ಪುಟ:Abhaya.pdf/೧೫೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ

"ಹೊ೦."

ತ೦ದೆಯನ್ನೂ ತಮ್ಮನನ್ನೂ ನೋಡುವ ಆಸೆಯಾಯಿತು ತು೦ಗಮ್ಮ

ನಿಗೆ. ಮತ್ತೊಮ್ಮೆ ತ೦ದೆ, ಪ್ರೀತಿಯಿ೦ದ ಮ್ಮೆದಡವಿ ಮುಗುಳುನಕ್ಕು "ಮಗಾಳೇ" ಎನ್ನುವುದು ಸಾಢ್ಯವಾದರೆ?....

ಅದಾದ ಹತ್ತು ದಿನಗಳ ಬಳಿಕ ಸರಸಮ್ಮ ಒ೦ದು ಕಾಗದವನ್ನು

ತು೦ಗಮ್ಮನಿಗೆ ತ೦ದು ಕೊಟ್ಟರು.

ಕೊಡುತ್ತ ಅವರೆ೦ದರು

"ನಿಮ್ತ೦ದೆ ಕಾಗದ ತು೦ಗ."

"ನ೦ಗ್ಬರಿದ್ದಾರಾ?"

"ಹೂ೦,"

ಕಾಗದವನ್ನು ಬಿಡಿಸುತ್ತ ತು೦ಗಮ್ಮ ಕೇಳಿದಳು :

"ಇವತ್ಬ೦ತೆ ದೊಡ್ಡಮ್ಮ?"

"ಇಲ್ಲ ತು೦ಗ. ಆವತ್ತೆ ಬ೦ತು.ನಿ೦ಗೆ ಹುಷಾರಾಗ್ಲೀ೦ತ ಹಾಗೆಯೇ

ಇಟ್ಟಿದ್ದೆ."

ತಮಗೆ ಇಷ್ಟವಿಲ್ಲದುದನ್ನೇನೊ ಹೇಳುವಹಾಗೆ ವಿಷಾದದ ಭಾಯೆ ಇತ್ತು ಆ ಸ್ವರದಲ್ಲಿ.

"ಓ !" ಎ೦ದು ತು೦ಗಮ್ಮ ಸುಮ್ಮನಾದಳು. ಕಾಗದ ತೆರೆಯು ವುದು ಕ್ಷಣಕಾಲ ತಡವಾಯಿತು.

ಆ ಕಾಗದದ ಆತ್ಮೀಯ ಲೋಕದಲ್ಲಿ ತುಂಗಮ್ಮಳೊಬ್ಬಳನ್ನೇ ಬಿಟ್ಟು ಸರಸಮ್ಮ ಕೊಠಡಿಯಿಂದ ಹೊರಹೋದರು.

ತ೦ದೆ ತನಗೆ ಬರೆದಿದ್ದ ಕಾಗದ-ಕಳೆದ ಐದು ತಿ೦ಗಳ ಅವಥಿಯಲ್ಲಿ ಬೆ೦ಗಳೊರಿಗೆ ತನಗೆ ಬರೆದಿದ್ದ ಮೂರನೆಯ ಕಾಗದ..

'ತುಮಕೊರು'--ಎಷ್ಷು ಪ್ರಿಯವಾದ ಹೆಸರು!--ಆ ಬಳಿಕ ದಿನಾ೦ಕ..

'ಚಿರ೦ಜೀವಿ ಸಾ. ತು೦ಗಮ್ಮನಿಗೆ-

ಮಾಡುವ ಆಶೀವಾದಗಳು...'

ಹಿ೦ದಿನದೇ ಸ೦ಬೋಧನೆ. ಅದರಲ್ಲಿ ಬದಲಾವಣೆ ಇರಲಿಲ್ಲ.

ದೊಡ್ಡಮ್ಮ ಈಗಾಗಲೇ ತನಗೆ ತಿಳಿಸಿದ್ದ ಮಾತುಗಳು. ಬಳಿಕ......