ಪುಟ:Abhaya.pdf/೧೫೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

"ಹೆಣ್ಣು ಮಗು ತಾನೆ? ಹೋಗ್ಲಿ ಬಿಡು.... ಯಾರಿಗೆ ಏನೂ ಅನ್ಯಾಯವಾಗಿಲ್ಲ...."

ಆ ಹುಡುಗಿಯರಲ್ಲಿ ಎ‍ಶ್ಟೋ ಜನ ಅನುತಾಪ ಅನುಕಂಪ ಸೂಚಿಸಿದ್ದರು ತುಂಗಮ್ಮನನ್ನು ಕುರಿತು. ಎಶ್ಟೋ ಜನ ಮರುದಿನವೇ ಎಲ್ಲವನ್ನೂ ಮರೆತಿದ್ದರು....

....ಅದನ್ನೆಲ್ಲ ತುಂಗಮ್ಮನಿಗೆ ಹೇಳಬೇಕೆಂದು ಜಜೆಗೆ ಮನಸ್ಸಾಯಿತು. ಆದರೆ, ಆ ವಿಶಯ ಪ್ರಸ್ತಾಪಿಸುವುದು ಸರಿಯಲ್ಲವೆಂದಿತು ಮರುಕ್ಸಣವೆ, ಅದೇ ಮನಸ್ಸು.

....ಸುಮ್ಮನಿದ್ದ ಜಲಜೆಯ ಅಂಗೈಯನ್ನು ಮುಟ್ಟುತ್ತಾ ತುಂಗಮ್ಮ ಕೇಳಿದಳು:

"ಯಾಕೆ ಜಲಜ ಹಾಗೆ ಕೂತಿದ್ದೀಯಾ?"

"ಸುಮ್ನೆ| ಯಾಕೋ ಬೇಜಾರು..."

ಬೇಸರಗೊಂಡಿದ್ದ ಗೆಳತಿಯನ್ನು ಸಮಜಾಯಿಸುವ ಭಾರ ತನ್ನದೆಂದು ತುಂಗಮ್ಮನಿಗೆ ತೋರಿತು.

"ಏನಾಗಿದ್ಯೆ ನಿಂಗೆ?"

"ಏನೊ|"

"ಚಂದಮಾಮ ಓದ್ತಾ, ಅಡವಿಯೊಳಗೇ ರಾಜಕುಮಾರೀನ ಬಿಟ್ಬಿಟ್ಟು ಬಂದಿದೀಯೇನೇ?"

ಜಲಜ ನಕ್ಕಳು ಎಲ್ಲಿಂದ ಎಲ್ಲಿಗೆ ! ಈಗತಾನೆ ಅತ್ತಿದ್ದ ತುಂಗಮ್ಮನೇ ಅಲ್ಲವೆ ಆ ಪ್ರಶ್ನೆ ಕೇಳಿದ್ದು?

ಜಲಜ ನಕ್ಕು ಆಕೆಯ ಮುಖ ಅರಳಿದುದನ್ನು ಕಂಡು ತುಂಗಮ್ಮನಿಗೆ ಸಂತೋಶವಾಯಿತು.

"ಜಲಜಾ, ನೀನು ಓದ್ತಿದ್ದ ಕತೆ ಹೇಳೆ ನಂಗೆ."

"ಹೋಗಕ್ಕ. ಸುಮ್ನೆ ಗೇಲಿ ಮಾಡ್ತೀಯಾ ನನ್ನ."

"ಇಲ್ಲ ಕಣೇ-ನಿಜವಾಗ್ಲೂ. ಹೇಳೇ."

"ನಿಂಗ್ಯಾಕಮ್ಮಾ ಅಜ್ಜೀ ಕತೆ?"

"ಹಟ ತೊಡಬಾರ್ದು. ಹೇಳು ಜಲಜ...."