ಪುಟ:Abhaya.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೫೭

ಸರಸಮ್ಮ ಅವಸರವಾಗಿ ಹೊರಟು ಹೋದರು. ಹಲವು ದಿನಗಳ

ಕಾಲ ಯೋಚಿಸಿದರೂ ಬಗೆ ಹರಿಯದಷ್ಟು ವಿಚಾರಗಳನ್ನು ತನ್ನ ತಲೆಯಲ್ಲಿ ಅವರು ತುರುಕಿ ಹೋದಂತೆ ತುಂಗಮ್ಮನಿಗೆ ಅನಿಸಿತು.

....ಬಿಸಿಲು ಹೆಚ್ಚಿ ಇಳಿಮುಖವಾದರೂ ತುಂಗಮ್ಮನ ಮೆದುಳನ್ನು

ಕವಿದಿದ್ದ ಮಂಕು ಸರಿಯಲಿಲ್ಲ.

ಜಲಜಾ ಮತ್ತು ಲಲಿತಾ ಇಬ್ಬರಿಗೂ ನೇಯ್ಗೆ ಬರುತಿತ್ತು. ಅದ

ರಿಂದ, ಇತರ ಹುಡುಗಿಯರಂತೆ ಅವರಿಗೂ ವಾರದಲ್ಲಿ ಒಂದೆರಡು ರೂಪಾಯಿ ಸಂಪಾದನೆಯಾಗುತಿತ್ತು. ಎರಡು ದಿನಗಳ ಹಿಂದೆ ಜಲಜಾ ಮತ್ತು ಲಲಿತಾ ಮಾರ್ಕೆಟಿಗೆ ಹೋದಾಗ, ಇಬ್ಬರೂ ತುಂಗಮ್ಮನಿಗಾಗಿ ನಾಲ್ಕು ನಾಲಾಣೆ ಖರ್ಚು ಮಾಡಿದ್ದರು. ಜಲಜ ಒಂದು 'ಕೊರವಂಜಿ' ಪತ್ರಿಕೆ ಕೊಂಡಿದ್ದಳು ; ಲಲಿತಾ ನಾಲ್ಕು ಕಿತ್ತಾಳೆ ಹಣ್ಣಗಳನ್ನು.

ಆ ಹಣ್ಣುಗಳಲ್ಲೊಂದು ಹಾಗೆಯೇ ಉಳಿದಿತ್ತು, ತುಂಗಮ್ಮ ದೇಹ

ವನ್ನು ಮೇಲಕ್ಕೆ ಸರಿಸಿಕೊಂಡು ದಿಂಬಿಗೂ ಗೋಡೆಗೂ ಒರಗಿ ಕುಳಿತಳು. ನೀಡಿ ಆ ಹಣ್ಣನ್ನೆತ್ತಿಕೊಂಡಳು. ಹೊರಗೆ ಬಾಡಿದ್ದರೂ . ಒಳಗೆ ಹುಳಿಯಾಗಿದ್ದರೂ ಆಕೆಗೆ ಅದು ರುಚಿಕರವಾಗಿತ್ತು.

ಧೀಂಗುಡುತಿದ್ದ ಮೆದುಳನ್ನು ಹತೋಟಿಗೆ ತರಲೆತ್ನಿಸುತ್ತಾ ತುಂಗಮ್ಮ

ಕಿತ್ತಳೆಯ ತೊಳೆಗಳನ್ನು ಒಂದೊಂದಾಗಿಯೆ ತಿನ್ನ ತೊಡಗಿದಳು.

ಸಂಗೀತದ ಅಧಾಪಿಕೆ ಆ ಸಂಜೆ ಪಾಠಮಾಡಲಿಲ್ಲ, ಸರಸಮ್ಮ

ಹಿಂತಿರುಗಿ ಬರುವವರೆಗೂ ಅಭಯಧಾಮದ ಜವಾಬಾರಿ ಆಕೆಯದು. ಬೀಗದ ಕೈಯ ಗೊಂಚಲನಾಕೆ ಮಡಿಲಿನೊಳಗಿಟ್ಟು, ತೋರಿಕೆಯ ಧೈರ್ಯದ ಮುಖವಾಡ ಧರಿಸಿ, ಆಫೀಸು ಕೊಠಡಿಯಲ್ಲಿ ಭದ್ರವಾಗಿ ಕುಳಿತು ಕೊಂಡರು. ಅಂತಹ ಸಂದರ್ಭಗಳಲ್ಲಿ ಬಲು ಭಯ ಅವರಿಗೆ ಯಾವ ಕ್ಷಣವಾದರೂ ತನ್ನನ್ನು ಮುತ್ತಿ ಹುಡುಗಿಯರು ಬೀಗದಕೈ ಗೊಂಚಲನ್ನು ಕಸಿದುಕೊಳ್ಳಬಹುದೆಂದು ಅವರು ನಿರೀಕ್ಷಿಸುತಿದ್ದರು. ಆಗ ಹುಡುಗಿಯರು ಮಾತನಾಡಲು ಬಂದರೆಂದರೆ ಆಕೆ ವರ್ತಿಸುತಿದ್ದುದು ಒರಟಾಗಿಯೆ. ಒಳಗಿನ ಅಳುಕನ್ನು ಮುಚ್ಚಿಕೊಳ್ಳಲೆಂದು ಹೊರಗೆ ಆಕೆ ವಕ್ರತನ ತೋರಿಸು ತಿದ್ದರು.