ತಮ್ಮ ಬಳಿಯಲ್ಲೆ ಕುಳಿತಿದ್ದ ಮಗನನ್ನೆ ನೋಡುತ್ತ ತಂದೆಯಂದರು:
"ಇಲ್ಲವಮ್ಮ ನಿನ್ನ ಕಾಹಿಲೆ ವಿಷಯ ನದ್ದೂಗೆ ಬರೀಲೆ ಇಲ್ಲ ಜೂನ್ ತಿಂಗಳಲ್ಲಿ ನಾನೇ ಹೋಗೋಣಾಂತಿದೀನಿ....."
ತನ್ನ ಈ ಅಕ್ಕ ಕಾಹಿಲೆ ಮಲಗಿದ್ದಳು ಹಾಗಾದರೆ ಎಂದುಕೊಂಡು ತಮ್ಮ ಗುಣಮುಖಳಾಗಿದ್ದ ಆಕೆಯನ್ನು ಮುಟ್ಟಿ ನೋಡುವ ಆಸೆಯಾಯಿತು ಅವನಿಗೆ.
"ರಿಟೈರಾಯ್ತಲ್ಲಣ್ಣ? ಇನ್ನೇನ್ಮಾಡ್ಬೇಕೂಂತಿದೀರಾ?"
ಆ ಪ್ರಶ್ನೆಯನ್ನು ತಾವೇ ಮಗಳಿಗೆ ಕೇಳಬೇಕೆಂದು ಆ ತಂದೆ ಬಂದಿದ್ದರು. ಆದರೆ, ತಮಗಿಂತ ಮುಂದಾಗಿ ಮಗಳೇ ಅದನ್ನು ಕೇಳಿದ್ದಳು.
ಆದರೆ ಆ ಪ್ರಶ್ನೆಗೆ ನೇರವಾದ ಉತ್ತರವನ್ನೀಯುವುದು ಸುಲಭವಾಗಿರಲಿಲ್ಲ.
"ತುಮಕೂರು ಬಿಟ್ಬಿಡೋಣ್ವೇ ತುಂಗ?"
ತುಂಗಮ್ಮನಿಗೆ ತಿಳಿದಿತ್ತು. ತನ್ನಿಂದಾಗಿಯೇ ಆ ತೀಮಾನಕ್ಕೆ ತಂದೆ ಬಂದಿದ್ದರು.ಅದರಲ್ಲಿ ಸಂದೇಹವಿರಲಿಲ್ಲ.
ಆ ತಮ್ಮನಿಗೋ-ಅದು ಆಶ್ಚರ್ಯವನ್ನುಂಟುಮಾಡಿದ ಹೊಸ ವಿಷಯ. ಆಗಲೆ ಅವನ ಮನಸ್ಸು, ತುಮಕೂರನ್ನು ಬಿಟ್ಟು ಮುಂದೆ ತಾವು ಹೋಗಲಿರುವ ಊರನ್ನು ಚಿತ್ರಿಸಿಕೊಳ್ಳತೊಡಗಿತು.
"ಯಾಕಣ್ಣ ?"
"ಯಾಕೊ ಬೇಜಾರು. ರಿಟೈರಾದಮೇಲೆ ಆ ಊರಲ್ಲಿ ಇರೋಕೆ ಇಷ್ಟವಿಲ್ಲ."
ಆ ಮಾತಿನಲ್ಲಿ ಸ್ವಲ್ಪ ಸತ್ಯಾಂಶವೂ ಇತ್ತು. ಆದರೆ ಅದು ಬಲು ಸ್ವಲ್ಪ. ನಿಜವಾದ ಕಾರಣವನ್ನು ಅವರು ಹೇಳಲಿಲ್ಲ. ಆದರೆ, ಅವರು ಹೇಳದೆ ಇದ್ದರು, ತುಂಗಮ್ಮ ತಿಳಿದುಕೊಂಡಳು.
"ತುಮಕೂರು ಬಿಟ್ಟು ಎಲ್ಲಿರೋದೂಂತ ?
"ಯಾವುದಾದರೂ ಒಂದೂರಲ್ಲಿ. ಅಂತೂ ಪುಟಾಣಿ ಓದಿಗೆ ಅನುಕೂಲವಾಗೋ ಹಾಗೆ ಹೈಸ್ಕೂಲು ಇದ್ದರಾಯಿತು."
"ಬೆಲಗಾಂವಿಗೆ ಹೋಗಿ ಪದ್ದಕ್ಕನ ಮನೇಲಿ ಇರ್‍ತೀರಾ ?"
ಪುಟ:Abhaya.pdf/೧೭೯
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
