ಪುಟ:Abhaya.pdf/೧೮೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
ಅಭಯ
೧೭೭

"ಇನ್ನೆಂಥ ನಿರಾಶೆಯಣ್ಣ?ನನಗೆ ಇನ್ನೇನಣ್ಣ ಆಗ್ಬೇಕಾಗಿದೆ?"
ಆ ಮಾತಿಗೆ ಉತ್ತರ ಕೊಡುವುದು ಸಾಧ್ಯವಿತ್ತು? ಉತ್ತರ
ವಾದರೂ ಏನಾದರೂ ಇತ್ತೆ?
ತಂದೆ ಸಹಾಯಕ್ಕೆಂದು ಮಗನತ್ತ ತಿರುಗಿದರು:
"ನೋಡು ಪುಟಾಣಿ....ನಿನ್ನಕ್ಕ ನಮ್ಜತೇಲಿ ಬರೋಲ್ವಂತೆ."
"ಬರೊಲ್ವೆ ಅಕ್ಕ?"
ತುಂಗ ಉತ್ತರವೀಯಲಿಲ್ಲ.ತಂದಯೇ ಹೇಳಿದರು:
"ಇನ್ನು ನಿನ್ನಕ್ಕ ನಮ್ಮನ್ನ ಬಿಟ್ಬಟ್ಟು ಇಲ್ಲೇ ಇರುತಾಳಂತೆ"
ವ್ಯಧೆಯಿಂದ ತಂದೆಯ ಧ್ವನಿ ನಡುಗುತಿತ್ತು.ಮಗನ ಕಣ್ಣುಗಳು
ಸಜಲವಾದುವು.
"ಹಾಗಾದರೆ ನಾವೂ ಇಲ್ಲೇ ಇದ್ಬಿಡೋಣ್ವೆ ಅಣ್ಣ?"
ಎಂತಹ ಪರಿಹಾರ!
ಮೌನವಾಗಿಯೆ ದುಃಖದ ಉಗುಳು ನುಂಗುತ್ತ ತಂದೆ ತಮ್ಮ ಹುಬ್ಬುಗಳ ಮೇಲೆ ಬೆರಳೋಡಿಸಿದರು.
ಆ ಮೂವರೂ ಉಸಿರಾಡುವುದು ಕಷ್ಟವಾದಂತಹ ಯಾತನೆಯ
ಸನ್ನಿವೇಶ....
ಸರಸಮ್ಮ ಬಾಗಿಲಿನತ್ತ ಸುಳಿದಿದ್ದರು.ಆಷ್ಟರೊಳಗೆ ಆಗಲೇ ಹೊರಡುವ ತೀರ್ಮಾನ ಮಾಡಿ, ತಂದೆ-ಮಗಳು ತಮ್ಮ
ಹಾದಿ ನೋಡುತ್ತಿರ
ಬಹುದು ಎಂದುಕೊಂಡಿದ್ದರು ಆಕೆ.ತುಂಗಮ್ಮನನ್ನು ಮಧ್ಯಾಹ್ನದ
ಊಟಕ್ಕೆ ನಿಲ್ಲಿಸಿಕೊಳ್ಳಬೇಕು; ಬೀಳ್ಕೊಡುವ ಸಮಾರಂಭಕ್ಕಾಗಿ ವಿಶೇಷ
ಅಡುಗೆ ಮಾಡಿಸಬೇಕು;-ಎಂದು ಅವರು ಭಾವಿಸಿಕೊಂಡಿನದ್ದರು....ಆದರೆ
ಇಲ್ಲಿ ಆಕೆ ಕಂಡ ದೃಶ್ಯ ನಿರೀಕ್ಷಿಸಿದ್ದುದಕ್ಕಿಂತ ಭಿನ್ನವಾಗಿತ್ತು.
ಸರಸಮ್ಮ ಒಳಬಂದುದನ್ನು ಕಂಡು ಎಲ್ಲರಿಗೂ ಒಂದು ರೀತಿಯ
ಸಮಾಧಾನವಾಯಿತು.ಆದರೆ ಅವರೆಲ್ಲರನ್ನೂ ನೋಡಿ ಅ ಣ ಕಿ ಸಿ ತು.
ವಿಜಯಿಯಾಗಿದ್ದ ಮೌನ.
ಹೀಗೆ ದುರ್ಬಲ ಮನಸಿನಿಂದ ವರ್ತಿಸುವುದು ನಿವ್ರುತ್ತ ಹೈಸ್ಕೂಲು
12