ಪುಟ:Abhaya.pdf/೧೭೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಸರಸಮ್ಮನಿಗೆ ಗೊತ್ತಿತ್ತು.ಹುಡುಗಿಯರಿಗೂ ತಿಳಿದಿತ್ತು ಆ ವಿಷಯ.ಆಕೆ ಕಸಬಿನವಳು.ಆದರೆ ಆಕೆ ಆ ಜೀವನದಿಂದ ತಪ್ಪಿಸಿಕೊಂಡು,ಬಂದಿದ್ದಳು. ಪೋಲಿಸರು ನಡುರಾತ್ರಿಯಲ್ಲಿ ಬೀದಿಯಲ್ಲಿ ಒಬ್ಬಂಟಿಗಳಾಗಿಯೆ ಇದ್ದ ಆಕೆಯನ್ನು ಹಿಡಿದಾಗ ಪ್ರತಿಭಟನೆ ಇರಲಿಲ್ಲ ತಪ್ಪಿಸಿಕೊಂಡು ಹೋಗುವ ಯತ್ನವಿರಲಿಲ್ಲ.ಅಭಯಧಾಮಕ್ಕೆ ಸೇರಿಸಲ್ಪಟ್ಟಾಗಲಂತೂ ಆಕೆಗೆ ಸಂತೋಷವಾಗಿತ್ತು.

ಈ ನೃತ್ಯ ಕಸಬಿನ ಮನೆಯಲ್ಲಿ ಆಕೆ ಕಲಿತ ಕಲೆ.

ಝಣಕ್ ಝಣಕ್....ಜಣಿರ್ ಜಣಿರ್....‍ಐ....ಟಣಕ್ ಟಣಕ್....

ಆ ನಾದಮಾಧುರ್ಯದ ಗುಂಗಿನಲ್ಲಿ ತುಂಗಮ್ಮ ಜಲಜೆ ಲಲಿತೆಯರೆಲ್ಲ ಕುಳಿತು,ತಮ್ಮೆದುರು ನೋಡಿಬೀಸುತಿದ್ದ ಸೊಬಗಿಗೆ ಮಾರುಹೋದರು.ಮುಗುಳುನಗು,ಹುಬ್ಬುಗಳ-ಎದೆಯ ಕುಣಿತ,ಹಾವಿನಂತೆ-ಬಳ್ಳಿಯಂತೆ ಬಳುಕಿ ಬಾಗುತ್ತಿದ್ದ ದೇಹ...

ಶಾಸ್ತ್ರೀಯವಲ್ಲದ ನೃತ್ಯ ನಿಜ.ಆದರೆ ನೋಡುತಿದ್ದ ಪ್ರಿಯತಮವನ್ನು-ವಿಟನನ್ನು-ಹುಚ್ಚನಾಗಿ ಮಾಡುವ ಸಾಮರ್ಥ್ಯವಿತ್ತು ಅದಕ್ಕೆ.

ನೃತ್ಯ ನೋಡಿ ಸರಸಮ್ಮ, ಸುಮತಿಯ ಪಾದಗಳ ಚಲನೆಯನ್ನೇ ದಿಟ್ಟಿಸುತ್ತ ಕುಳಿತರು.

ಆ ಬಳಿಕ ಕುರುಡಿ ಸುಂದ್ರಾ ಹಾಡು:

"ಎಲ್ಲಿರುವೆ ರಂಗ ಬಾರೋ...."

ರಾಧಾಹಾಡಿದಳು:

"....ನಾನು ನಿಮ್ಮಯ ದಾಸನಹುದು;ನೀವು ಈ ಜಗದೀಶನಹುದು...ನಾನಿನ್ನ ದಾಸನಯ್ಯ...."

ಮತ್ತೆ ಸುಮತಿಯ ಬೇಟೆಗಾತಿಯ ಕುಣಿತ....

ಬೇಟೆಗಾರನಿರಲಿಲ್ಲ...ಅದರೆ ಸುಮತಿ ಲಲಿತೆಯತ್ತ ಕುಡಿನೋಟ ಬೀರುತ್ತಿದ್ದಳು.ಲಲಿತ ನಿಶ್ಚಲಳಾಗಿದ್ದಳು.ಆದರೆ ಅದನ್ನು ನೋಡಿದ ಬೇರೆ ಹುಡುಗಿಯರು ಹಲವರ ಮುಖಗಳು ಕೆಂಪಗಾದವು.

ಕೊನೆಯದಾಗಿ ಸುಮತಿ ಕೃಷ್ಣನಾಗಿ ಕುಣಿದಳು...ಕೊಳಲನೂದುವ