ಪುಟ:Abhaya.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಸಂತೋಷ. ಅವಶ್ಯವಾಗಿ ಹಾಗೆಮಾಡಿ"

"ಒಂದು ಪ್ರಶ್ನೆ ಕೇಳಲೆ?"

"ಏನು?"

"ನಿಮ್ಮ 'ವಿಮೋಚನೆ' ಕಾದಂಬರಿಯ ವಿಷಯವಾಗಿ ಎಷ್ಟು ಜನ

ಓದುಗರು ಅಭಿಪ್ರಾಯ ತಿಳಿಸಿದ್ದಾರೆ?"

"ಎಪ್ಪತ್ತೆರಡು ಜನ"

" 'ಬನಶ್ಂಕರಿ'ಯ ಬಗ್ಗೆ?"

" 'ಬನಶಂಕರಿ'ಯ ವಿಷಯವಾಗಿ ಇನ್ನೂ ಕಾಗದಗಳು ಬರುತ್ತಲೇ

ಇವೆ. ಆ ಕಾದಂಬರಿ ಪ್ರಕಟವಾದ ಅಲ್ಪಾವಧಿಯಲ್ಲೇ' ಈಗಾಗಲೇ, ೬೮ ಬಂದಿವೆ."

"ಇದು ದೊಡ್ಡ ಸಂಖ್ಯೆಯೆನ್ನುತ್ತೀರಾ?"

"ಖಂಡಿತವಾಗಿಯೂ ಇಲ್ಲ ಹೀಗೆ ಬರೆದು ನಮ್ಮ ಓದುಗರಿಗೆ ರೂಢಿ

ಯಿಲ್ಲ! ಎಷ್ಟೋ ಸಹಸ್ರ ಓದುಗರು ಗ್ರಂಧಕರ್ತರಿಗೆ ಬರೆಯುವುದೇ ಇಲ್ಲ. ಇದಕ್ಕೆ ಕಾರಣ, ನಮ್ಮ ಪ್ರಮುಖ ಸಾಹಿತಿಗಳು ಓದುಗರ ವಿಚಾರಶಕ್ತಿಗೆ ಕಲ್ಪಿಸಿರುವ ಸ್ಥಾನ ಮಾನ. ಈದಿನ, ಸಾಹಿತ್ಯ ಸೃಷ್ಟಿಯಲ್ಲಿ ತಮ್ಮದೂ ಪಾತ್ರವಿದೆ ಎಂಬುದನ್ನು ಓದುಗರು ಮನಗಾಣಬೇಕು...ನನಗೆ ಬಂದಿರುವ ಕಾಗದಗಳಲ್ಲಿ ದೃಷ್ಟಿ ವಿವೇಚನಾ ವೈಖರಿ ವಿಭಿನ್ನವಾಗಿವೆ, ಪ್ರಾತಿನಿಧಿಕವಾಗಿವೆ....'ಅಭಯ'ದ ವಿಷಯವಾಗಿ ಇನ್ನಷ್ಟು ಹೆಚ್ಚು ಪ್ರತಿಕ್ರಿಯೆಗಳು ಬರಬಹುದೂಂತ ನನ್ನ ನಿರೀಕ್ಷೆ."

ನಾನು ಅಷ್ಟು ಹೇಳಿ ಮುಗಿಸಿದಂತೆ ಅವರೆದ್ದರು.

"ಕ್ಷಮಿಸಿ. ಒಂದು ವಿಷಯ ಮರೆತೇ ಹೋಯಿತು ತಪ್ಪು

ಮಾಡಿದ್ದೇನೆ ತಿಳಿಯದೆ. ಎಂಧ ಪ್ರಮಾದ!"

-ಎಂದರು.

"ಏನಾಯ್ತು?"

"ಈ ದಿನ ಯುಗಾದಿ 'ಅಭಯ'ದ ಗಲಾಟೆಯಲ್ಲಿ ಶುಭಾಶಯ

ತಿಳಿಸೋದು ಮರೆತೇ ಬಿಟ್ಟೆ."

"ನಿಮ್ಮ ಪ್ರತಿಕ್ರಿಯೆ ತಿಳಿಯುವ ಆತುರದಲ್ಲಿ ನಾನೂ ಮರೆತೆ.