೧೮೨ ಅಭಯ
ಕೊಡಿಸ್ತಿನಿ... ಈಗ ಎಲ್ಲಾ ಹುಡುಗೀರ್‍ನೂ ಒಂದೇ ಗುಂಪು ಮಾಡಿರೋದ್ರಿಂದ ಕಲ್ಸೋಕೂ ತೊಂದರೆಯಾಗಿದೆ."
“ ಓ! ತುಂಗನಿಂದ ಆ ಕೆಲಸ ಆದೀತು ಅಂತೀರಾ?
" ಯಾಕೆ? ನೀವೇನೂಂತ ತಿಳಿದಿದೀರಿ ನಿಮ್ಮ ಮಗಳ್ನ? ಅಕೆತುಂಬಾ ಬುದ್ದಿವಂತೆ ಕಣ್ರೀ..."
ಅಂತಹ ವಾತಾವರಣದಲ್ಲೂ ಆ ಹೊಗಳಿಕೆ ಉಪಾಧ್ಯಾಯರಿಗೆ ಹಿತಕರವಾಗಿ ತೋರಿತು
ಅಷ್ಟರಲ್ಲೆ, ತನ್ನ ತಮ್ಮನೊಡನೆ ತುಂಗಮ್ಮ ಬಂದಳು "ಎಲ್ಲಾ ನೋಡಿದ್ಯೇನಪ್ಪ?" __ಎಂದರು ಸರಸಮ್ಮ ಹುಡುಗನನ್ನು ಉದ್ದೇಶಿಸಿ "ಹೂಂ" ಎಂದನಾತ ಬಲು ಸಂಕೋಚದಿಂದ ಆದರೆ ತಂದೆಯತ್ತ ತಿರುಗಿ ಹೇಳಿದೆ :
ಇಲ್ಲಿ ಕ್ಲಾಸ್ ಮಾಡ್ತಾರಂತಣ್ಣ ಇನ್ನು ಸ್ವಲ್ಪ ಹೊತ್ತಲ್ಲೇ ಷುರು
ವಾಗುತ್ತಂತೆ. ಟೀಚರ್ ಬರ್‍ತಾರಂತೆ
" ಇನ್ನು ನಿಮ್ಮಕ್ಕನೂ ಮೊದಲ್ನೇಕ್ಲಾಸಿಗೆ ಪಾರ ಹೇಳ್ಕೊಡ್ತಾ ಳಂತಪ್ಪ!”
__ಎಂದರು ಸರಸಮ್ಮ
ತುಂಗಮ್ಮ ಅವಾಕ್ಕಾಗಿ, ತಂದೆಯ ಮತ್ತು ದೊಡ್ಡಮ್ಮನ ಮುಖ ನೋಡಿದಳು. ಹುಡುಗ ಬೆರಗಾಗಿ ಎಲ್ಲರನ್ನೂ ದಿಟ್ಟಿಸಿದ.
" ಅಕ್ಕ ನಂಗೆ ಹೇಳ್ಲೇ ಇಲ್ಲ... ಹೌದೇನೆ?
ತಂದೆ ಮಗನೆ ನೆರವಿಗೆ ಬಂದರು
“ ಹೂಂ ಪುಟಾಣಿ.... ಇನ್ನು ನಿನ್ನಕ್ಕ ಟೀಚರ್ ಕೆಲಸ ಮಾಡ್ತಾಳೆ.”
"ಓ!"
__ಎಂದ ಆ ಹುಡುಗ, ನಗುತ್ತ, ಹೆಲ್ಲು ಕಿಸಿದು.
ಮುಂಜಾವದ ಗಾಡಿಗೆ ಬಂದಿದ್ದವರೇ ತಂದೆ ಮತ್ತು ಮಗ, ರೈಲು