ತುಂಗಮ್ಮನ ಮೊನದಿಂದಲೂ ಹೊರಡಲು ತಮಗೆ ತಡವಾದ್ದ
ರಿಂದಲೂ ಸರಸಮ್ಮನಿಗೆ ಕಸಿವಿಸಿಯಯಿತು.
"ಯಾಕೆ ಕೇಳ್ದೆ ತುಂಗ?"
ತುಂಗಮ್ಮ ಉತ್ತರವೀಯಲಿಲ್ಲ.ಬದಲು ತಾನೇ ಒಂದು ಪ್ರಶ್ನೆ
ಕೇಳಿದಳು:
"ನನ್ನ ವಿಷಯ ಎನು ತೀರ್ಮಾನಮಾಡ್ಥೀರಿ ದೊಡ್ದಮ್ಮ?"
"ಅದೇನೆ ಹಾಗಂದ್ರೆ?"
"ನನು--ಇನ್ನು--..."
ತನಗಿಷ್ಟು ಶಕ್ತಿ ಇಲ್ಲವೆಂದಿತು ಸರಸಮ್ಮ ಸಹನೆ.
"ತುಂಗಾ!ಇಂತ ಯೊಚ್ನೆ ಮಡ್ಬೆಡ !ಯಾರು ಇದನ್ನೆಲ್ಲಾ
ನಿನ್ತಲೇಲಿ ತುಂಬೊದರು ? ತೂ...ಆ ಜಲಜಾಗಿಷ್ಟೂ ಬುದ್ದಿಯಿಲ್ಲ--
"ಅಯ್ಯೋ ! ಜಲಜ ಏನೂ ಹೇಳಿಲ್ಲ ದೊಡ್ಡಮ್ಮ -ನಾನೇನೇ-...."
"ಸರಸಮ್ಮ ನಕ್ಕರು.
"ನಿನ್ನ ತಲೆಕಾಯಿ!ಸುಮ್ನೆ ಮಲಕೊ.ನಿನಗೆ ಹೆಚ್ಚು ಹೆಚ್ಚು ಹಣ್ಣು
ಬೇಕು,ಅಂತ ಮಿಂಟಿಂಗ್ನಲ್ಲಿ ಕೆಳಿ ಪಾಸ್ಮಾಡಿಸ್ಕೊಂಕೊಂಡು ಬರಿತಿನಿ...
"ಆ ಮಾತಿಗೆ ಎನು ಉತ್ತರಕೊಡಬೇಕೆಂಬುದೇ ತುಂಗಮ್ಮನಿಗೆ
ತೋಚಲಿಲ್ಲ.
"ಆಮೇಲೆ,ಇನ್ನೂ ಒಂದು ವಿಷಯ ತುಂಗ---"
"ಎನು ದೊಡ್ಡಮ್ಮ?"
"ನಿಮ್ತಂದೆ ಕಾಗದಕ್ಕೆ ಉತ್ತರ ಬರೀಬೇಕು ತುಂಗ. ಅವರಿಗೇನೊ
ತಿಳಿಸೇ ಇಲ್ಲ."
"ಹೊಂ."
"ನಾಳೇನಾದ್ರೂ ಬರೀಬೇಕು.ನಾನೂ ಬರೀತೀನಿ."
"ಆಗಲಿ ದೊಡ್ದಮ್ಮ."
"ಅದೇನು ಬರೀತೀಯೋ ಯೋಚ್ನೆ ಮಾಡಮ್ಮ.ನಾಳೆ ಮಾತ್ನಾ
ಡೋಣ ಆ ವಿಷಯ."