ಪುಟ:Abhaya.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೭ ಅಭಯ

“ಬೇರೆ ಕಡೆಗೆ ಸಾಗಿಸಿದ್ದಿ ತುಂಗಕ್ಕ.”
“ಹುಂ.... ನಾನು ನೋಡ್ದಾಗ ನೀವೆಲ್ಲ ಅಳ್ತಿದ್ರಿ.”
“ಇಲ್ಲ ! ಸುಳ್ಳು !”
“ನಂಗೊತ್ತಿಲ್ವೆ ಜಲಜ ?”.
“ಆಗಲಿ. ಅಳ್ತಿದ್ದೆವು. ಏನಾಯ್ತೀಗ ?”
“ಏನೂ ಇಲ್ಲ. ಸುಮ್ನೆ ಹೇಳ್ದೆ.”
“ಸರಿ. ಅದನ್ನೆಲ್ಲಾ ಮರೆತ್ಬಿಡು ಅಕ್ಕ.”
“ನೀವೆಲ್ರೂ ಒಳ್ಳೆಯವರು ಜಲಜ.”
ಒಳ್ಳೆಯವರೊ-ಕೆಟ್ಟವರೊ! ಜಲಜೆಗೆ ಆ ಪದಗಳ ನಿಜವಾದ ಸ್ಪಷ್ಟ
ವಾದ ಅರ್ಥ ತಿಳಿಯದು. ಆದರೆ ತಮ್ಮ ಒಳ್ಳೆಯತನದಿಂದ, ನೊಂದ
ಜೀವಿಯಾದ ತುಂಗಮ್ಮನಿಗೆ ಯಾವ ಒಳ್ಳಿತನ್ನೂ ಮಾಡುವುದು ಸಾಧ್ಯವಾಗಿ
ರಲಿಲ್ಲ. ಅಷ್ಟು ಮಾತ್ರ ನಿಜ.
ಆ ದಿನ, ಸತ್ತುಹುಟ್ಟಿದ್ದ ಮಗುವನ್ನು ಮಣ್ಣು ಮಾಡಿ ಬಂದ ಮೇಲೆ
ಕುರುಡಿ ಸುಂದ್ರಾ ಕೇಳಿದ್ದಳು:
“ಓಗ್ಬುಟ್ಟು ಬಂದ್ರಾ ಜಲಜಾ ?”
“ಹೂಂ ಕಣೇ.”
“ಚೆಂದಾಗಿತ್ತಾ ಮೊಗು ? ಎಂಗಿತ್ತು ನೋಡಾಕೆ ?”
ಆ ಒಂದು ಕ್ಷಣ ಜಲಜೆಗೆ ತಾಳ್ಮೆ ತಪ್ಪಿ ಸಿಟ್ಟು ಬಂದಿತ್ತು ಕುರುಡಿಯ
ಪ್ರಶ್ನೆಯಲ್ಲಿ ಯಾವ ಅರ್ಥವೂ ಇಲ್ಲವೆಂದು ತೋರಿತು ಅವಳಿಗೆ
“ಚೆಂದಾಗಿತ್ತು, ಅದರಮ್ನ೦ಗೇ !”
"ಓ!"
ರೇಗಿದ್ದ ಜಲಜೆಯ ಸ್ವರ ಎಂದಿನಂತಿರಲಿಲ್ಲ. ಆದರೆ ಸುಂದ್ರಾ,
ತುಂಗಕ್ಕನಿಗೆ ಒದಗಿದ ಸಂಕಟಕ್ಕಾಗಿ ಜಲಜ ಅತ್ತು ಆ ಸ್ವರ ಬದಲಾಗಿರ
ಬಹುದೆಂದು ಭಾವಿಸಿದಳು. ಮಗು ಬದುಕಲಿಲ್ಲವೆಂದು ಆ ಕುರುಡಿಗೆ ದುಃಖ
ವಾಯಿತು.
ಆದರೆ ಇನ್ನೊಬ್ಬಳು, ಬದುಕಿನಲ್ಲಿ ಪಡಬಾರದ ಕಷ್ಟಗಳನ್ನೆಲ್ಲ ಪಟ್ಟಿದ್ದ
ಪಾರೋತಿ ಎಂಬ ಹುಡುಗಿ, ಕಹಿಯಾಗಿ ಹೇಳಿದ್ದಳು: