ಪುಟ:Abhaya.pdf/೧೭೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾತು ಬಾರದೆ ಮೂಕನಾಗಿ ಕುಳಿತ ತಂದೆ, ಪ್ರೀತಿಯ ನೆಟ್ಟ ದೃಷ್ಟಿ ಯಿಂದ ಅಕ್ಕನನ್ನೆ ನೋಡುತಲಿದ್ದ ತಮ್ಮ, ಕಣ್ಣುಗಳಿ೦ದ ಗ೦ಗೆ ಯಮುನೆಯರನ್ನು ಹರಿಯಗೊಟ್ಟು ಕಾಲಿನಿಂದ ನೆಲಕೆರೆಯುತ್ತಾ ನಿಂತ ತುಂಗಮ್ಮ....
ಇದು ಹೊಸನೋಟವಾಗಿರಲಿಲ್ಲ ಸರಸಮ್ಮನಿಗೆ ಅಂತಹ ಸಂದರ್ಭ ಗಳಲ್ಲಿ ಹೇಗೆ ವರ್ತಿಸಬೇಕೆಂಬುದನ್ನೂ ಅವರು ತಿಳಿದಿದ್ದರು.
ತಂದೆ ಮಗಳನ್ನು ಅವರ ವಾಡಿಗೆ ಬಿಟ್ಟು ಸರಸಮ್ಮ ತಮ್ಮ ಕೊಠಡಿ ಯಿಂದ ಹೊರಹೋದರು.
"ಚೆನ್ನಾಗಿದೀಯಾ ಮಗು ?”
"ಹೂಂ ಅಣ್ಣ.”
“ ಕಾಹಿಲೆ ಕಸಾಲೆ ಏನೂ ಇಲ್ವಾ ?”
"ಇಲ್ಲ ಅಣ್ಣ....ದೊಡ್ಡಮ್ಮ ಚೆನ್ನಾಗೇ ನೋಡ್ಕೊಂಡ್ರು."
ತಂದೆಗಾಗಲೇ ಎಲ್ಲವನ್ನೂ ವಿವರಿಸಿ ಸರಸಮ್ಮ ಕಾಗದ ಬರೆದಿದ್ದರು.ತಂದೆ ವಹಿಸಿದ ಮುನ್ನೆಚ್ಚರಿಕೆಯಿಂದಾಗ ತುಂಗಮ್ಮನ ತಮ್ಮನಿಗೆ ವಿವರವೊಂದೂ ತಿಳಿದಿರಲಿಲ್ಲ. ಏನೋ ಆಗಿದೆ. ನಾರಾಯಣಮೂರ್ತಿ ಹೊರಟುಹೋದುದರಿಂದ ಅಕ್ಕನಿಗೆ ದುಃಖವಾಗಿದೆ. ಅವಳ ಮನಸ್ಸು ಕಹಿ ಯಾಗಿದೆ ಅದಕ್ಕಾಗಿಯೆ, ಬೆಳ ಗಾ ೦ ವಿಗೆ ಎಂದು ಹೊರಟಿದ್ದವಳು ಬೆಂಗಳೂರು ಬಂದು ಸೇರಿದ್ದಾಳೆ. ಇದು ಹಾಸ್ಟೆಲು....” ಎಂದಷ್ಟೆ ಆತ ಭಾವಿಸಿದ್ದ.
"ಪದ್ದಕ್ಕ ಕಾಗ್ಧ ಬರೆದಿದ್ಲಾ ಅಣ್ಣ ?"
"ಹೂ ತುಂಗ.”
"ಅಕ್ಕನಿಗೆ ಗೊತ್ತಾ ಅಣ್ಣ ?”