ಪುಟ:Abhaya.pdf/೧೬೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೬೧
ಅಭಯ

ಆ ಮಗು ಹಾಗಾದುದೇ ಒಂದು ರೀತಿಯಲ್ಲಿ ಒಳ್ಳಿತಾಯಿತಲ್ಲವೆ?

ಅದನ್ನೊಂದು ಮರೆತು ಬಿಡುವ ಅಧಾಯವೆಂದು ಮನಸ್ಸಿನ ಆಳಕ್ಕೆ ತಳ್ಳಿ, ಮತ್ತೆ ಸಮಾಜದ ಕಣ್ಣಿನಲ್ಲಿ ಒಳ್ಳೆಯವಳಾಗಿ ಆಕೆ ಕಾಣಿಸಿಕೊಳ್ಳುವುದು ಇನ್ನು ಸಾಧ್ಯವಿದೆಯಲ್ಲವೆ ?

ಮತು ಕ್ಷಣವೆ, ಮಗುವಿನ ಸಾವಿನಲ್ಲಿ ಲಾಭಕಾಣುವ ತಮ್ಮಯೋಚನೆ

ನಾಚಿಕೆಗೇಡಿನದೆಂದು ಅವರಿಗೇ ತೋರುತಿತ್ತು.

...ಸರನಮ್ಮ ಕೊಠಡಿಯಲ್ಲಿ ಕುಳಿತು ಬರೆಯುತಿದ್ದ ಆ ಬೆಳಿಗ್ಗೆ,

ತುಂಗಮ್ಮ ತಾನು ಬಗೆಹರಿಸಲಾಗದ ಉಳಿದಿದ್ದೊಂದು ಸಮಸ್ಯೆಯೊಡನೆ ಒಳಬಂದಳು.

" ದೊಡ್ಡಮ್ಮ ,ತೋಟದೊಂದ ಯಾರು ಹೂಕೀಳಬಾರದೂಂತ

ನಿಯಮ ಇದೆ ಅಲ್ವೆ? "

"ಹೌದು ಯಾಕೆ -ಯಾರು ಕೀತ್ತರು ?"

" ಯಾರೂ ಇಲ್ಲಪ್ಪ, ಸುಮ್ನೆ ನಾನೇ ವಿಚಾರಿಸ್ಥೆ,

" ಹೂ ಜಾಸ್ತಿ ಇದಾಗ ನಾನೇ ಕಿತ್ತು ಎಲ್ರಿಗೂ ಕೊಡ್ರೀ

ನಲ್ಲ?”

" ಅಯ್ಯೋ, ಅದಕ್ಕಲ್ಲ ದೊಡ್ಡಮ್ಮ ಕೇಳಿದ್ದು"

" ಮತ್ತೆ?"

"ಆಫೀಸುರೂಮ್ನಲ್ಲಿ ಮೇಜಿನಮೇಲೆ ದಿನಾಗಲೂ ಹೊಸ ಹೂ ಇರ

ಬೇಡ್ವೆ, ದೊಡ್ಡಮ್ಮ?”

" ಓ ! ಯಾರು ಬೇಡ ಅಂದೋರು ?"

" ಯಾಕೆ ಇಟ್ಟಿಲ್ಲ ಮತ್ತೆ?”

" ಹಿಂದೆ ನಾಲ್ಕು ದಿನ ಇಟ್ಟಿದ್ವಿ ತುಂಗ. ಆದರೆ

ಹೂದಾನಿಯಿಂದ್ದೇ ಅದನ್ನ ಎಗರಿಸ್ತಿದ್ದು ಯಾರಾದ್ರೂ..ಎತ್ಕೋಂಡೋರು ಮುಡೀತಲೂ ಇದ್ದಿಲ್ಲ ಇರ್ಲಿಲ್ಲ ಅದನ್ನ . ಎಲ್ಲಾದ್ರೂ ಹಿಚಕಿ ಎಸೀತಿದ್ರು.?”

" ಅಯ್ಯೋ ? ಅಂಥವೂ ಇದಾರಾ?”

" ಯಾಕೆ - ಎಲ್ಲೂ ನಿನ್ನ ಹಾಗೇನೇ ಅಂತ ತಿಳಕೊಂಡೈನು?”

ಆಫೀಸು ರೂಮ್ನಲ್ಲಿ ಮೇಜಿನ್ಮೇಲೆ ಯಾವಾಗ್ಲೂ ಹೂದಾನಿ ಇದ್ರೆ.