ಸರಸಮ್ಮ ಹೊರ ಹೋದಾಗ ಅಭಯಧಾಮದ ಹುಡುಗಿಯರು,
ಹಗ್ಗ ಬಿಚ್ಚಿಕೊಂಡು ಕಿವಿಗಳಲ್ಲಿ ಗಾಳಿ ತುಂಬಿಕೊಂಡು ಕುಣಿಯುವ ಕರುಗಳಂತೆ ಓಡಾಡುತಿದ್ದರು.
ಅದೇ ಆಗ, ತುಂಗಮ್ಮನ ಕೊಠಡಿಯ ಮುಂದೆಯೇ, ಇಬ್ಬರೋಡಿ
ದರು–ಒಬ್ಬಳನ್ನು ಇನ್ನೊಬ್ಬಳು ಬೆನ್ನಟ್ಟಿ, ಮೂವರು ಹುಡುಗಿಯರ ಇನ್ನೊಂದು ಗುಂಪೂ ಸಾವಕಾಶವಾಗಿ ಮೆಲ್ಲನೆ ಜಗಲಿಯ ಮೇಲೆ ನಡೆದು ಹೋಯಿತು.
ಯಾರಾದರೂ ಒಳಗೆ ಬಂದು ತನ್ನ ಬಳಿಯಲ್ಲಿ ಕುಳಿತುಕೊಳ್ಳ
ಬಾರದೆ-ಎಂದು ಕೊಂಡಳು ತುಂಗಮ್ಮ, ಆದರೆ ಬಹಳ ಹೊತ್ತು ಯಾರೂ ಬರಲಿಲ್ಲ.
ಕತ್ತಲಾಗುತಿದ್ದಂತೆ, ತುಂಗಮ್ಮ ಹೆಸರು ತಿಳಿಯದ ಎಳೆಯ ಹುಡುಗಿ
ಯೊಬ್ಬಳು ಬಂದು ,ಎಟಕದೇ ಇದ್ದ ಗಿಂಡಿಗಾಗಿ ತುದಿಕಾಲಿನ ಮೇಲೆ ನಿಂತು ಪ್ರಯಾಸಪಟ್ಟ ಸ್ವಿಚ್ ಹಾಕಿ ಹೋದಳು. ದೀವ ಹತ್ತಿ ಕೊ೦ಡೊ ಡನೆ ಆ ಹುಡುಗಿ ತುಂಗಮ್ಮನ ಮುಖ ನೋಡಿದಳು “ಬಾ” ಎಂದಳು ತುಂಗಮ್ಮ ಸಂಕೋಚದ ಮುದ್ದೆಯಂತಿದ್ದ ಆಕೆ ಬರಲಿಲ್ಲ. ನಸುನಕು ಓಡಿ ಹೋದಳು.
'ಯಾರೂ ಇಲ್ಲವೆ?-ಎಲ್ಲಿ ಹಾಳಾದರೋ ? ಎಂದು ತುಂಗಮ್ಮ
ಶಪಿಸುತಿದ್ದಾಗಲೆ ಲಲಿತೆಯ ದರ್ಶನವಾಯಿತು.
“ಇದೇನು ಲಲಿತ? ಜಲಜ ಎಲ್ಲಿ?"
"ಅಲಮೇಲು ಬೆರಳಿಗೆ ಗಾಯ ಮಾಡೊಂಡಿದ್ದಾಳೆ.”
"ಹೌದು ಐಡಿನ್ ? ಹಚ್ಚೋಕೆ ಅಂತ ಹೋದ್ಲು. ಒಂದು
ವರ್ಷವಾಯಿತು."
“ಅಷ್ಟೇ ಅಂತ ತಿಳಕೊಂಡೈನು? ಓಹೋ! ಐಡಿನ್ ಹಚ್ಚಿ
ಬಿಟ್ಟಿಡೋಕಾಗುತ್ತಾ ? ಅಲಮೇಲು ಪಾಲಿನ ಅಡುಗೆ ಕೆಲಸಾನೂ ಆಕೆಯೇ ಮಾಡ್ಬೇಕು.” ತುಂಗಮ್ಮ ಜಲಜೆಯ ಮೇಲೆ ಕೂಡಿ ಹಾಕಿದ್ದ ಸಿಟ್ಟೆಲ್ಲ ಕರಗಿ ಹೋಯಿತು.