ಪುಟ:Abhaya.pdf/೧೬೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೬೩
ಅಭಯ


ಯರು ಎಲ್ಲರು ಚೆನ್ನಾಗಿಯೇ ಕಾಣಿಸಬೇಕಲ್ಲವೆ ? ತಾನು ಒಳ್ಳೆಯ ಆಶ್ರಯ
ವನ್ನೇ ಪಡೆದೆನೆಂದು ತಂದೆ ಭಾವಿಸಬೇಕಲ್ಲವೆ ? ಇದೊಂದು ಹುಡುಗಿಯರ
ಕೂಡುದೊಡ್ಡಿಯೆಂದು ಆತ ಭಾವಿಸಬಾರದಲ್ಲವೆ ?
ಸರಸಮ್ಮ, ತಂದೆ - ಮಗಳ ಆ ಭೇಟಿಯನ್ನು ಕುರಿತು ಯೋಚಿಸು
ತ್ತಿರಲಿಲ್ಲ ಅವರ ಯೋಚನೆ, ಆ ಭೇಟಯನ್ನೂ ದಾಟಿ ಅನಂತರದ ಘಟನೆ
ಗಳತ್ತ ಹರಿದಿತ್ತು ...ಆ ತಂದೆ ತನ್ನ ಮಗಳನ್ನು ಇನ್ನು ಕರೆದೊಯ್ಯಬಹುದು.
ನಡೆದು ಹೋದುದರ ನೆನಪಿನಮೇಲೆ ಮರವೆಯ ಪರದೆ ಇಳಿಸಿ ಹೊಸ
ಅಧ್ಯಾಯವನ್ನು ಆರಂಭಿಸಬಹುದು....

ಸಾಮಾನ್ಯವಾಗಿ ಅಂತಹ ಸಂಭವದಿಂದ ಸರಸಮ್ಮನಿಗೆ ಸಂತೋಷ
ವಾಗಬೇಕು. ಆದರೆ ಈ ಸಲ ಮಾತ್ರ ಅದನ್ನು ನೆನೆಸಿದಾಗ ಅವರಿಗೆ ವ್ಯಥೆ
ಯಾಗುತಿತ್ತು.

ಅದೊಂದು ಸೋಜಿಗ. ಬದುಕಿನಲ್ಲಿ ಎಡವಿ ಬಿದ್ದ ತುಂಗಮ್ಮ ಅಭಯ
ಧಾಮನನ್ನು ಅರಸಿಕೊಂಡು ಬಂದ ದಿನದಿಂದಲೆ ಸರಸಮ್ಮನ ಹೃದಯವನ್ನು
ಸೂರೆಗೊಂಡಿದ್ದಳು. ಒಳ್ಳೆಯ ಗುಣವನ್ನು ಕಂಡಾಗಲೆಲ್ಲ ಬಲು ಸುಲಭ
ವಾಗಿಯೆ ಪ್ರಕಟಗೊಳ್ಳುವ ಸರಸಮ್ಮನ ಆತ್ಮೀಯತೆಯ ಒರತೆ, ತುಂಗಮ್ಮನ
ವಿಷಯದಲ್ಲಿ ಹೊನಲಾಗಿ ಹರಿದು ಆ ಎಳೆಯ ಜೀವವನ್ನು ಸುಖಿಯಾಗಿ
ಮಾಡಿತ್ತು.

ಅಂತಹ ಒಳ್ಳೆಯ ಹುಡುಗಿ ತಮ್ಮ ಬಳಿಯಲ್ಲೇ ತಮಗೆ ಬೆಂಬಲವಾಗಿ
ಇರುವುದು ಸಾಧ್ಯವಾದರೆ- ?

ಜೀವಮಾನವನ್ನೆಲ್ಲ ಈ ಪುಟ್ಟ ವೃತ್ತದೊಳಗೇ ಕಳೆ ಎಂದು ಆಕೆಗೆ
ಆಹ್ವಾನ ಕೊಡುವುದಾದರೂ ಹೇಗೆ ?

ಬರೆವಣಿಗೆಯನ್ನು ನಿಲ್ಲಿಸಿ ಸರಸಮ್ಮ, ತುಂಗಮ್ಮನನ್ನೇ ದಿಟ್ಟಿಸಿ
ನೋಡಿದರು. ತುಂಗಮ್ಮ ಉಟ್ಟಿದ್ದುದು ಸರಸಮ್ಮನ ಸೀರೆ. ತಾವು ವಿಧವೆ
ಯಾದ ಮೇಲೊಮ್ಮೆ ತಮ್ಮ ಬಾಳಿನ ಕತ್ತಲೆಯಲ್ಲಿ ಚಂದ್ರೋದಯವಾಗುತ್ತ
ದೆಂದು ಸರಸಮ್ಮ ಭಾವಿಸಿದ್ದದಿನ, ಅಂತಹದೇ ಸೀರೆಯನ್ನು ಅವರು
ಉಟ್ಟಿದ್ದರು. ಬಿಳಿಯಮೇಲೆ ನೀಲಿ ಚುಕ್ಕೆಗಳಿದ್ದ ಸಾದಾ ಸೀರೆ. ಅದರ
ಸರಳತೆಯೇ ಒಂದು ರೀತಿಯ ಸೊಬಗು ಆದರೆ ಆ ಚಂದ್ರೋದಯದ