಟ:Abhaya.pdf/೧೪೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಎರಡು ನಿಮಿಷಗಳಲ್ಲೆ ಹೊರಬಂದರು ಹುಡುಗಿಯರ ದೊಡ್ಡಮ್ಮ. ಗುರುತುಸಿಗದಷ್ಟು, ವಿರೂಪವಾಗಿತ್ತು ಅವರ ಮುಖ. ಆ ಸ್ವರವೊ!

"ಹೋಗ್ರೇ! ಯಾಕ್ನಿಂತಿದೀರಾ ಇಲ್ಲಿ? ಎಲ್ರೂಹೋಗಿ! ಹೋಗಿ! ನಿಮ್ಮಿಮ್ಮ ಕೆಲ್ಸಮಾಡಿ!"

ಆಕೆ ಎರಡೂ ಕ್ಐಗಳನ್ನು ಹುಚ್ಚರ ಹಾಗೆ ಬೀಸುತಿದ್ದರು.

ಜಲಜ ಮತ್ತು ಲಲಿತಾ ದೊಡ್ಡಮ್ಮನನ್ನು ಹಿಡಿದು ಕೊಂಡು ಆಫೀಸು

ಕೊಠಡಿಗೆ ಬಂದರು.

"ಹೇಳೀ ದೊಡ್ಡಮ್ಮ,! ಏನಾಯ್ತು ದೊಡ್ಡಮ್ಮ?"

ಬೇರೆ ಯಾರದೋ ಸ್ವರದಂತೆ ಅವರ ಮಾತು ಕೇಳಿಸಿತು:

"ಮಗು ಸತ್ತಿದೆ, ತುಂಗ ಬದ್ಕಿದಾಳೆ.'