ಅಭಯ ೧೭೯
ತುಂಗಮ್ಮನ ತಂದೆಗೆ ಅಶ್ಚರ್ಯವಾಯಿತು. ಮಾತಿನಲ್ಲಿ ಆ ದೃಢತೆ, ದಿಟ್ಟತನ.... ಮಗಳೇ ಅಲ್ಲವೆ ಹಾಗೆ ಅಂದದ್ದು?...ತನಗೂ ಇರದ, ಆಕೆಯ ತಾಯಿಗೂ ಇರದೆ, ಗುಣಿವಿತ್ತು ಅವಳಲ್ಲಿ ಹಿಂದೆ ತಾನೇ ಎತ್ತಿ ಆಡಿದ್ದ, ವಾಲಿಸಿ ಪೋಷಿಸಿದ, ಲಂಗ ಉಡಿಸಿ ದೊಡ್ಡವಳಾಗಿ ಮಾಡಿದ, ಹುಡುಗಿಯೇ ಏನು ಈಕೆ ?....
ಹಾಗೆ ಯೋಚನೆಯಲ್ಲೆ ತನ್ಮಯರಾದ ಆ ಒಂದು ಕ್ಷಣ ಅವರ ಮನಸ್ಸು ತಿಳಿಯಾಯಿತು ಎಲ್ಲ ಸಮಸ್ಯೆಗಳೂ ಒಮ್ಮೆಲೆ ಬಗೆಹರಿದಂತೆ ಅವರ ಮೆದುಳು ಹಗುರವಾಯಿತು.
" ಸರಿ, ಅವಳಿಷ್ಟ ಹಾಗಾದರೆ"
ಸರಸಮ್ಮ, ತಮ್ಮನ್ನು ತಾವೇ ನಂಬದವರ ಹಾಗೆ, ಪಿಳಿಪಿಳಿ ಕಣ್ಣು ಬಿಟ್ಟರು. ತಂದೆಯ ಆಗ್ರಹ, ಮಗಳ ಪ್ರತಿಭಟನೆ, ರಾದ್ದಾಂತ, ಸಮಿತಿಗೆ ದೂರು... ಹೀಗೆ ಏನೇನನ್ನೊ ಅವರು ನಿರೀಕ್ಷಿಸಿದ್ದರು. ಇದೊಂದು ಸಾರಿ ಅನರ ಒಂದು ನಿರೀಕ್ಷೆಯೂ ಸರಿಹೋಗಲಿಲ್ಲ.
“ ನೀವೇನೂ ಚಿಂತಿಸ್ಬೇಡಿ ಸಾರ್, ನಿಮ್ಮ ಮಗಳ ಜವಾಬ್ದಾರಿ ನನ್ಕೇಲಿರ್‍ಲಿ....ನ ನ ಗ್ಯಾ ರೂ ಮಕ್ಕಳಿಲ್ಲ. ನನ್ನ ಮಗಳು ಅಂತಾನೇ ನೋಡ್ಕೋತೀನಿ."
ಹೃದಯದ ಆಳದಿಂದ ಆ ಮಾತುಗಳು ಹೊರಟಿದ್ದುವು. ಕೇಳುತಿದ್ದವರ ಮೇಲೆ ನಿರೀಕ್ಷಿಸಿದ ವರಿಣಾಮವೂ ಆಗದಿರಲಿಲ್ಲ
ಕೃತಜ್ಞತೆ ಸೂಚಿಸುವ ಕಣ್ಣುಗಳಿಂದ ತುಂಗಮ್ಮ ತನ್ನ ದೊಡ್ಡಮ್ಮ ನನ್ನು ನೋಡಿದಳು.
ಸರಸಮ್ಮನೆಂದರು :
« ತುಂಗಾ ನಿನ್ನ ತಮ್ಮನ್ನ ಕರಕೊಂಡು, ಒಳಗೆಲ್ಲಾ ತೋರಿಸ್ಬಿಟ್ಟು ಬಾರಮ್ಮ.
ತುಂಗಮ್ಮ ಸೆರಗಿನಿಂದ ಕಣ್ಣೊರೆಸಿಕೊಂಡು, ತಮ್ಮನ ಕೈ ಹಿಡಿದು, ತಾನೂ ಎಳೆಯ ಮಗುವಾಗಿ, ಹೊರಗೆ ತನ್ನ ಗೆಳತಿಯರತ್ತ ಹೋದಳು.
....ವಯಸ್ಸಾದವರಿಬ್ಬರು ಯಾವ ಮುಚ್ಚುಮರೆಯೂ ಇಲ್ಲದೆ
ಪರಸ್ಪರರೊಡನೆ ಮಾತನಾಡುವುದು ಕಷ್ಟವಾಗಲಿಲ್ಲ.... ಲೋಕಾಭಿರಾಮ