ಪುಟ:Abhaya.pdf/೧೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


'ಕೊರವಂಜಿ'ಯನ್ನೋದಿ ನಗೆಯಲೋಕದಲ್ಲಿ ವಿಹರಿಸುತಿದ್ದ ತುಂಗಮ್ಮನೆ ಕೈ ಬೆರಳಿಗೆ ಆ ಕಾಗದ ಸೋಂಕಿದೊಡನೆ,ಕಾಗದದಲ್ಲಿದ್ದ ಒಂದೊಂದು ಮಾತೊ ಜೀವಂತವಾಗಿ ಕೇಳಿಸತೊಡಗಿತು.

'ವರ್ಷಾಂತ್ಯದ ಪರೀಕ್ಷೆ ಮುಗಿದ ಕೊಡಲೆ ಹೊರಡುತ್ತೇನೆ.

ಪರೀಕ್ಷೆ ಆರಂಭವಾಗಿ ನಾಲ್ಕು ದಿನಗಳಾಗಿದ್ದುವು ಆಗಲೆ.ತಂದೆಯನ್ನು ತಾನಿನ್ನು ಬೇಗನೆ ನೋಡಬಹುದು ಹಾಗಾದರೆ

'ಈ ಸಲ ನನಗೆ ರಿಟೈರೊ ಅಗುತ್ತದಲ್ಲ-'

ಉದ್ಯೋಗದಿಂದ್ದ ನಿವೃತ್ತನಾಗುವೆ ತಂದೆ...ತನ್ನ ತಂದೆಯ ತಾಯ್ತಂದೆಯರಿದ್ದೆ ಊರು ತುಮಕೊರು.ಅದು ಹಿಂದಿನ ಕಥೆ ವಿದ್ಯಾವಂತರಾಗಿ ತನ್ನ ತಂದೆ ಉಪಾಧ್ಯಾಯ ವೃತ್ತಿಯನ್ನು ಕೈಳೊಂಡರು.ಮದುವೆಗೆ ಮುಂಚಿಯೂ ಮದುವೆಯ ಅನಂತರವೊ ಊರಿಗೆ ವರ್ಗವಾಗುತ್ತಾ ತನ್ನ ದೇಶದ ಒಂದು ಭಾಗವನ್ನೆಲ್ಲ.ಅಲ್ಲಿದ್ದುದು ಬಾಡಿಗೆ ಮನೆ ನಿಜ.ಒಂದು ಕಾಲದಲ್ಲಿ ಎಂಟು ರೊಪಾಯಿಯಾಗಿದ್ದುದು ಈಗ ಹದಿನೇಳಾಗಿತ್ತು.ಅದರೊ ಆ ಪುಟ್ಟ ಮನೆಯನ್ನು ಅವರು ಬಿಟ್ಟರಲಿಲ್ಲ...ತುಂಗಮ್ಮ ಅಲ್ಲಿಯೇ ಹುಟ್ಟದ್ದಳು.ಬೇರೆ ಕಡೆ ಬೆಳೆದರೊ ಆರುವರ್ಷಗಳ ಮೇಲೆ,ಮನೆಗೊಂದು ಗಂಡುಕೂಸು ತಮ್ಮನಾಗಿ ಬಂದಮೇಲೆ,ತುಮಕೊರಲ್ಲೆ ತುಂಗಮ್ಮ ಉಳಿದಳು.ಕೆಲವು ವರ್ಷಗಳ ಮೇಲೆ,ತಂದೆ ವಿಧುರನಾದುದು ಆ ಬಳಿಕ....ಅಕ್ಕನ ಮದುವೆ...ತಾನು...ಇನ್ನು ವಯಸ್ಸಾದ ತನ್ನ ತಂದೆ ನಿವೃತ್ತ ಉಪಾಧ್ಯಾಯರು....

ತನ್ನಿಂದಾಗಿ ಇಳಿವಯಸ್ಸಿನಲ್ಲಿ ತಂದೆಯು ಮಾನಸಿಕ ಚಿಂತೆ ಹೆಚ್ಛುವಂತಾಯಿತು.

ತಮ್ಮ ಪಾಸಾಗುತ್ತಾನೆ ಈ ವರ್ಷವೊ.ಉಪಾಧ್ಯಾಯರ ಮಕ್ಕಳು ತೇರ್ಗಡೆಯಾಗದೆ ಇರುವುದೆಂದೇ ಇಲ್ಲ....ತುಂಗಮ್ಮ ಪುಸ್ತಕಗಳಲ್ಲಿ ಓದಿದ್ದಳು:ಗಂಡುಮಗ ಯಾವಾಗಲೂ ವಂಶೋದ್ದಾರಕ...ಪುತ್ರಸಂತಾನೆವಿಲ್ಲದ ಮನೆ ಬೆಳಗುವುದಿಲ್ಲ....ತನ್ನಿಂದ ಕಿಟ್ಟ ಹೆಸರು ಬಂತು ವಂಶಕ್ಕೆ.ಇನ್ನು ತಮ್ಮ ದೊಡ್ದವನಾಗಿ ಒಳ್ಳೆಯ ಹೆಸರು ಬರಬೇಕು.ಆದರೆ ಊರೆಲ್ಲ