ಪುಟ:Abhaya.pdf/೧೮೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೨೫
ಅಭಯ


ತಾನು ಪ್ರಾಯಶಃ ಬರಲಾಗುವುದಿಲ್ಲವೆಂಬ ಭಾವನೆ ತುಂಗಮ್ಮನ
ಮನಸ್ಸಿನಲ್ಲಿಯೆ ಆ ವರೆಗೆ ಉಳಿದಿದ್ದುದು, ಮಾತಿನ ರೂಪತಳೆದು ಹೊರ
ಬಿತ್ತು. ಅದನ್ನು ಕೇಳಿ ತಂದೆಯ ಹಣೆ ನೆರಿಗೆ ಕಟ್ಟಿತು.
"ನೀನು?"
ತುಂಗಮ್ಮ ಆ ವಿಷಯವಾಗಿ ಕೊನೆಯ ತೀರ್ಮಾನಕ್ಕೇನೂ ಬಂದಿರ
ಲಿಲ್ಲ. ತಾವಾಗಿಯೇ ಯಾವ ಸಲಹೆಯನ್ನೂ ಕೊಟ್ಟಿರಲಿಲ್ಲ ಸರಸಮ್ಮ.
ಜ ಲ ಜ ಕೇಳಿದಾಗ, "ನನ್ತುಂದೆ ಬರಲಿ....ಆಮೇಲೆ ನೋಡಿಕೊಂಡ
ರಾಯಿತು,” ಎಂದಿದ್ದಳು. ಈಗ ತಂದೆ ಬಂದಿದ್ದರು. ಆಕೆಯ ಮನಸ್ಸಿನ
ಆಳದಲ್ಲಿ ಹುದುಗಿದ್ದ ಹೊಸ ಆಸೆಗಳು ಮಾತಿನ ಉಡುಗೆ ತೊಟ್ಟು ಹೊರ
ಬರಲು ಧಾವಿಸುತ್ತಿದ್ದುವು. ಇಷ್ಟುದಿನ ನಿರೀಕ್ಷಿಸಿಯೇ ಇದ್ದ ಪ್ರಶ್ನೆಯೂ
ಬಂದಿತ್ತು.
ಉತ್ತರ ಥಟ್ಟನೆ ಬರಲಿಲ್ಲ. ಮಾತುಗಳು ನಿಧಾನವಾಗಿ ತಡೆ ತಡೆದು
ಬ೦ದುವು.
"ಅಣ್ಣಯ್ಯ, ನೀವೇನೂ ಭಾವಿಸ್ಕೂಡ್ದು ನಾನು ಬರೋಲ್ಲ....”
"ತುಂಗ !”
"ಹೂಂ ಅಣ್ಣಯ್ಯ. ನಾನೂ ಏನಾದರೂ ಕೆಲ್ಸಕ್ಕೆ ಸೇರ್‍ತೀನಿ.”
"ಕೆಲಸ !”
"ಹೂಂ. ಕೆಲಸಕ್ಕೆ. ಅದರಲ್ಲಿ ತಪ್ಪೇನಣ್ಣ ?”
"ತಪ್ಪೇನೂಂತ ನನ್ನ ಯಾಕ್ಮಗು ಕೇಳ್ತೀಯಾ ?”
ಆ ಪ್ರಶ್ನೆಯ ಹಿಂದೆ, ಬೇಡ ಬೇಡವೆಂದರೂ, ಕಟುವಾದ ವ್ಯಂಗ್ಯ
ಅಸ್ಪಷ್ಟವಾಗಿ ತನ್ನ ಮೂತಿ ತೋರಿಸಿತ್ತು. ಹಿಂದೆ, ತನ್ನ ಕಾಲಮೇಲೆ
ತಾನೇ ಕಲ್ಲು ಹೇರಿಕೊಂಡಾಗ, ತಪ್ಪೇನು ಅದರಲ್ಲಿ ಎಂದು ಆ ಮಗಳು
ಕೇಳಿದ್ದಳೆ ?
ನೆನಪಿನ ವಿಕಾರವಾದ ಚೇಳು, ತನ್ನ ವಿಷಕೊಂಡಿಯಿಂದ ತುಂಗಮ್ಮ
ನಿಗೆ ಬಲವಾಗಿ ಕುಟುಕಿ, ಮೈ ಉರಿಯುವಂತೆ ಮಾಡಿತು. ಮಾತಿನ ಎಡೆ
ಯಲ್ಲಿ ಮರೆಯಾಗಿದ್ದ ಕಣ್ಣೀರು ಮತ್ತೆ ಮುಖ ತೋರಿಸಿತು.
ಕಂಪಿಸುವ ಧ್ವನಿಯಲ್ಲಿ ತಂದೆ ಹೇಳಿದರು :